ಸರ್ಜರಿ ಮುಂದೂಡಿ ಸುಮಲತಾ ಸಭೆಗೆ ಬಂದ ದರ್ಶನ್‌, ಯಮ ಕರೆದ್ರೂ ಅಮ್ಮನ ಕೆಲಸ ಮುಗಿಸಿ ಬರ್ತೀನಿ ಎಂದ ನಟ..!

Published : Apr 04, 2024, 06:13 AM IST
ಸರ್ಜರಿ ಮುಂದೂಡಿ ಸುಮಲತಾ ಸಭೆಗೆ ಬಂದ ದರ್ಶನ್‌, ಯಮ ಕರೆದ್ರೂ ಅಮ್ಮನ ಕೆಲಸ ಮುಗಿಸಿ ಬರ್ತೀನಿ ಎಂದ ನಟ..!

ಸಾರಾಂಶ

ಕಳೆದ ಬಾರಿ ಬಲಗೈ ಮುರಿದಿತ್ತು. ಈಗ ಎಡಗೈಗೆ ಫ್ರಾಕ್ಚರ್ ಆಗಿದೆ. ನಿನ್ನೆ ಆಪರೇಷನ್ ಇತ್ತು. ಇಲ್ಲಪ್ಪ... ಅಮ್ಮನಿಗೆ ಡೇಟ್ ಕೊಟ್ಟಿದ್ದೇನೆ. ಇವತ್ತು ಅಮ್ಮನ ಕೆಲಸವಿದೆ. ಇವತ್ತು ಮುಗಿಸಿಕೊಂಡು ರಾತ್ರಿ ಅಡ್ಮಿಟ್ ಆಗಿ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ ಎಂದು ಡಾಕ್ಟರ್‌ಗೆ ತಿಳಿಸಿ ಬಂದಿರುವೆ ಎಂದ ನಟ ದರ್ಶನ್ 

ಮಂಡ್ಯ(ಏ.04):  ಅಮ್ಮ (ಸುಮಲತಾ) ರಾಜಕೀಯವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧನಿದ್ದೇನೆ ಎಂದು ನಟ ದರ್ಶನ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿ, ಕಳೆದ ಬಾರಿ ಬಲಗೈ ಮುರಿದಿತ್ತು. ಈಗ ಎಡಗೈಗೆ ಫ್ರಾಕ್ಚರ್ ಆಗಿದೆ. ನಿನ್ನೆ ಆಪರೇಷನ್ ಇತ್ತು. ಇಲ್ಲಪ್ಪ... ಅಮ್ಮನಿಗೆ ಡೇಟ್ ಕೊಟ್ಟಿದ್ದೇನೆ. ಇವತ್ತು ಅಮ್ಮನ ಕೆಲಸವಿದೆ. ಇವತ್ತು ಮುಗಿಸಿಕೊಂಡು ರಾತ್ರಿ ಅಡ್ಮಿಟ್ ಆಗಿ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುತ್ತೇನೆ ಎಂದು ಡಾಕ್ಟರ್‌ಗೆ ತಿಳಿಸಿ ಬಂದಿರುವೆ ಎಂದರು.

ಡಿ-ಬಾಸ್‌ ಫೋಟೋ ಬಳಸಿ ನೆಗೆಟಿವ್ ಕಾಮೆಂಟ್; ಕರ್ಮದ ಏಟು ತಪ್ಪಿಲ್ಲ ಎಂದು ಟಾಂಗ್ ಕೊಟ್ಟ ಧನ್ವೀರ್!

ಆ ಯಮನೇ ಬಂದು ನನ್ನನ್ನು ಕರೆದರೂ ಇರಪ್ಪ.. ನನ್ನ ಅಮ್ಮನದು ಒಂದೇ ಒಂದು ಕೆಲಸ ಇದೆ. ಅದನ್ನು ಮುಗಿಸಿ ಬರುತ್ತೇನೆ ಎಂದು ಹೇಳುತ್ತೇನೆ. ಏಕೆಂದರೆ, ಆ ಮನೆಗೂ, ನಮಗೂ ಅಷ್ಟೊಂದು ಬಾಂಧವ್ಯವಿದೆ ಎಂದರು. ಪಕ್ಷೇತರ ಸಂಸದೆಯಾಗಿ ಇಷ್ಟೆಲ್ಲಾ ಕೆಲಸ ಮಾಡಿರೋದು ದೊಡ್ಡದು. ರಾಜಕೀಯವಾಗಿ ನನಗೆ ಅಷ್ಟೊಂದು ಜ್ಞಾನವಿಲ್ಲ. ಅಮ್ಮ ಏನು ನಿರ್ಧಾರ ಕೈಗೊಳ್ಳುವರೋ ಅದರಂತೆ ನಾವೂ ನಡೆಯುತ್ತೇವೆ. ತಾಯಿ ಯಾವತ್ತಿದ್ದರೂ ತಾಯಿನೇ. ನಾವು ಆ ಮನೆಯ ಮಕ್ಕಳು. ಅಮ್ಮ ಹೇಳುವ ಮಾತನ್ನು ಕೇಳುವುದಷ್ಟೇ ನಮ್ಮ ಕೆಲಸ ಎಂದರು.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!