
ಹೊಸಪೇಟೆ: ಪ್ರೀತಿಯ ವ್ಯೂಹದಲ್ಲಿ ಸಿಲುಕಿದೋರು ಕವಿಗಳು ಆಗ್ತಾರೆ ಎಂಬ ಮಾತಿದೆ. ಅದೇ ಪ್ರೀತಿಯಲ್ಲಿ ಮೋಸ ಹೋದವರು ದೊಡ್ಡ ದೊಡ್ಡ ಜ್ಞಾನಿಯಾಗಿ ಬದಲಾಗುತ್ತಾರೆ ಎಂಬ ಮಾತುಗಳಿವೆ. ಪ್ರೀತಿಗೆ ಸಂಬಂಧಿಸಿದ ಸಾಲುಗಳು ಅಥವಾ ಪುಟ್ಟ ಕವನಗಳು ಹೆಚ್ಚ ಗಮನ ಸೆಳೆಯುತ್ತವೆ. ಅದರಲ್ಲೂ ಆಟೋ ಹಿಂಬದಿ ಬರಹಗಳಂತೂ ವಿಶೇಷ ಅರ್ಥದ ಜೊತೆ ಎಲ್ಲರನ್ನು ಆಕರ್ಷಿಸುತ್ತವೆ. ಇತ್ತೀಚೆಗೆ ಜನರು ತಮ್ಮ ಬೈಕ್, ಕಾರ್ ಮೇಲೆಯೂ ಪ್ರೀತಗೆ ಸಂಬಂಧಿಸಿದ ಸುಂದರ ಸಾಲುಗಳನ್ನು ಬರೆಸಿಕೊಳ್ಳುತ್ತಾರೆ. ಆದ್ರೆ ಹೊಸಪೇಟೆಯಲ್ಲಿ ಅನಾಮಿಕ ಕವಿಯೋರ್ವ, ಕೆಲವು ಸುಂದರವಾದ ಸಾಲುಗಳನ್ನು ರೈಲ್ವೆ ನಿಲ್ದಾಣದ ಡಸ್ಟ್‌ಬಿನ್ (ಕಸದ ತೊಟ್ಟಿ) ಮೇಲೆ ಬರೆದಿದ್ದಾರೆ.
ಹೊಸಪೇಟೆ ರೈಲು ನಿಲ್ದಾಣಕ್ಕೆ (Hosapete Railway Station) ಬಂದಿದ್ದ ಯುವತಿ, ಡಸ್ಟ್‌ಬಿನ್ ಮೇಲಿನ ಸಾಲುಗಳನ್ನು ಗಮನಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆ ಸಾಲುಗಳು ಏನು ಎಂಬುದನ್ನು ಸಹ ಓದಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಹಾಗೆಯೇ ವಿಡಿಯೋ ಜೊತೆಗೆ ಯುವತಿ ಸುಂದರ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಹೊಸಪೇಟೆ ರೈಲ್ವೆ ಸ್ಟೇಷನ್‌ನ ಒಂದು ವಿಭಿನ್ನ ಪ್ರೇಮ ಕಥೆ. ರೈಲ್ವೆ ಸ್ಟೇಷನ್‌ನ ಡಸ್ಟ್‌ಬಿನ್ ಮೇಲೂ ಪ್ರೀತಿಯ ಕವಿತೆ ಬರೆದಿದ್ದಾನೆ ಒಬ್ಬ ಪ್ರೇಮಿ. ಕೆಲವರಿಗೆ ಪ್ರೀತಿ ಹೃದಯದಲ್ಲಿ ಉಳಿಯುತ್ತದೆ, ಇನ್ನು ಕೆಲವರಿಗೆ ನೆನಪಾಗಿ ಉಳಿಯುತ್ತದೆ. ಆದರೆ ಕೆಲವರ ಪ್ರೀತಿ ಮಾತ್ರ ಪದಗಳಾಗಿ ಎಲ್ಲೋ ಒಂದು ಕಡೆ ಕಾಣಿಸಿಕೊಳ್ಳುತ್ತದೆ. ಪ್ರೀತಿ ಸಿಕ್ಕವರಿಗೆ ಜೀವನ ಸುಂದರ. ಪ್ರೀತಿ ಕಳೆದುಕೊಂಡವರಿಗೆ ಪ್ರತಿಯೊಂದು ಜಾಗವೂ ಒಂದು ನೆನಪು!
ಪ್ರೀತಿಯ ಕೋಗಿಲೆ ಕೂಗಿದಾಗ
ಹೃದಯದ ರಾಗ ಹಾಡಿದಾಗ
ಉದಯಿಸಿತು ಪ್ರೀತಿಯ ಅನುರಾಗ
ಬಯಸಿಯ ನಿನ್ನ ಮನದಲ್ಲೊಂದು ಜಾಗ
ಈ ವಿಡಿಯೋವನ್ನು priyaprathu_official ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋಗೆ 2 ಮಿಲಿಯನ್‌ಗೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಪ್ರೀತಿಗೆ ಕಣ್ಣಿಲ್ಲ ಅಂತ ಕೇಳಿದ್ದೆ. ಆದ್ರೆ ಇಲ್ಲೊಬ್ಬ ಪ್ರೇಮಿ ಡಸ್ಟ್‌ಬಿನ್ ಮೇಲೆ ಕವನ ಬರೆದಿದ್ದಾರೆ. ಹೊಸಪೇಟೆ ರೈಲು ನಿಲ್ದಾಣದಲ್ಲ ನಿಂತಾಗ ಡಸ್ಟ್‌ಬಿನ್ ಮೇಲಿನ ಸಾಲುಗಳು ಕಾಣಿಸಿತು. ನೋಡಿದಾಗ ಅದು ಕವಿತೆಯಾಗಿತ್ತು. ನೀವೇನಾದ್ರೂ ಹೊಸಪೇಟೆ ಜಂಕ್ಷನ್‌ಗೆ ಬಂದ್ರೆ ಈ ಸಾಲುಗಳನ್ನು ನೋಡಿ ಎಂದು ವ್ಲಾಗರ್ ಪ್ರಿಯಾ ಹೇಳಿದ್ದಾರೆ.
ಈ ವಿಡಿಯೋಗೆ ತಮಾಷೆಯಾಗಿ ಹಲವರು ಪ್ರತಿಕ್ರಿಯಿಸಿದ್ದಾರೆ. ಆ ಸಾಲುಗಳನ್ನು ನಾನೇ ಬರದಿದ್ದು. ಸುಮ್ಮನೇ ಕುಳಿತು ಬೇಜಾರು ಆಗಿತ್ತು. ಆ ಸಂದರ್ಭದಲ್ಲಿ ಬರೆದೆ ಎಂದು its_king_vk18 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಕಮೆಂಟ್ ಬಂದಿದೆ. ಒಂದಿಷ್ಟು ಜನರು ನಿಮಗಾಗಿಯೇ ಈ ಸಾಲು ಬರೆದೆ ಅಂದ್ರೆ, ಒಂದಿಷ್ಟು ಜನರು ನಿಮಗೆ ಬೇರೆ ಎಲ್ಲಿಯೂ ಜಾಗ ಸಿಗಿಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ ವೈರಲ್ ವಿಡಿಯೋ: 300 ವರ್ಷದ ಹಳೆ ಮನೆಯಲ್ಲಿರುವ ಅಜ್ಜಿ ಬಚ್ಚಿಟ್ಟಿದ್ದ ಪೆಟ್ಟಿಗೆ ಓಪನ್ ಮಾಡಿದ ಮೊಮ್ಮಗ