ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ : 7 ಮಂದಿಯಿಂದ ಬಿಜೆಪಿ ಟಿಕೆಟ್‌ಗೆ ಬೇಡಿಕೆ

By Kannadaprabha News  |  First Published Oct 13, 2021, 3:36 PM IST
  • ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಟಿಕೆಟ್‌ಗೆ ಹೆಚ್ಚಾದ ಬೇಡಿಕೆ
  • ಏಳು ಮಂದಿ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಬೇಡಿಕೆ 

 ಮೈಸೂರು (ಅ.13):  ದಕ್ಷಿಣ ಪದವೀಧರ ಕ್ಷೇತ್ರದ (South graduate Constituency)  ಚುನಾವಣೆಯ ಬಿಜೆಪಿ (BJP) ಟಿಕೆಟ್‌ಗೆ ಈಗ ಬೇಡಿಕೆ ಹೆಚ್ಚಾಗಿದ್ದು, ಮೈ.ವಿ. ರವಿಶಂಕರ್‌ ಸೇರಿದಂತೆ ಏಳು ಮಂದಿ ಆಕಾಂಕ್ಷಿಗಳು ಟಿಕೆಟ್‌ಗೆ (ticket) ಬೇಡಿಕೆ ಇಟ್ಟಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ  ನಡೆದ ಮೈಸೂರು (Mysuru), ಮಂಡ್ಯ (Mandya), ಹಾಸನ ಮತ್ತು ಚಾಮರಾಜನಗರ ಕೋರ್‌ ಕಮಿಟಿ (core committee) ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ (Ashwath Narayan) ಅವರು, ಚುನಾವಣೆ ಸಂಬಂಧ ಇಂದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಅದರಂತೆ ನಾಲ್ಕು ಜಿಲ್ಲೆಯ ಮುಖಂಡರು ಮೈ.ವಿ. ರವಿಶಂಕರ್‌ಗೆ ಬೆಂಬಲ ಸೂಚಿಸಿದ್ದಾರೆ. ಉಳಿದಂತೆ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌, ಮೈಲ್ಯಾಕ್‌ ಅಧ್ಯಕ್ಷ ಎನ್‌.ವಿ. ಫಣೀಶ್‌, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ್‌, ಯೋಗೇಂದ್ರ, ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಈ.ಸಿ. ನಿಂಗರಾಜೇಗೌಡ, ಯಮುನಾ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿಸಿದರು.

Latest Videos

undefined

Mysuru : ಬಿಜೆಪಿ ಟಿಕೆಟ್‌ಗೆ ಗೋ. ಮಧುಸೂದನ್ ಆಕಾಂಕ್ಷಿ

ಜಿಲ್ಲೆಗೆ ತಲಾ ಇಬ್ಬರು ಸಂಚಾಲಕರನ್ನು ನೇಮಿಸಲು ನಿರ್ಧರಿಸಿದ್ದೇವೆ. ಜಿಲ್ಲಾ ಸಂಚಾಲಕರು (District conveners) ಮಂಡಲಕ್ಕೆ ಇಬ್ಬರು ಸಂಚಾಲಕರನ್ನು ನೇಮಿಸಲಾಗಿದೆ. ಇವರಿಗೆ ನ. 16, 17 ಮತ್ತು 18 ರಂದು ಮೂರು ದಿನಗಳು ಕಾರ್ಯಾಗಾರ ಏರ್ಪಡಿಸಿ ತರಬೇತಿ ನೀಡಲಾಗುವುದು. ನ. 16ರಂದು ಜಿಲ್ಲಾವಾರು ಸಭೆ ನಡೆಸುತ್ತೇವೆ. ದಕ್ಷಿಣ ಪದವೀಧರರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳು ವಿಧಾನ ಪರಿಷತ್ತಿನಲ್ಲಿ ಅನುಮೋದನೆ ದೊರೆಯುವುದಿಲ್ಲ. ಕಾಂಗ್ರೆಸ್‌ (Congress) ಸದಸ್ಯರು ವಿರೋಧಕ್ಕಾಗಿ ವಿರೋಧ ಮಾಡುತ್ತಾರೆ. ಮೇಲ್ಮನೆಯಲ್ಲೂ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅಭಿವೃದ್ಧಿ ಪರವಾದ ಮಸೂದೆ ಜಾರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಮಂಡ್ಯ ಉಸ್ತುವಾರಿ ಡಾ.ಸಿ.ನಾರಾಯಣಗೌಡ, ಹಾಸನ ಉಸ್ತುವಾರಿ ಗೋಪಾಲಯ್ಯ ಅವರು ದಕ್ಷಿಣ ಪದವೀಧರರ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ವಲಸಿಗರಾದ ನಮ್ಮ ಮೇಲೆ ಜವಾಬ್ದಾರಿ ಇದೆ. ಅಭ್ಯರ್ಥಿ ಗೆಲ್ಲಿಸಲು ಪಣತೊಟ್ಟಿದ್ದೇವೆ. ಬ್ಲೂ ಪ್ರಿಂಟ್‌ ಸಿದ್ಧಪಡಿಸಿದ್ದಾರೆ ಎಂದು ಅಶ್ವತ್‌್ಥ ನಾರಾಯಣ ತಿಳಿಸಿದರು.

ನಾನು ಕಾಂಗ್ರೆಸ್‌ ಪಕ್ಷದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಎಂದ ಮುಖಂಡ

ಉತ್ತರಪ್ರದೇಶದ (Uttar Pradesh) ಲಿಖಿಂಪುರ್‌ ಘಟನೆಯನ್ನು ಕಾಂಗ್ರೆಸ್‌ (Congress), ರೈತ ಚಳವಳಿಗಾರರು ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ವಿರುದ್ಧ ಪ್ರತಿಭಟನೆ ನಡೆಸುವ ಪ್ರಿಯಾಂಕಾ ಗಾಂಧಿ (Priyanka Gandhi), ರಾಹುಲ್‌ ಗಾಂಧಿ (Rahul Gandhi) ಅವರಿಗೆ ರಾಜಸ್ಥಾನದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ ಕಾಣುವುದಿಲ್ಲ. ಪಂಜಾಬಿನಲ್ಲಿ ಸರ್ಕಾರವೇ ಇಲ್ಲ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು, ಶಾಸಕರಾದ ಎನ್‌. ಮಹೇಶ್‌, ನಾರಾಯಣಸ್ವಾಮಿ, ಮೇಯರ್‌ ಸುನಂದಾ ಪಾಲನೇತ್ರ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಮುಖಂಡ ನಿಜಗುಣರಾಜು ಮೊದಲಾದವರು ಇದ್ದರು.

ಏಕೆ ಪತನಗೊಂಡಿತು?

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಮಾತನಾಡಿ, ಸಮ್ಮಿಶ್ರ ಸರ್ಕಾರ ಏಕೆ ಪತನಗೊಂಡಿತು ಎಂದು ನಮಗಿಂತ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಚೆನ್ನಾಗಿ ಗೊತ್ತಿದೆ. ಸಮ್ಮಿಶ್ರ ಸರ್ಕಾರ ಪತನವಾಗಿ 2 ವರ್ಷ ಕಳೆದಿದೆ. ಅದನ್ನು ನಾವೆಲ್ಲರೂ ಮರೆತಿದ್ದೇವೆ. ಬಿಜೆಪಿಯಿಂದ ಗೆದ್ದು ಶಾಸಕರಾಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಅದನ್ನೇ ಬಂಡವಾಳ ಮಾಡಿಕೊಂಡು ಮಾತಾಡುತ್ತಿದ್ದಾರೆ. ನಮಗೆ ಅದರ ಬಗ್ಗೆ ಗಮನ ಇಲ್ಲ ಎಂದು ತಿರುಗೇಟು ನೀಡಿದರು.

click me!