ಕಾರ್ಕಳ: ಹಾಡಹಾಗಲೇ ಆರು ಕಾಡುಕೋಣಗಳ ಸಂಚಾರ

By Kannadaprabha News  |  First Published May 30, 2020, 11:37 AM IST

ಆಹಾರವನ್ನು ಹುಡುಕುತ್ತಾ ಕಾಡುಕೋಣಗಳು ದಾರಿ ತಪ್ಪಿ ಕಾಡಿನಿಂದ ನಗರಕ್ಕೆ ಬಂದ ಘಟನೆ ಶುಕ್ರವಾರ ಕಾರ್ಕಳ ಕಸಬಾ ಗ್ರಾಮದ ಕಲ್ಲೋಟ್ಟೆಎಂಬಲ್ಲಿ ಕಂಡು ಬಂದಿದೆ.


ಕಾರ್ಕಳ(ಮೇ 30): ಆಹಾರವನ್ನು ಹುಡುಕುತ್ತಾ ಕಾಡುಕೋಣಗಳು ದಾರಿ ತಪ್ಪಿ ಕಾಡಿನಿಂದ ನಗರಕ್ಕೆ ಬಂದ ಘಟನೆ ಶುಕ್ರವಾರ ಕಾರ್ಕಳ ಕಸಬಾ ಗ್ರಾಮದ ಕಲ್ಲೋಟ್ಟೆಎಂಬಲ್ಲಿ ಕಂಡು ಬಂದಿದೆ.

ಪುರಸಭೆ ವ್ಯಾಪ್ತಿಯಲ್ಲಿ ಪೆರ್ವಾಜೆ, ಕಲ್ಲೋಟ್ಟೆನಾಗ ಬನದ ಹತ್ತಿರದಿಂದ ಬೃಹತ್‌ ಗಾತ್ರದ ಮೂರು ಕಾಡುಕೋಣಗಳು ಮುಖ್ಯ ರಸ್ತೆಯಾಗಿ ಸಾಗುತ್ತಿದ್ದ ವೇಳೆ ಸಾರ್ವಜನಿಕರು ಮೊಬೈಲ್‌ ಮೂಲಕ ಸೆರೆ ಹಿಡಿದ್ದಾರೆ. ಹಾಡಹಗಲೇ ರಾಜಾರೋಷವಾಗಿ ಜನವಸತಿ ಪ್ರದೇಶದಲ್ಲಿ ಕಾಡುಕೋಣಗಳು ಓಡಾಡುತ್ತಿರುವುದನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ.

Tap to resize

Latest Videos

ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಮುಖ್ಯಮಂತ್ರಿ!

ಒಟ್ಟು ಆರು ಕಾಡುಕೋಣಗಳು ಕಾಡಿನಿಂದ ನಾಡಿಗೆ ಅಗಮಿಸಿ ಕಲ್ಲೋಟ್ಟೆಭಾಗದ ಹೊಲದಲ್ಲಿದ್ದ ಬೆಳೆದ ಹುಲ್ಲು ತಿಂದು ಬಳಿಕ ಅಲ್ಲಿಂದ ನಾಗಬನದ ಹಾಡಿಯಿಂದ ಮುಖ್ಯರಸ್ತೆಯಲ್ಲಿ ಸಾಗಿವೆ. ಈ ಪೈಕಿ ಮೂರು ಕಾಡು ಕೋಣಗಳು ಕಾಡು ಸೇರಿದರೆ, ಇನ್ನುಳಿದ ಮೂರು ಕಾಡು ಕೋಣಗಳು ಸ್ವಲ್ಪ ಮುಂದೆ ತೆರಳಿ ಮತ್ತೊಂದು ಹೊಲದಲ್ಲಿ ಯಾವುದೇ ಭಯವಿಲ್ಲದೆ ಆರಾಮವಾಗಿ ರಾತ್ರಿಯಾಗುವರೆಗೆ ವಿಶ್ರಾಂತಿ ಪಡೆಯುತ್ತಿದ್ದವು.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 'ಉಮೇಶ್‌ ಕತ್ತಿ ಪಕ್ಷದ ವೇದಿಕೆಯಲ್ಲಿ ಮಾತನಾಡಲಿ'

ಸುದ್ದಿ ತಿಳಿದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅವುಗಳನ್ನು ಕಾಡಿಗೆ ಅಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಬೆಳ್ಳಗ್ಗಿನಿಂದ ರಾತ್ರಿವರೆಗೆ ಹೊಲದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಡುಕೋಣಗಳನ್ನು ತೊಂದರೆಯಾಗದಂತೆ ರಾತ್ರಿ ವೇಳೆ ಕಾಡಿಗೆ ಅಟ್ಟಿಸುವುದಾಗಿ ಅರಣ್ಯಾಧಿಕಾರಿ ಜಿ.ಡಿ. ದಿನೇಶ್‌ ತಿಳಿಸಿದ್ದಾರೆ.

click me!