ಬಳ್ಳಾರಿ: ಗಂಟಲಲ್ಲಿ ಸಿಲುಕಿದ ವಿಸಿಲ್ ತೆಗೆಯದೆ ಹಾಗೆ ಬಿಟ್ಟ ವಿಮ್ಸ್ ವೈದ್ಯರು, ಸಾವಿನ ಕದ ತಟ್ಟಿ ಬದುಕುಳಿದ ಬಾಲಕ..!

By Girish GoudarFirst Published Sep 19, 2023, 8:45 PM IST
Highlights

ಗಂಟಲಲ್ಲಿ ಸಿಲಿಕಿರೋ ವಿಸಿಲ್ (ಪಿಪಿ) ತೆಗೆಯದೇ ಹಾಗೆಯೇ ಬಿಟ್ಟು ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ವೈದ್ಯರು… ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಪರದಾಡಿದ ಚಿಕ್ಕ ಬಾಲಕ.. ನಮ್ಮ ಮಗುವಿಗಾದ ನೋವು ಮತ್ಯಾರಿಗೂ ಆಗಬಾರದೆಂದು ದೂರು ನೀಡಿದ ಕುಟುಂಬಸ್ಥರು. 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಸೆ.19):  ಸದಾ ಒಂದೊಲ್ಲೊಂದು ಎಡವಟ್ಟು ಮಾಡಿಕೊಳ್ಳುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು, ಇದೀಗ ಎಂಟು ವರ್ಷದ ಬಾಲಕನ ಜೀವನದ ಜೊತೆ ಆಟವಾಡೋ ಮೂಲಕ ಜೀವವನ್ನು ತೆಗೆದು ಬಿಡುತ್ತಿದ್ರು.. ಅದೃಷ್ಟ ಚೆನ್ನಾಗಿರೋದಕ್ಕೆ ಸದ್ಯ ಆ ಬಾಲಕ ಬದುಕುಳಿದಿದ್ದಾನೆ. ಅಷ್ಟಕ್ಕೂ ಆ ಬಾಲಕನಿಗೆ ಆಗಿರೋ ನೋವೇನು ಆಸ್ಪತ್ರೆ ಸಿಬ್ಬಂದಿ ನೀಡಿರೋ ಟ್ರಿಟ್ಮಿಂಟ್ ಏನು ಅನ್ನೋದನ್ನು ಒಮ್ಮೆ ನೋಡಿದ್ರೆ ಸಾಕು ಇವರು ವೈದ್ಯರೋ ಅಥವಾ ವೈದ್ಯ ರೂಪದಲ್ಲಿರೋ ಮತ್ತಿನ್ನೇನು ಅನ್ನೋದನ್ನು ಪ್ರತಿಯೊಬ್ಬರು ಪ್ರಶ್ನಿಸಬೇಕಾಗುತ್ತದೆ.. ಬಳ್ಳಾರಿ ವಿಮ್ಸ್ ಆಸ್ಪತ್ರೆ ವೈದ್ಯರು ಮಾಡಿದ ಎಡವಟ್ಟಿನ ಕಥೆ ಇಲ್ಲಿದೆ ನೋಡಿ.  

ದೇಹದಲ್ಲಿ ಸಿಲುಕಿಕೊಂಡ ವಿಸಿಲ್ (ಪಿಪಿ) ನಿಂದಾಗಿ ಶ್ವಾಸಕೋಶದ ಸಮಸ್ಯೆ

ಗಂಟಲಲ್ಲಿ ಸಿಲಿಕಿರೋ ವಿಸಿಲ್ (ಪಿಪಿ) ತೆಗೆಯದೇ ಹಾಗೆಯೇ ಬಿಟ್ಟು ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ವೈದ್ಯರು… ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟಿಗೆ ಪರದಾಡಿದ ಚಿಕ್ಕ ಬಾಲಕ.. ನಮ್ಮ ಮಗುವಿಗಾದ ನೋವು ಮತ್ಯಾರಿಗೂ ಆಗಬಾರದೆಂದು ದೂರು ನೀಡಿದ ಕುಟುಂಬಸ್ಥರು… ಹೌದು, ಕುರುಗೋಡು  ತಾಲೂಕಿನ ಸಿರಗೇರಿ  ಗ್ರಾಮದ ಪ್ರವೀಣ್ ಎನ್ನುವ ಎಂಟು ವರ್ಷದ ಬಾಲಕ ಎಲ್ಲರಂತೆ  ಓದೋದ್ರ ಜೊತೆ ಆಟವಾಡೋದ್ರಲ್ಲೂ ಆ್ಯಕ್ಟಿವ್ ಆಗಿದ್ದ ಇದ್ದಕ್ಕಿಂತಂತೆ ಅವನಿಗೆ ಉಸಿರಾಟದ ತೊಂದರೆಯಾಗಿದೆ. ಏನಾಯ್ತು ಅಂತ ನೋಡಿದ್ರೇ, ಆ ಬಾಲಕ ಚಿಕ್ಕದೊಂದು ವಿಸಿಲ್ (ಪಿಪಿ) ನುಂಗಿದ್ದನು. ಕೂಡಲೇ ಪೋಷಕರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಎರಡು ದಿನ ಟ್ರಿಟ್ಮೆಂಟ್ ಮಾಡಿ ವಿಸಿಲ್ ತೆಗೆದಯದೇ ಕಳುಹಿಸಿದ್ದಾರೆ. ನಂತರ ಎರಡು ತಿಂಗಳ ಬಳಿಕ ಮತ್ತೆ ಮಗುವಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಗಲೂ ಚಿಕಿತ್ಸೆ ನೀಡಿದ ವಿಮ್ಸ್ ವೈದ್ಯರು ವಿಸಿಲ್ ಹೊರಬಂದಿದೆ ಏನು ಆಗಿಲ್ಲವೆಂದಿದ್ದಾರೆ.  ಆದ್ರೇ ಪದೇ ಪದೇ ಮಗು ಅಸ್ವಸ್ಥವಾಗುತ್ತಿದ್ದಂತೆ ಪೋಷಕರು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಹೋಗಿ ತೋರಿಸಿದ್ದಾರೆ. ಮಗುವಿನ ಶ್ವಾಸಕೋಶದ ಬಳಿ ಪಿಪಿ ಇರುವುದು ಪತ್ತೆಯಾಗಿದೆ. ಕೂಡಲೇ ಬ್ರಾಂಕೋಸ್ಕೋಪಿ ಮೂಲಕ ಪಿಪಿ ಹೊರ ತೆಗೆದಿದ್ದಾರೆ. ಸದ್ಯ ಬಾಲಕ ಅರಾಮಗಿದ್ದಾನೆ..

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಡೀಲ್‌ ಹಣದಲ್ಲಿ ಹಾಲಶ್ರೀ 10 ಎಕರೆ ಭೂಮಿ ಖರೀದಿ, ಬಂಗಲೆ ನಿರ್ಮಾಣ..!

ದೂರು ನೀಡಿದ ಪೋಷಕರು

ಇನ್ನೂ ಘಟನೆ ಬಳಿಕ ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚು ಕಡಿಮೆಯಾದ್ರೇ ಮಗುವಿನ ಪ್ರಾಣವೇ ಕಳೆದು ಹೋಗುತ್ತಿತ್ತು. ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ ಆದ್ರೇ ಇಲ್ಲಿ ವೈದ್ಯರು ಆ ಪದಕ್ಕೆ ವಿರುದ್ಧವಾಗಿದ್ಧಾರೆಂದು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಅಲ್ಲದೇ ನಮ್ಮ ಮಗುವಿಗಾದಂತೆ ಇನ್ಯಾರಿಗೂ ಈ ರೀತಿಯಾಗಬಾರದೆಂದು ವಿಮ್ಸ್ ವೈದ್ಯರ ಮತ್ತು ಸಿಬ್ಬಂದಿ ವಿರುದ್ದ ವಿಮ್ಸ್ ನಿರ್ದೇಶಕರಿಗೆ ಹಾಗೂ ಬಳ್ಳಾರಿ ಎಸ್ಪಿ ಅವರಿಗೆ ದೂರು ನೀಡಿದ್ದಾರೆ ಬಾಲಕನ ತಂದೆ ಗವಿಸಿದ್ದಪ್ಪ.

ನಿರ್ಲಕ್ಷ್ಯ ಬೇಡ ಇನ್ನಾದ್ರೂ ಎಚ್ಚತ್ತುಕೊಳ್ಳಿ

ಇನ್ನೂ ವಿಮ್ಸ್ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ಆಗುತ್ತಿರೋದು ಇದೇ ಮೊದಲೇನಲ್ಲ.  ಅವಘಡಗಳು ನಡೆದಾಗ ಮಾತ್ರ  ಒಂದಷ್ಟ ಎಚ್ಚತ್ತುಕೊಳ್ಳುವ ವೈದ್ಯರು ಮತ್ತು ಸಿಬ್ಬಂದಿ ಮತ್ತದೆ ನಿರ್ಲಕ್ಷ್ಯ ಮಾಡ್ತಿರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.

click me!