ಎಂಜಿನಿಯರ್‌ ಹುದ್ದೆಗೆ ಬೈ ಹೇಳಿ ಸ್ವಂತ ಉದ್ಯಮದಲ್ಲಿ ಏಳ್ಗೆ ಕಂಡ ಯಶೋಗಾಥೆ

Published : Mar 27, 2024, 01:29 PM IST
 ಎಂಜಿನಿಯರ್‌ ಹುದ್ದೆಗೆ ಬೈ ಹೇಳಿ ಸ್ವಂತ ಉದ್ಯಮದಲ್ಲಿ ಏಳ್ಗೆ ಕಂಡ  ಯಶೋಗಾಥೆ

ಸಾರಾಂಶ

ಕೊರೋನಾಗೆ ಹೆದರಿದ ಲಕ್ಷಾಂತರ ಕುಟುಂಬಗಳು ಬೆಂಗಳೂರಿಗೆ ಗುಡ್ ಬೈ ಹೇಳಿದವು. ಇದೇ ಸಮಯದಲ್ಲೇ ಇಂಜಿನಿಯರ್ ಆಗಿ ಲಕ್ಷಾಂತರ ರು. ಸಂಬಳ ಪಡೆಯುತ್ತಿದ್ದ ತಾಲೂಕಿನ ಮಾದಿಹಳ್ಳಿಯ ರಂಗನಾಥ್ ಸಹ ತನ್ನೂರಿಗೆ ಮರಳಿದ್ದರು. ಆ ದಿನಗ ಳಲ್ಲಿ ಸಣ್ಣದಾಗಿ ಚಿಪ್ಸ್, ಚಕ್ಕುಲಿ, ಖಾರ ತಯಾರು ಮಾಡುವ ಪ್ರಯತ್ನ ಮಾಡಿದರು. ವ್ಯಾಪಾರ ಕೈ ಹಿಡಿಯಿತು. ಹತ್ತಾರು ಯುವಕರಿಗೆ ಮತ್ತು ಯುವತಿಯರಿಗೆ ಕೆಲಸ ನೀಡಿದ್ದಾರೆ. ಅದು ಈಗ ಪ್ರಿಯಾ ಫುಡ್ ಪ್ರಾಡಕ್ಟ್ ಎಂಬ ಸಂಸ್ಥೆ ಹೆಸರಿನಲ್ಲಿ ಮುನ್ನಡೆಯುತ್ತಿದೆ.

  ತುರುವೇಕೆರೆ :  ಕೊರೋನಾಗೆ ಹೆದರಿದ ಲಕ್ಷಾಂತರ ಕುಟುಂಬಗಳು ಬೆಂಗಳೂರಿಗೆ ಗುಡ್ ಬೈ ಹೇಳಿದವು. ಇದೇ ಸಮಯದಲ್ಲೇ ಇಂಜಿನಿಯರ್ ಆಗಿ ಲಕ್ಷಾಂತರ ರು. ಸಂಬಳ ಪಡೆಯುತ್ತಿದ್ದ ತಾಲೂಕಿನ ಮಾದಿಹಳ್ಳಿಯ ರಂಗನಾಥ್ ಸಹ ತನ್ನೂರಿಗೆ ಮರಳಿದ್ದರು. ಆ ದಿನಗ ಳಲ್ಲಿ ಸಣ್ಣದಾಗಿ ಚಿಪ್ಸ್, ಚಕ್ಕುಲಿ, ಖಾರ ತಯಾರು ಮಾಡುವ ಪ್ರಯತ್ನ ಮಾಡಿದರು. ವ್ಯಾಪಾರ ಕೈ ಹಿಡಿಯಿತು. ಹತ್ತಾರು ಯುವಕರಿಗೆ ಮತ್ತು ಯುವತಿಯರಿಗೆ ಕೆಲಸ ನೀಡಿದ್ದಾರೆ. ಅದು ಈಗ ಪ್ರಿಯಾ ಫುಡ್ ಪ್ರಾಡಕ್ಟ್ ಎಂಬ ಸಂಸ್ಥೆ ಹೆಸರಿನಲ್ಲಿ ಮುನ್ನಡೆಯುತ್ತಿದೆ.

ಇವರ ಮುಖ್ಯ ಉದ್ದೇಶ ಸ್ಥಳೀಯ ರೈತರು ಬೆಳೆಯುವ ಬೇಳೆ ಕಾಳುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ರೈತರಿಗೆ ನೆರವಾಗುವುದಾಗಿದೆ. ಉತ್ತೇಜಿಸುವ ಉದ್ದೇಶ ಹೊಂದಿದ್ದಾರೆ. ಸದ್ಯ ವಿವಿಧ ರೀತಿಯ ಖಾರ, ಅವಲಕ್ಕಿ, ಚಕ್ಕುಲಿ, ಬೆಣ್ಣೆ ವಿವಿಧ ರೀತಿಯ ಆಲೂಗಡ್ಡೆ ಚಿಪ್ಸ್ ಸೇರಿ ವಿವಿಧ ತಿಂಡಿ ತಯಾರಿಸುತ್ತಿದ್ದಾರೆ.

ಆರೋಗ್ಯದ ಕುರಿತು ಚಿಂತನೆ ಮಾಡಿ ವಿವಿಧ ಸಿರಿಧಾನ್ಯಗಳ ಬಳಕೆ ಮಾಡಿ ಕುರುಕಲುಗಳನ್ನು ತಯಾರಿಕೆಗೆ ಇಳಿದಿದ್ದಾರೆ. ಮಕ್ಕಳ ತಜ್ಞ ಡಾ.ನಂಜಪ್ಪ ನೂತನ ಪ್ಯಾಕಿಂಗ್ ಘಟಕ ಉದ್ಘಾಟಿಸಿದರು. ರಂಗನಾಥ್ ಅವರ ಈ ಸಾಹಸಕ್ಕೆ ರಂಗನಾಥ್ಪ, ಪತ್ನಿ ಪ್ರಿಯಾ, ತಂದೆ ಪುಟ್ಟರಂಗಪ್ಪ, ತಾಯಿ ಪುಷ್ಟಲತಾ, ಸಹೋದರ ಲಕ್ಷ್ಮೀಕಾಂತ್ ಕೈ ಜೋಡಿಸಿದ್ದಾರೆ.

ನೂತನ ಪ್ಯಾಕಿಂಗ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಎಪಿಎಂಸಿ ಯ ಮಾಜಿ ನಿರ್ದೇಶಕರಾದ ಮಾವಿನಕೆರೆ ಪ್ರಸನ್ನ ಕುಮಾರ್, ಮಾಜಿ ಉಪ ಪ್ರಾಂಶುಪಾಲ ನಾಗರಾಜಯ್ಯ ಸೇರಿದಂತೆ ಹಲವರು ಆಗಮಿಸಿ ಶುಭ ಕೋರಿದರು. 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC