ಬೆಂಗಳೂರಿನ ಮಹದೇವಪುರದ ಐನಾಕ್ಸ್‌ಗೆ ಮೆಚ್ಚುಗೆ| ಬ್ರೂಕ್ ಲಿಡೋ ಮಾಲ್‌ನ ಐನಾಕ್ಸ್‌ನಲ್ಲಿ ಮೊದಲ ಪ್ರದರ್ಶನ ಕಂಡ ಹಿಂದಿಯ ‘ಥಪ್ಪಡ್’ ಚಿತ್ರವನ್ನ ಒಬ್ಬನೇ ಕುಳಿತು ಚಿತ್ರ ನೋಡಿದ ಸಿನಿ ಪ್ರೇಮಿ ರವೀಂದ್ರ| ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮ ವಹಿಸಿದ ಐನಾಕ್ಸ್|
ಬೆಂಗಳೂರು(ಅ.16): ಮೊಬೈಲ್‌ನಲ್ಲಿ ಸಿನಿಮಾ ನೋಡುವುದು ಖುಷಿ ನೀಡಲ್ಲ, ಏನಿದ್ದರೂ ಬಿಗ್ ಸ್ಕ್ರೀನ್‌ನಲ್ಲಿಯೇ ಸಿನಿಮಾ ನೋಡಿ ಎಂಜಾಯ್ ಮಾಡಬೇಕು ಎಂದುಕೊಂಡು ಪ್ರೇಕ್ಷಕ ಮಲ್ಟಿಪ್ಲೆಕ್ಸ್‌ಗೆ ಬಂದಿದ್ದಾನೆ.
ಮಹದೇವಪುರದ ಬ್ರೂಕ್ ಲಿಡೋ ಮಾಲ್‌ನ ಐನಾಕ್ಸ್‌ನಲ್ಲಿ ಮೊದಲ ಪ್ರದರ್ಶನ ಕಂಡ ಹಿಂದಿಯ ‘ಥಪ್ಪಡ್’ ಚಿತ್ರ ನೋಡಲು ರವೀಂದ್ರ ಎಂಬ ಸಿನಿ ಪ್ರೇಮಿ ಒಬ್ಬನೇ ಬಂದು ಚಿತ್ರ ನೋಡಿದ್ದಾನೆ. 175 ಆಸನ ಸಾಮರ್ಥ್ಯದ ಮಲ್ಟಿಪ್ಲೆಕ್ಸ್‌ನಲ್ಲಿ ಒಬ್ಬನೇ ಪ್ರೇಕ್ಷಕ ಇದ್ದರೂ ಐನಾಕ್ಸ್ ಚಿತ್ರ ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದೆ. ಇದು ಚಿತ್ರಮಂದಿರಕ್ಕೆ ಜನ ಬರುವುದಿಲ್ಲ ಎನ್ನುವ ನಿರಾಶೆಯನ್ನು ಕಳೆದಿದೆ.
undefined
ಅಕ್ಟೋಬರ್ 15ರಿಂದ ಚಿತ್ರ ಪ್ರದರ್ಶನ: ಮಾಲೀಕರ ನಿರಾಸಕ್ತಿ
ಚಿತ್ರ ನೋಡಿದ ಬಳಿಕ ಮಾತನಾಡಿರುವ ರವೀಂದ್ರ ‘ಐನಾಕ್ಸ್ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ವಹಿಸಿದೆ. ಮೊದಲ ದಿನವೇ ಚಿತ್ರ ನೋಡಿ ತುಂಬಾ ಸಂತೋಷ ಆಗಿದೆ. ಯಾವಾಗ ಚಿತ್ರಮಂದಿರಗಳು ಬಾಗಿಲು ತೆರೆಯುತ್ತವೆಯೋ ಎಂದು ಎದುರು ನೋಡುತ್ತಿದ್ದೆ. ಇದೀಗ ಇಲ್ಲಿನ ಸುರಕ್ಷಾ ಕ್ರಮಗಳನ್ನು ಕಂಡ ಬಳಿಕ ಸಂಪೂರ್ಣ ವಿಶ್ವಾಸ ಬಂದಿದೆ. ಮುಂದೆ ನನ್ನ ಕುಟುಂಬ ಸ್ನೇಹಿತರನ್ನೂ ಸಿನಿಮಾ ನೋಡಲು ಹೇಳುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಚಿತ್ರಮಂದಿರಗಳಿಗೆ ಮುಂದಿನ ದಿನಗಳಲ್ಲಿ ಪ್ರೇಕ್ಷಕನ ಆಗಮನ ಆಗುತ್ತದೆ ಎನ್ನುವ ಭರವಸೆಯ ಚಿಗುರೊಂದು ಮೊಳೆತಿದೆ.