ತಾಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಈಶ ಫೌಂಡೇಶನ್ ಆವರಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ಈಶ ಗ್ರಾಮೋತ್ಸವದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟಿ ಶ್ರೀನಿಧಿಶೆಟ್ಟಿ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.
ಚಿಕ್ಕಬಳ್ಳಾಪುರ (ಡಿ.19): ತಾಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಈಶ ಫೌಂಡೇಶನ್ ಆವರಣದಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ಈಶ ಗ್ರಾಮೋತ್ಸವದಲ್ಲಿ ಕೆಜಿಎಫ್ ಸಿನಿಮಾ ಖ್ಯಾತಿಯ ನಟಿ ಶ್ರೀನಿಧಿಶೆಟ್ಟಿ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಸದ್ಗುರು ಸನ್ನಿಧಾನಕ್ಕೆ ಬಂದು ಭಾಗವಹಿಸಿದರೆ ಪಾಸಿಟಿವ್ ಎನರ್ಜಿ ಬರಲಿದೆ. ಮನಸ್ಸು ಪ್ರಪುಲ್ಲವಾಗಲಿದೆ. ಚಿಕ್ಕಬಳ್ಳಾಪುರ ಈಶ ಕೇಂದ್ರದಲ್ಲಿ ಇದು ಎರಡನೇ ವರ್ಷದ ಗ್ರಾಮೀಣ ಕ್ರೀಡೋತ್ಸವ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತಂಡಗಳು ವಯಸ್ಸಿನ ಅಂತರ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸಿವೆ ಎಂದರು.
ಗ್ರಾಮೀಣರ ಆಟದ ಸೊಗಸು: ಜನತೆ ತಮ್ಮ ಕೆಲಸಗಳಿಗೆ ಬಿಡುವು ನೀಡಿ ಈ ಗ್ರಾಮೀಣ ಪ್ರದೇಶದಲ್ಲಿ ಆಡುವ ಆಟೋಟಗಳಲ್ಲಿ ಸಂತೋಷದಿಂದ ಭಾಗವಹಿಸಿದ್ದಾರೆ. ಇದನ್ನು ನೋಡುವುದೇ ಒಂದು ಆನಂದ. ಈ ಬಾರಿ ಮಹಿಳಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಇಲ್ಲಿ ಗೆದ್ದ ತಂಡಗಳು ಕೊಯಮುತ್ತೂರಿನಲ್ಲಿ ನಡೆಯುವ ಕ್ರೀಡೋತ್ಸವದಲ್ಲಿ ಭಾಗಿಯಾಗುತ್ತವೆ ಎಂದರು. ಈಶ ಗ್ರಾಮೀಣ ಕ್ರೀಡೋತ್ಸವ ಹತ್ತು ಹಲವು ವಿಶೇಷಗಳನ್ನು ಒಳಗೊಂಡಿದೆ. ಇಲ್ಲಿ ಭಾಗವಹಿಸುವ ಮಂದಿ ತಮ್ಮ ದಿನನಿತ್ಯದ ಕೆಲಸದ ಒತ್ತಡಗಳನ್ನು ಮೀರಿ ತಮ್ಮಿಷ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭಾ ಪ್ರದರ್ಶನ ತೋರುತ್ತಾರೆ. ಆ ಮೂಲಕ ಕ್ರೀಡೆಗೆ ವಯಸ್ಸಾಗಲಿ ಕುಲ ಗೋತ್ರಗಳ ಹಂಗಾಗಲಿ ಯಾವುದು ಇಲ್ಲ ಎಂದರು.
undefined
ಆಟದಲ್ಲಿ ತೋರುವ ಉತ್ಸಾಹವೆ ಮುಖ್ಯ ಎಂಬುದನ್ನು ನಾವು ಮನಗಣಬಹುದು. ಈಶ ಕೇಂದ್ರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ವಿಶ್ವಮಾನವ ಸಂದೇಶವನ್ನೇ ಸಾರುತ್ತಿದೆ. ಇಂತಹ ಕಡೆ ಬಂದು ಹೋಗುವುದು ನನ್ನ ಬದುಕಿನಲ್ಲಿ ಅತ್ಯಂತ ಮುಖ್ಯವಾದ ದಿನಚರಿಯಾಗಿದೆ ಎಂದರು. ಹುಣ್ಣಿಮೆ ದಿನವಾದ ಭಾನುವಾರ ಈಶ ಕೇಂದ್ರದಲ್ಲಿ ಜನ ಜಾತ್ರೆಯೇ ಸೇರಿತ್ತು. ಒಂದೆಡೆ ಗ್ರಾಮೀಣ ಕ್ರೀಡೋತ್ಸವ ಮತ್ತೊಂದೆಡೆ ನಾಗಮಂಟಪದ ನಾಗರಾಜನ ದರ್ಶನ,112 ಅಡಿಯ ಧ್ಯಾನಸ್ಥ ಈಶ ಮೂರ್ತಿಯ ದಿವ್ಯದರ್ಶನಕ್ಕೆ ಪ್ರವಾಸಿಗರು ಮುಗಿಬಿದ್ದಿದ್ದರು.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಹೊಸತನಗಳು: ಸಚಿವ ಚಲುವರಾಯಸ್ವಾಮಿ
ನಾಣಿ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ: ತೆಲುಗಿನ ಸೂಪರ್‌ಹಿಟ್ ಸೀರೀಸ್ ಆಗಿರುವ ‘ಹಿಟ್ 3’ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಾಣಿ ಟೆರರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಕೆಜಿಎಫ್ ನಾಯಕಿ ಮಹತ್ವದ ಭಾಗವಾಗಿದ್ದಾರೆ. ಡಾ.ಶೈಲೇಶ್ ಕೊಲನು ನಿರ್ದೇಶನದ ಈ ಚಿತ್ರದಲ್ಲಿ ಆಯ್ಕೆಯಾಗಿರುವ ಕುರಿತು ಶ್ರೀನಿಧಿ ಶೆಟ್ಟಿ, ‘ಈ ಸಿನಿಮಾದ ಪಾತ್ರವಾಗಿರುವುದಕ್ಕೆ ಥ್ರಿಲ್ ಆಗಿದ್ದೇನೆ’ ಎಂದು ಹೇಳಿದ್ದಾರೆ.