ಆಲಮಟ್ಟಿ: ಎಂಜಿನಿಯರ್‌ ಕಚೇರಿ ಮೇಲೆ ಎಸಿಬಿ ದಾಳಿ

Kannadaprabha News   | Asianet News
Published : Jun 11, 2020, 08:58 AM IST
ಆಲಮಟ್ಟಿ: ಎಂಜಿನಿಯರ್‌ ಕಚೇರಿ ಮೇಲೆ ಎಸಿಬಿ ದಾಳಿ

ಸಾರಾಂಶ

ಕೃಷ್ಣಾ ಭಾಗ್ಯ ಜಲನಿಗಮ ಎಫ್‌ಆರ್‌ಎಲ್‌ ಉಪವಿಭಾಗದ ಅಸಿಸ್ಟೆಂಟ್‌ ಎಂಜಿನಿಯರ್‌ ಆರ್‌.ಎಲ್‌. ಲಮಾಣಿ ವಿರುದ್ಧ ಅಕ್ರಮ ಆಸ್ತಿ ದೂರು| ಬಾಗಲಕೋಟೆಯ ವಿದ್ಯಾಗಿರಿ, ಬಾಗಲಕೋಟೆ ಸಮೀಪದ ಸೀಗಿಕೇರಿ ತಾಂಡಾದ ಮನೆ ಸೇರಿದಂತೆ ಕಾರ್ಯ ನಿರ್ವಹಿಸುತ್ತಿರುವ ಆಲಮಟ್ಟಿ ಕಚೇರಿ ಮೇಲೆ ಎಸಿಬಿ ದಾಳಿ|

ಆಲಮಟ್ಟಿ(ಜೂ.11): ಇಲ್ಲಿನ ಕೃಷ್ಣಾಭಾಗ್ಯ ಜಲ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿ ಎಫ್‌ಆರ್‌ಎಲ್‌ ಸರ್ವೆ ಉಪ ವಿಭಾಗದ ಕಚೇರಿ ಮೇಲೆ ಬುಧವಾರ ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತು.

ಕೃಷ್ಣಾ ಭಾಗ್ಯ ಜಲನಿಗಮ ಎಫ್‌ಆರ್‌ಎಲ್‌ ಉಪವಿಭಾಗದ ಅಸಿಸ್ಟೆಂಟ್‌ ಎಂಜಿನಿಯರ್‌ ಆರ್‌.ಎಲ್‌. ಲಮಾಣಿ ವಿರುದ್ಧ ಅಕ್ರಮ ಆಸ್ತಿ ದೂರು ಬಂದ ಹಿನ್ನಲೆ ಬಾಗಲಕೋಟೆಯ ವಿದ್ಯಾಗಿರಿ, ಬಾಗಲಕೋಟೆ ಸಮೀಪದ ಸೀಗಿಕೇರಿ ತಾಂಡಾದ ಮನೆ ಸೇರಿದಂತೆ ಕಾರ್ಯ ನಿರ್ವಹಿಸುತ್ತಿರುವ ಆಲಮಟ್ಟಿ ಕಚೇರಿ ಮೇಲೆ ಬೆಳಗಾವಿ ವಿಭಾಗದ ಎಸಿಬಿ ಅಧಿಕಾರಿ ಇನ್ಸಪೆಕ್ಟರ್‌ ಎ.ಎಸ್‌. ಗುದುಗುಪ್ಪೆ ನೇತೃತ್ವದ ತಂಡ ಇಲ್ಲಿನ ಕಚೇರಿಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿತು.

ರಾಯಚೂರು: ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಬೆಳಗ್ಗೆ 7ರಿಂದ 11.30ರ ವರೆಗೆ ಕಚೇರಿಯಲ್ಲಿ ಎಂಜಿನಿಯರ್‌ಗೆ ಸಂಬಂಧಿಸಿದ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ದಾಳಿ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
 

PREV
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!