ಉಜ್ಜೈನಿ ಪೀಠದಲ್ಲೊಂದು  ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!

By Suvarna News  |  First Published May 8, 2022, 9:55 AM IST

* ಉಜ್ಜೈನಿ  ಮಠದ ದೇವಸ್ಥಾನದ ಗೋಪುರಕ್ಕೆ ತೈಲಾಭಿಷೇಕ

* ಉಜ್ಜೈನಿ ಪೀಠದಲ್ಲೊಂದು  ವಿಶಿಷ್ಟ ಆಚರಣೆ

* ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ  ಎಣ್ಣೆ


ವಿಜಯನಗರ(ಮೇ. 08): ಸಾಮಾನ್ಯವಾಗಿ ಜಾತ್ರೆಯಂದ್ರೇ ತೇರು ಎಳೆಯೋದು, ಪಲ್ಲಕ್ಕಿ ಹೊರುತ್ತಾರೆ. ಜೊತೆಗೆ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕವನ್ನು ಮಾಡ್ತಾರೆ..ಆದ್ರೇ, ಈ ಜಾತ್ರೆಯಲ್ಲಿ ‌ಒಂದಿನ ತೇರನ್ನು ಎಳೆದ್ರೇ ಮಾರನೇ ದೇವಸ್ಥಾನದ ಗೋಪುರದ ಶಿಖರಕ್ಕೆ ತೈಲಾಭಿಷೇಕ ಮಾಡ್ತಾರೆ. ಜಗತ್ತಿನ ಯಾವ ದೇಗುಲದಲ್ಲಿಯೂ ಇರದ ಈ ವಿಶಿಷ್ಟ ಆಚರಣೆಯೂ ಪಂಚಪೀಠದಲ್ಲೊಂದಾದ  ಉಜ್ಜಿನಿ ಪೀಠದಲ್ಲಿದೆ. ಶಿಖರಕ್ಕೆ ತೈಲಾಭಿಷೇಕ ( ಅಡಿಗೆ ಎಣ್ಣೆ) ಮಾಡೋದ್ರಿಂದ ಶನಿದೋಷ ನಿವಾರಣೆಯಾಗುತ್ತದೆ ಎನ್ನುವ ಬಲವಾದ ನಂಬಿಕೆ ಜನರಲ್ಲಿರೋದ್ರಿಂದ ಲಕ್ಷಾಂತರ ಭಕ್ತರು ಈ ದೃಶ್ಯವನ್ನು ಕಣ್ತಂಬಿಕೊಳ್ಳು ಇಲ್ಲಿಗೆ ಬರುತ್ತಾರೆ. ಕೊರನಾದಿಂದ ಎರಡು ವರ್ಷ ನಡೆಯದ ತೈಲಾಭಿಷೇಕ ನೋಡಲು ಈ ಬಾರಿ ಜನಸಾಗರವೇ ಇಲ್ಲಿಗೆ ಬಂದಿತ್ತು.
 
 ಶತಮಾನಗಳಿಂದಲೂ ನಡೆದುಕೊಂಡು ಬಂದಿರೋ ಪದ್ಧತಿ

11ನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯದ ಗೋಪುರಕ್ಕೆ ತೈಲಾಭಿಷೇಕ ನಡೆಯುತ್ತದೆ.. ಇಂತಹ ಅಪರೂಪದ ಆಚರಣೆ ನಡೆಯೋದು ಪಂಚಪೀಠದಲ್ಲೊಂದಾದ ಉಜ್ಜಯನಿಯಲ್ಲಿ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ದೇವಾಸ್ಥಾನದಲ್ಲಿ ರಥೋತ್ಸವದ ಬಳಿಕ ತೈಲಾಭಿಷೇಕ ಆಚರಣೆ ವಿಶಿಷ್ಟವಾಗಿ ನಡೆಯುತ್ತದೆ. ಹೌದು, ಇದೊಂದು  ಒಂದು ಅಪರೂಪದ ಆಚರಣೆ ಅಂದ್ರೂ ತಪ್ಪಾಗಲಿಕ್ಕಿಲ್ಲ. ಎಲ್ಲ ದೇವಾಲಯಗಳಲ್ಲಿ ದೇವರಿಗೆ ವಿವಿಧ ರೀತಿಯ ಅಭಿಷೇಕ ನಡೆದ್ರೇ ಈ ಪೀಠದಲ್ಲಿ ಚಾಲುಕ್ಯ ಹಾಗೂ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿದರುವ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಇಡೀ ದೇವಾಲಯದ ಗೋಪುರಕ್ಕೆ ತೈಲಾಭೀಷೇಕ ನಡೆಯುತ್ತದೆ..ಇಡೀ ದೇಶದಲ್ಲಿಯೂ ಈ ರೀತಿಯ ಅಪರೂಪದ ತೈಲಾಭಿಷೇಕ ಆಚರಣೆ ನಡೆಯೋದಿಲ್ಲ. ಇದಕ್ಕೊಂದು ಐತಿಹ್ಯ ಕೂಡ ಇದೆ. ರಾಜಾ ವಿಕ್ರಮಾಧಿತ್ಯನಿಗೆ  ಶೈನೈಶ್ಚರನ  ಕಾಟ ಹೆಚ್ಚಾಗಲು  ವಿಕ್ರಮಾದಿತ್ಯ  ರಾಜಗುರುಗಳಾದ ಉಜ್ಜೈನಿ  ಶ್ರೀ ಪೀಠದ  ಶ್ರೀ ಮರುಳಸಿದ್ಧರು  ಮೊರೆ ಹೋಗುತ್ತಾನೆ. ಆಗ ಶ್ರೀಗಳು ತಮ್ಮ ತಪೋಬಲದಿಂದ  ವಿಕ್ರಮಾಧ್ಯಿತ್ಯನನ್ನು ಕಾಪಾಡುತ್ತಾರೆಂತೆ ನಂತರ  ಶ್ರೀಗಳ ಅಪ್ಪಣೆಯಂತೆ  ಶಿಖರಕ್ಕೆ ವೈಶಾಖ ಶುದ್ಧ ಷಷ್ಠಿಯ ದಿನ ತೈಲಾಭಿಷಿಕ  ನಡೆಸಲಾಗುತ್ತಿದೆ.  ಎಂದು  ಹೇಳಲಾಗುತ್ತದೆ ಎಂದು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ‌ ವಿವರಿಸುತ್ತಾರೆ..
 
ಶಾಪ ವಿಮೋಚನೆ ಮತ್ತು ಶನಿಕಾಟಕ್ಕೂ ತೈಲಾಭಿಷೇಕ

Tap to resize

Latest Videos

undefined

 ಇನ್ನೂ ಮತ್ತೊಂದು ಮೂಲಗಳ ಪ್ರಕಾರ ಜರ್ಮಲಿ ಪಾಳೇಗಾರರು ರಾಜಭಾರ ಮಾಡುವಾಗ ತಪ್ಪು ಮಾಡಿದ್ದರಂತೆ. ರಾಜ ಮಾಡಿದ ತಪ್ಪಿಗೆ ಮನ್ನಿಸಲು ಶ್ರೀಗಳು ಮರಳಸಿದ್ದೇಶ್ವರ ಸ್ವಾಮಿಗಳು ತೈಲಾಭಿಷೇಕ ಮಾಡುವಂತೆ  ತಿಳಿಸಿದ್ದಂತೆ. ಹೀಗಾಗಿ ಅಂದಿನಿಂದ ನಡೆಯುತ್ತಿರುವ ಈ ಆಚರಣೆ ಇಂದಿಗೂ  ಅದ್ದೂರಿಯಾಗಿ ನಡೆಯುತ್ತದೆ. ಶಿಖರ ಮಜ್ಜನಕ್ಕೆ ಮೊದಲು ಜರ್ಮಿಲಿ ಪಾಳೇಗಾರರು ತರುವ ತೈಲಾದಿಂದಲೆ ಅಭಿಷೇಕ ಮಾಡಲಾಗುತ್ತದೆ. ನಂತರ ಭಕ್ತರು ನೀಡುವ ಎಳ್ಳೆಣ್ಣೆ ಹಾಗೂ ವಿವಿಧ ಎಣ್ಣೆಗಳಿಂದ ಇಡೀ ದೇವಾಲಯಕ್ಕೆ ತೈಲಾಭಿಷೇಕ ನಡೆಯುತ್ತೆದೆ.  ಈ ತೈಲಾಭಿಷೇಕ ನೋಡಲು ರಾಜ್ಯ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹೀಗೆ ಬರೋ ಭಕ್ತರು ತಪ್ಪು ಮಾಡಿದ್ರೇ, ಮರಳಸಿದ್ದೇಶ್ವರ ಸ್ವಾಮಿಗೆ ತೈಲಾಭಿಷೇಕದಲ್ಲಿ ಎಣ್ಣೆ ನೀಡಿದರೇ ಮರಳಸಿದ್ದೇಶ್ವರ ಸ್ವಾಮಿಗಳು ಮಾಡಿದ ತಪ್ಪು ಮನ್ನಿಸುತ್ತಾರೆ ಅನ್ನೋ ನಂಬಿಕೆ ಇಲ್ಲಿನ ಭಕ್ತರದಾಗಿದೆ. ಶನೇಶ್ವರನ ಕಾಟವಿದ್ದರೂ ಈ ಜಾತ್ರೆಗೆ ಆಗಮಿಸಿ ತೈಲಾಭಿಷೇಕ ತೈಲವನ್ನು ಅರ್ಪಿಸಿದ್ರೆ, ದೋಷ ನಿವಾರಣೆ ಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. 
  
ಕೊರೋನಾ ಹಿನ್ನಲೆ ಎರಡು ವರ್ಷ ನಡೆದಿರಲಿಲ್ಲ

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳ ಕಾಲ ತೈಲಾಭಿಷೇಕ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಪ್ರತಿಬಾರಿಗಿಂತ ಮೂರು ಪಟ್ಟು ಹೆಚ್ಚು ಜನರು ಬಂದು ತೈಲಾಭಿಷೇಕ ಕಣ್ತುಂಬಿಕೊಂಡರು. ಇನ್ನೂ ಗೋಪುರದ ತೈಲ ಮಜ್ಜನ ನೋಡಲು ಬಂದವರು ಸಹ ಮಾಡಿದ ತಪ್ಪನ್ನ ಮನ್ನಿಸುವಂತೆ ದೇವರಿಗೆ ಪೂಜೆಗೈಯುವುದು ಕೂಡ ಇಲ್ಲಿನ ವಿಶೇಷವಾಗಿದ್ದು,  ಇದು ದೇಶದಲ್ಲಿ ಅಪರೂಪದಲ್ಲಿ ಅಪರೂಪದ ಆಚರಣೆಯಾಗಿದೆ.
 

click me!