ಬೆಂಕಿ ಪೊಟ್ಟಣ ತುಂಬಿದ್ದ ಲಾರಿಗೆ ಬೆಂಕಿ: ಧಗ ಧಗನೇ ಹೊತ್ತಿ ಉರಿದ ಟ್ರಕ್

Kannadaprabha News   | Asianet News
Published : Feb 23, 2020, 12:30 PM IST
ಬೆಂಕಿ ಪೊಟ್ಟಣ ತುಂಬಿದ್ದ ಲಾರಿಗೆ ಬೆಂಕಿ: ಧಗ ಧಗನೇ  ಹೊತ್ತಿ ಉರಿದ ಟ್ರಕ್

ಸಾರಾಂಶ

ಬೆಂಕಿ ಪೊಟ್ಟಣ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ| ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ನಡೆದ ಘಟನೆ| ತಮಿಳುನಾಡಿನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬೆಂಕಿ ಪಟ್ಟಣ ಸಾಗಿಸುತ್ತಿದ್ದ ಲಾರಿ|

ವಿಜಯಪುರ(ಫೆ.23): ಬೆಂಕಿ ಪೊಟ್ಟಣ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕ್ಷಣಾರ್ಧದಲ್ಲಿಯೇ ಹೊತ್ತಿ ಉರಿದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶನಿ​ವಾರ ಬೆಳಗಿನ ಜಾವ ಸಂಭ​ವಿ​ಸಿದೆ.

ತಮಿಳುನಾಡಿನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬೆಂಕಿ ಪೊಟ್ಟಣ ತುಂಬಿಕೊಂಡು ಹೊರಟಿದ್ದ ಲಾರಿಗೆ ಬೆಂಕಿ ತಗುಲಿದೆ. ತಕ್ಷಣವೇ ಚಾಲಕ ಲಾರಿಯಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಬೆಂಕಿ ಪೊಟ್ಟಣ ಹಾಗೂ ಸುಮಾರು 15 ಲಕ್ಷ ಮೌಲ್ಯದ ಲಾರಿ ಸಂಪೂರ್ಣ ಸುಟ್ಟು ಹಾಳಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಶ್ರೀಮಂತರಾಗೋಕೆ ಕಾರು ಬೇಕಿಲ್ಲ, ಈ 5 ಹಣದ ನಿಯಮ ಸಾಕು; ಬೆಂಗಳೂರಿನ ದಂಪತಿಯ ಸೀಕ್ರೆಟ್ ವೈರಲ್
ಬೈಯಪ್ಪನಹಳ್ಳಿ ಮೇಲ್ಸೇತುವೆ: ಸರ್ಕಾರ-ರೈಲ್ವೆ ಸಂಘರ್ಷ, ಬಿ-ಸ್ಟೈಲ್ ತಾತ್ಕಾಲಿಕ ಶೆಡ್ ನೆಲಸಮ ಮಾಡಿದ ನೈಋತ್ಯ ರೈಲ್ವೆ!