ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದು ಖಂಡನೀಯ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಪಾವಗಡ ಷಾಬಾಬು ಹಾಗೂ ನಗರಾಧ್ಯಕ್ಷ ರಿಜ್ವಾನ್ ಖಂಡಿಸಿದ್ದಾರೆ.
ಪಾವಗಡ: ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದು ಖಂಡನೀಯ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಪಾವಗಡ ಷಾಬಾಬು ಹಾಗೂ ನಗರಾಧ್ಯಕ್ಷ ರಿಜ್ವಾನ್ ಖಂಡಿಸಿದ್ದಾರೆ.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಷಾಬಾಬು ಮಾತನಾಡಿ, ರಾಜ್ಯ ಸರ್ಕಾರ ಅಲ್ಪಸಂಖ್ಯಾತರರಿಗೆ ಅನ್ಯಾಯವೆಸಗಲು ಹೊರಟಿದೆ. ಸಮುದಾಯದ ಶೇ.4ರ ಮೀಸಲಾತಿ ರದ್ದು ಪಡಿಸಿದ್ದು ರಾಜಕೀಯ ಷಡ್ಯಂತರ. ಬಿಜೆಪಿಯು ಅಲ್ಪ ಸಂಖ್ಯಾತರನ್ನು ನಿರಂತರವಾಗಿ ತುಳಿಯುವ ಹೂನ್ನರಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ತಾಲೂಕು ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ರಿಜ್ವಾನ್ ಮಾತನಾಡಿ, ಶೇ.4ರ ಮೀಸಲಾತಿ ರದ್ದುಪಡಿಸಿದ ಸರ್ಕಾರದ ಕ್ರಮ ಸೂಕ್ತವಲ್ಲ. ಅಲ್ಪಸಂಖ್ಯಾತರನ್ನು ವಂಚಿಸುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ. ಇದು ಖಂಡನೀಯ. ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಕೈಗೊಳ್ಳುವುದಾಗಿ ಹೇಳಿದರು.
ಎಸ್‌ಡಿಪಿಐ ಪ್ರತಿಭಟನೆ
ಚಿತ್ರದುರ್ಗ (ಮಾ.29) : ಮುಸ್ಲೀಮರ ಮೀಸಲಾತಿ ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಎಸ್‌ಡಿಪಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಮಂಗಳವಾರ ಪ್ರತಿಭಟನೆ ನಡೆಸಿ ಖಂಡಿಸಲಾಯಿತು.
ಎಸ್‌ಡಿಪಿಐ(SDDPI) ಸಂಘಟನೆಯ ಉದ್ದೇಶಿತ ಕಾರ್ಯಕ್ರಮದ ಅನ್ವಯ ರೋಟರಿ ಬಾಲಭವನದ ಮುಂಭಾಗ ಸಭಾ ಕಾರ್ಯಕ್ರಮ ಜರುಗಬೇಕಿತ್ತು. ಇದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ರಸ್ತೆ ಮೇಲಿನ ಶ್ಯಾಮಿಯಾನ ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದರು. ನಂತರ ಸಭಾ ಕಾರ್ಯಕ್ರಮದಿಂದ ಹಿಂದೆ ಸರಿದ ಕಾರ್ಯಕರ್ತರು ಒನಕೆ ಓಬವ್ವ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ನಿರ್ಗಮಿಸಿದರು.
ಸಿಎಂ ಚಡ್ಡಿ ಬಿಚ್ಚಿಸ್ತೀವಿ ಎಂದವರಿಗೆ ಬಿರಿಯಾನಿ ಕೊಟ್ಟು ಸಾಕೊಲ್ಲ: ಬಾಂಬ್ ಹಾಕೋರ ತಲೆಗೆ ಬಾಂಬ್ ಹಾಕ್ತೀವಿ
ಈ ವೇಳೆ ಮಾತನಾಡಿದ ನ್ಯಾಯವಾದಿ ಬಿ.ಕೆ. ರಹಮತುಲ್ಲಾ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಹೊಸ ಹೊಸ ಕಾಯಿದೆಗಳನ್ನು ಜಾರಿಗೆ ತರಲು ಹೊರಟಿದೆ. ಇದಕ್ಕೆಲ್ಲಾ ನಾವುಗಳು ಹೆದರುವುದಿಲ್ಲ. ಪ್ರವರ್ಗ ಎರಡು ಬಿ ಅಡಿ ಇದ್ದ ಶೇ. 4ರಷ್ಟುಮೀಸಲಾತಿಯನ್ನು ಮರಳಿ ಪಡೆಯುತ್ತೇವೆಂದು ಹೇಳಿದರು.
ಮುಸ್ಲಿಂರಿಗಿದ್ದ ಶೇ. 4ರಷ್ಟುಮೀಸಲಾತಿ(Muslim reservation)ಯನ್ನು ರದ್ದುಪಡಿಸಿ ಒಕ್ಕಲಿಗರಿಗೆ ಹಾಗೂ ಲಿಂಗಾಯಿತರಿಗೆ ತಲಾ 2ರಷ್ಟುಮೀಸಲಾತಿ ನೀಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಸರಿಯಾದ ಕ್ರಮವಲ್ಲ. ಮುಸಲ್ಮಾನರನ್ನು ಈ ದೇಶದಿಂದ ಓಡಿಸುವುದಕ್ಕಾಗಿ ಎನ್‌ಆರ್‌ಸಿ- ಸಿಎಎ ಕಾಯಿದೆಗಳನ್ನು ಜಾರಿತರಲು ಹೊರಟು ಕೇಂದ್ರ ಸರ್ಕಾರ ವಿಫಲವಾಯಿತು. ರಾಜ್ಯ ಸರ್ಕಾರ ಈಗ ಮುಸಲ್ಮಾನರ ಮೀಸಲಾತಿಯನ್ನು ಕಿತ್ತುಕೊಂಡಿದೆ. ತಾಜ್‌ಮಹಲ್, ಕೆಂಪುಕೋಟೆ ಕಟ್ಟಿದ್ದು ಮುಸಲ್ಮಾನರು, ಹಾಗಾಗಿ ಬಿಜೆಪಿಯವರಿಗೆ ಮುಸ್ಲಿಂರು ಬೇಡ ಎನ್ನುವುದಾದರೆ ಇದರಿಂದ ಬರುವ ಆದಾಯಕ್ಕೆ ಏಕೆ ಕೈಹಾಕಬೇಕು ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ಎನ್‌ಆರ್‌ಸಿ- ಸಿಎಎ, ಹಲಾಲ್ ಕಟ್- ಜಟ್ಕಾಕಟ್ ಸೇರಿದಂತೆ ಹೀಗೆ ಒಂದೊಂದು ಷರತ್ತುಗಳನ್ನು ವಿಧಿಸುವ ಮೂಲಕ ಮುಸಲ್ಮಾನರಿಗೆ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ. ಸಂವಿಧಾನದ ಪ್ರಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡುವಂತಿಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಎರಡು ಬಿ. ಅಡಿ ಮುಸ್ಲಿಮರಿಗಿರುವ ಶೇ.4 ಮೀಸಲಾತಿಯನ್ನು ಕಿತ್ತುಕೊಂಡು ಲಿಂಗಾಯಿತರಿಗೆ ಹಾಗೂ ಒಕ್ಕಲಿಗರಿಗೆ ಸಮಾನವಾಗಿ ಹಂಚಲು ಹೊರಟಿದ್ದಾರೆ. ಆದರೆ ಆ ಎರಡು ಜನಾಂಗದವರು ಮತ್ತೊಬ್ಬರ ತಟ್ಟೆಯಲ್ಲಿನ ಅನ್ನ ನಮಗೆ ಬೇಡ ಎಂದು ವಿರೋಧಿಸುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರಕ್ಕೆ ನಾಚಿಕೆಯಾದಂತಿಲ್ಲ ಎಂದರು.
ಮೀಸಲಿನಿಂದ ಉಳಿಯುತ್ತಾ ವೋಟ್‌ಬ್ಯಾಂಕ್?: ಚುನಾವಣೆಗೂ ಮುನ್ನ ದೊಡ್ಡ ಸಾಹಸಕ್ಕೆ ಕೈಹಾಕಿದ ಬೊಮ್ಮಾಯಿ
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಮುಸ್ಲಿಂ ಸಮಾಜಕ್ಕೆ ಇದ್ದ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ಪುನರ್ ಸ್ಥಾಪಿಸಿ ಇನ್ನೂ ಹೆಚ್ಚಿಸಬೇಕು. ಅದಕ್ಕಾಗಿ ಶೋಷಿತ ಸಮುದಾಯದ ಪರ ಎಸ್‌ಡಿಪಿಐ ಸದಾ ಹೋರಾಟಕ್ಕೆ ಸಿದ್ಧವಿದೆ. ಕಾಂಗ್ರೆಸ್‌ನಲ್ಲಿ ಜಾತ್ಯಾತೀತ ಮುಖವಾಡ ಹಾಕಿಕೊಂಡಿರುವ ರಾಜಕಾರಣಿಗಳು ರಾಜ್ಯ ಸರ್ಕಾರದ ಮುಸ್ಲಿಂ ವಿರೋಧಿ ಕ್ರಮವನ್ನು ಖಂಡಿಸಬೇಕೆಂದು ಒತ್ತಾಯಿಸಿದರು.