ಬಾಗೇಪಲ್ಲಿ ಕ್ಷೇತ್ರದಲ್ಲಿ ಶೇ.89.09 ರಷ್ಟುಮತದಾನ

By Kannadaprabha News  |  First Published May 11, 2023, 5:49 AM IST

ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಮೇ 10 ರ ಬುಧುವಾರ ನಡೆದ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು. ಶೇ.89.09 ರಷ್ಟುಮತದಾನ ದಾಖಲಾಗಿತ್ತು.


  ಬಾಗೇಪಲ್ಲಿ :  ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಮೇ 10 ರ ಬುಧುವಾರ ನಡೆದ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ನಡೆಯಿತು. ಶೇ.89.09 ರಷ್ಟುಮತದಾನ ದಾಖಲಾಗಿತ್ತು.

ಬೆಳಗ್ಗೆ 7 ಗಂಟೆಯಿಂದಲ್ಲೇ ಮತದಾರರು ಮತಗಟಗಳಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು. 11 ಗಂಟೆ ವರೆವಿಗೂ ಬಿರುಸಿನ ಮತದಾನ ನಡೆಯಿತು ನಂತರ ಮಂದಗತಿಯಲ್ಲಿ ಸಾಗಿತ್ತು. 4 ಗಂಟೆ ನಂತರ ಮತ್ತೇ ಬಿರುಸಿನಿಂದ ಮತದಾನ ಸಾಗಿತ್ತು.

Latest Videos

undefined

ಅಂಗವಿಕಲರಿಗೆ ಹಾಗೂ ವೃದ್ದರಿಗೆ ವ್ಹಿಲ್‌ ಚೇರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಬುಧುವಾರ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ, ಚೇಳೂರು ಮತ್ತು ಗುಡಬಂಡೆ ತಾಲೂಕುಗಳನ್ನು ಒಳಗೊಂಡಿರುವ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ, ಪುರಷರು 99,315 ಮತ್ತು ಮಹಿಳೆಯರು 100989 ಇತರರು 34 ಸೇರಿದಂತೆ ಈ ಕ್ಷೇತ್ರದಲ್ಲಿ 2,00,333 ಮತದಾರರನ್ನು ಹೊಂದಿದೆ. ಈ ಪೈಕಿ ಪುರಷರು 85969 ಮಹಿಳೆಯರು 85031 ಹಾಗೂ ಇತರರು 4 ಮತದಾರರು ತಮ್ಮ ಮತ ಚಲಾಯಿಸಿರುತ್ತಾರೆ.

ಶಾಸಕ ಸುಬ್ಬಾರೆಡ್ಡಿ ಮತದಾನ

ಶಾಸಕ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಸ್‌.ಎನ್‌. ಸುಬ್ಬಾರೆಡ್ಡಿ ತಮ್ಮ ಕುಟುಂಬದ ಸಮೇತರಾಗಿ ತಮ್ಮ ಸ್ವಗ್ರಾಮವಾದ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಚಿನ್ನಕಾಯಲಪಲ್ಲಿ ಗ್ರಾಮದ ಮತಘಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತವನ್ನು ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ ಅವರು 100ಕ್ಕೆ 100 ರಷ್ಟುಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್‌.ಮಿಥುನ್‌ರೆಡ್ಡಿ ರಾತ್ರೋರಾತ್ರಿ ಕ್ಷೇತ್ರದಿಂದ ಜಾಗ ಖಾಲಿ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಸ್ಪರ್ಧಿಯೇ ಇಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ತಮ್ಮ ಕುಟುಂಬದ ಸಮೇತರಾಗಿ ತಾಲೂಕಿನ ಪರಗೋಡು ಗ್ರಾಮದ ಮತಘಟ್ಟೆಯಲ್ಲಿ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೇ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು. ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಮತಘಟ್ಟೆಗಳಿಗೆ ಬೇಟಿ ನೀಡಿದ್ದೇನೆ. ಚುನಾವಣಾ ಆಯೋಗ ನ್ಯಾಯಯುತ ಮತದಾನಕ್ಕೆ ಉತ್ತಮ ನಿರ್ವಾಹಣೆ ಮಾಡಿದೆ. ಜಿಲ್ಲೆಯಲ್ಲಿ 5 ವಿಧಾನ ಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಶ ವ್ಯಕ್ತಪಡಿಸಿದರು.

10ಬಿಜಿಪಿ2: ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಿಲಪಲ್ಲಿ ಮತಘಟೆಯಲ್ಲಿ ಶಾಸಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸುಬ್ಬಾರೆಡ್ಡಿ ತಮ್ಮ ಕುಟುಂಬದ ಸಮೇತ ಮತ ಚಲಾಯಿಸಿದರು.

click me!