Gadag: 18 ದಿನ, 1200 ಕಿ.ಮೀ ಪ್ರಯಾಣ: ಭೋಪಾಲ್‌ ರೈಲು ನಿಲ್ದಾಣದಲ್ಲಿ ಫರ್ವೇಜ್ ಪ್ರತ್ಯಕ್ಷ

Published : Sep 30, 2026, 11:02 AM IST
Gadag

ಸಾರಾಂಶ

ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ಗದಗ KRIDL ಎಇಇ ಫರ್ವೇಜ್ ಅವರ ಸುಳಿವು ಕೊನೆಗೂ ಲಭ್ಯವಾಗಿದೆ. ಮೊಬೈಲ್ ಆಫ್ ಮಾಡಿಕೊಂಡು 1200 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಿರುವ ಅವರು ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಗದಗ: ನಾಪತ್ತೆಯಾಗಿದ್ದ KRIDL ಎಇಇ (AEE) ಫರ್ವೇಜ್ ಅವರ ಸುಳಿವು ಕೊನೆಗೂ ಪತ್ತೆಯಾಗಿದೆ. ಕಳೆದ 18 ದಿನಗಳಿಂದ ತಮ್ಮ ಮೊಬೈಲ್ ಫೋನ್ ಆಫ್ ಮಾಡಿಕೊಂಡಿದ್ದ ಫರ್ವೇಜ್, ಇದೀಗ ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಓಡಾಡುತ್ತಿರುವ ದೃಶ್ಯ ಸರೆಯಾಗಿದೆ.

1200 ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣ

ದಿನಾಂಕ 13ರಂದು ಗದಗದಿಂದ ಬೆಂಗಳೂರಿಗೆ ಆಗಮಿಸಿದ್ದ ಫರ್ವೇಜ್, ಅಲ್ಲಿಂದ ರೈಲು ಮೂಲಕ ವಿಜಯವಾಡ ತಲುಪಿದ್ದರು. ವಿಜಯವಾಡದಲ್ಲಿ ಮೊಬೈಲ್ ಲೋಕೇಷನ್ ಆಫ್ ಆದ ನಂತರ, ಸುಮಾರು 1200 ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣ ಬೆಳೆಸಿ ಭೋಪಾಲ್‌ಗೆ ತಲುಪಿರುವುದು ಪೊಲೀಸರ ಸುದೀರ್ಘ ಪರಿಶೀಲನೆಯಲ್ಲಿ ತಿಳಿದುಬಂದಿದೆ.

ಮೊಬೈಲ್ ಆಫ್‌ನಲ್ಲಿದ್ದ ಕಾರಣ ಫರ್ವೇಜ್ ಪತ್ತೆ ಕಾರ್ಯ ಗದಗ ಪೊಲೀಸರಿಗೆ ಅತ್ಯಂತ ಕಠಿಣ ಸವಾಲಾಗಿತ್ತು. ಆದಾಗ್ಯೂ, ನಿರಂತರವಾಗಿ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಾ ಅವರ ಪ್ರತಿ ಹೆಜ್ಜೆಯ ಮೇಲೂ ಹದ್ದಿನ ಕಣ್ಣಿಟ್ಟ ಗದಗ ಪೊಲೀಸರು, ಸುಮಾರು 1,200 ಕಿ.ಮೀ. ಪ್ರಯಾಣ ಬೆಳೆಸಿ ಕೊನೆಗೂ ಭೋಪಾಲ್‌ನಲ್ಲಿ ಅವರ ಚಲನವಲನವನ್ನು ಪತ್ತೆಹಚ್ಚಿದ್ದಾರೆ.

ಮುಂದುವರಿದ ಶೋಧ ಕಾರ್ಯ

ಭೋಪಾಲ್ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫರ್ವೇಜ್ ಓಡಾಡುತ್ತಿರುವ ಸಿಸಿಟಿವಿ ಸುಳಿವು ಲಭ್ಯವಾಗಿದ್ದು, ಪ್ರಸ್ತುತ ಆ ಸುಳಿವಿನ ಆಧಾರದ ಮೇಲೆ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕೆಆರ್‌ಡಿಎಲ್‌ ಎಇಇ ಫರ್ವೇಜ್‌ ಧಾರವಾಡ ನಾಪತ್ತೆ ಖಂಡಿಸಿ ಜಿಲ್ಲಾ ಅಲ್ಪಸಂಖ್ಯಾತರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಗೃಹಮಂತ್ರಿಗೆ ಮನವಿ ಸಲ್ಲಿಸಲಾಗಿದೆ.

ಕುಟುಂಬಸ್ಥರಿಂದ ನಾಪತ್ತೆ ದೂರು ದಾಖಲು

ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ಕಿರುಕುಳ ಮತ್ತು ಇಲಾಖೆಯ ತೀವ್ರ ಒತ್ತಡಕ್ಕೆ ಬೇಸತ್ತು ಡೆತ್‌ ನೋಟ್ ಬರೆದಿಟ್ಟು ಫರ್ವೇಜ್ ಅವರು ಸೆ.14ರಿಂದ ನಾಪತ್ತೆಯಾಗಿದ್ದಾರೆ. ಸೆ.16ರಂದು ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದಾರೆ.

PREV
Read more Articles on
click me!

Recommended Stories

ರಾತ್ರಿ ಸುರಿದ ಮಳೆಗೆ ಭರ್ತಿಯಾದ ಹುಬ್ಬೆಹುಣಸೆ ಜಲಾಶಯ; ಕೋಡಿ ಬಿದ್ದು ಗ್ರಾಮಕ್ಕೆ ನೀರು
ಏಯ್, ನಾನು PSI ಕಣೋ; ಚಿನ್ನ, ಹಣ ದೋಚಿ ಲವರ್‌ಗೆ ನೀಡ್ತಿದ್ದ ನಿವೇದಿತಾ ಗೌಡ ಅರೆಸ್ಟ್