ಕಂಟೈನರ್‌ನಲ್ಲಿ 59 ಕೋಣ, ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕೇರಳಕ್ಕೆ ಸಾಗಿಸುತ್ತಿದ್ದಾಗ ಕೋಟ ಪೊಲೀಸರು ಶುಕ್ರವಾರ ಮುಂಜಾನೆ ಇಲ್ಲಿನ ಸಾಯ್ಬರಕಟ್ಟೆಚೆಕ್ ಪೋಸ್ವ್‌ನಲ್ಲಿ ತಡೆದು 4 ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಟ(ಜು.25): ಕಂಟೈನರ್‌ನಲ್ಲಿ 59 ಕೋಣ, ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕೇರಳಕ್ಕೆ ಸಾಗಿಸುತ್ತಿದ್ದಾಗ ಕೋಟ ಪೊಲೀಸರು ಶುಕ್ರವಾರ ಮುಂಜಾನೆ ಇಲ್ಲಿನ ಸಾಯ್ಬರಕಟ್ಟೆಚೆಕ್ ಪೋಸ್ವ್‌ನಲ್ಲಿ ತಡೆದು 4 ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕೋಣ, ಎಮ್ಮೆಗಳನ್ನು ಹರಿಯಾಣದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆರೋಪಿಗಳನ್ನು ಕೇರಳ ಮೂಲದ ಅಬ್ದುಲ್ ಜಬ್ಬಾರ್ (35), ಜೋಮುನ್ (36), ಶಂಶುದ್ದೀನ್ (34), ಹರಿಯಾಣದ ಮುಖೀಮ್ (18) ಎಂದು ಗುರುತಿಸಲಾಗಿದೆ.
ಪೊಲೀಸರು 8 ಲಕ್ಷ ರು. ಮೌಲ್ಯದ ಕಂಟೈನರ್ ಲಾರಿ ಹಾಗೂ 2 ಲಕ್ಷ ಮೌಲ್ಯದ ಎಮ್ಮೆ, ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಜೊತೆಗೆ, ಎಮ್ಮೆ, ಕೋಣಗಳ ಮಾಲೀಕ ಕೇರಳದ ಅಬ್ದುಲ್ ಅಜೀಜ್ ಹಾಗೂ ಕಂಟೈನರ್ ಮಾಲೀಕ ಮೈಸೂರಿನ ರಫೀಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.