ಧಾರವಾಡ: ಓಮ್ನಿಯಲ್ಲಿ ಆಕಸ್ಮಿಕ ಬೆಂಕಿ,ತಪ್ಪಿದ ಭಾರಿ ಅನಾಹುತ

Published : Oct 07, 2019, 08:04 AM ISTUpdated : Oct 07, 2019, 08:11 AM IST
ಧಾರವಾಡ: ಓಮ್ನಿಯಲ್ಲಿ ಆಕಸ್ಮಿಕ ಬೆಂಕಿ,ತಪ್ಪಿದ ಭಾರಿ ಅನಾಹುತ

ಸಾರಾಂಶ

ಪ್ರಜೆಂಟೇಶನ್‌ ಶಾಲೆಯಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಓಮ್ನಿ ವ್ಯಾನ್‌ ಮುಂಭಾಗದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ| ಒಲ್ಡ್‌ ಡಿಎಸ್‌ಪಿ ಸರ್ಕಲ್‌ ಬಳಿ ನಡೆದ ಘಟನೆ| ಶಾಲಾ ಮಕ್ಕಳನ್ನು ಮನೆಗೆ ಬಿಡಲು ಹೊರಟ್ಟಿದ್ದ ವ್ಯಾನ್‌ನಲ್ಲಿ ಶಾರ್ಟ್ ಸರ್ಕೀಟ್‌ ಉಂಟಾಗಿದ್ದರಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ| 

ಧಾರವಾಡ(ಅ.7): ನಗರದ ಪ್ರಜೆಂಟೇಶನ್‌ ಶಾಲೆಯಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಓಮ್ನಿ ವ್ಯಾನ್‌ ಮುಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮಕ್ಕಳೆಲ್ಲ ಗಾಬರಿಗೊಂಡ ಘಟನೆ ಸಂಭವಿಸಿದೆ. 

ಇಲ್ಲಿನ ಒಲ್ಡ್‌ ಡಿಎಸ್‌ಪಿ ಸರ್ಕಲ್‌ ಬಳಿ ಈ ಘಟನೆ ನಡೆದಿದ್ದು, ಶಾಲಾ ಮಕ್ಕಳನ್ನು ಮನೆಗೆ ಬಿಡಲು ಹೊರಟ್ಟಿದ್ದ ವ್ಯಾನ್‌ನಲ್ಲಿ ಶಾರ್ಟ್ ಸರ್ಕೀಟ್‌ ಉಂಟಾಗಿದ್ದರಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಾಹನದಲ್ಲಿ ಬೆಂಕಿಯನ್ನು ಕಂಡು ಮಕ್ಕಳು ಗಾಬರಿಗೊಂಡಿದ್ದಾರೆ. ತಕ್ಷಣವೇ ವಾಹನ ಚಾಲಕ ಮಕ್ಕಳನ್ನು ಕೆಳಗೆ ಇಳಿಯುವಂತೆ ಸೂಚಿಸಿದ್ದಾರೆ. ನಂತರದಲ್ಲಿ ಸ್ಥಳೀಯರ ಸಹಾಯದಿಂದ ನೀರು ಹಾಕುವ ಮೂಲಕ ಬೆಂಕಿ ನಂದಿಸಲಾಗಿದೆ.ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!