ಪಂಚ ನಿರ್ಣಯದ ಮೂಲಕ ಸರ್ಕಾರಕ್ಕೆ ಪಂಚ್ ಕೊಟ್ಟ ಸಾಹಿತ್ಯ ಸಮ್ಮೇಳನ

Published : Jan 06, 2019, 07:43 PM IST
ಪಂಚ ನಿರ್ಣಯದ ಮೂಲಕ ಸರ್ಕಾರಕ್ಕೆ ಪಂಚ್ ಕೊಟ್ಟ ಸಾಹಿತ್ಯ ಸಮ್ಮೇಳನ

ಸಾರಾಂಶ

ಪೇಡಾ ನಗರಿ ಧಾರವಾಡದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳಕ್ಕೆ ಇಂದು ತೆರೆ ಬಿದ್ದಿದೆ. ಪ್ರಮುಖವಾಗಿ ಸಮಾರೋಪ ಕಾರ್ಯಕ್ರಮದಲ್ಲಿ 5 ನಿರ್ಣಯಗಳನ್ನೂ ಸಹ ಕೈಗೊಳ್ಳಲಾಯ್ತು. ಹಾಗಿದ್ರೆ  ಆ ಐದು ನಿರ್ಣಯಗಳಾವುವು?

ಧಾರವಾಡ, [ಜ.06] ವಿದ್ಯಾ ಕಾಶಿ ಧಾರವಾಡದಲ್ಲಿ ಸಾಹಿತ್ಯ ಸಂಸ್ಕೃತಿಗಳ ಸಂಗಮವಾದ 84ನೇಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ತೆರೆ ಬಿದ್ದಿದೆ. 

ಕನ್ನಡಿಗರ ಅಂತರಾಳದಲ್ಲಿ ತಾನೊಬ್ಬ ಕನ್ನಡಿಗನೆಂಬ ಹೆಮ್ಮೆಯ ಭಾವವನ್ನು ಮೂಡಿಸಿದ್ದು, ವಿವಿಧ ಗೋಷ್ಠಿಗಳು ಹಲವು ವಿಚಾರಗಳನ್ನು ಮನದಾಳಕ್ಕಿಳಿಸಿವೆ. 

ಕನ್ಸಡ ಸಾಹಿತ್ಯ ಸಮ್ಮೇಳನದ ಸ್ವಾರಸ್ಯ ಪ್ರಸಂಗಗಳಿವು

ಜ್ಞಾನದಾಹವನ್ನು ನೀಗುವ ಪುಸ್ತಕ ಭಂಡಾರ ಮನವನ್ನು ಸಂಭ್ರಮಿಸಿದ್ರೆ, ರುಚಿಕರವಾದ ಭೋಜನವನ್ನು ಸವಿದ ಮನಗಳು ಸಮ್ಮೇಳನಕ್ಕೆ ಉಘೇ ಉಘೇ ಎಂದಿವೆ.

ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಕಂಬಾರರ ಮಾತುಕತೆ

ಇನ್ನು ಸಮ್ಮೇಳನದ ಕೊನೆಯ ದಿನವಾದ ಇಂದು [ಭಾನುವಾರ] ಸಮಾರೋಪ ಸಮಾರಂಭದಲ್ಲಿ  ಪ್ರಮುಖವಾಗಿ 5 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆ ನಿರ್ಣಯಗಳು ಈ ಕೆಳಗಿನಂತಿವೆ.

ಧಾರವಾಡ ಕನ್ನಡ ಸಮ್ಮೇಳನದ ಚಿತ್ರ ಸಂಪುಟ

1.ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ .
 2. ನಾಡಗೀತೆ ಅವಧಿ ಗರಿಷ್ಠ 2 ನಿಮಿಷ 30 ಸೆಕೆಂಡುಗಳಿಗೆ ನಿಗದಿಗೆ ನಿರ್ಣಯ.
3.1000 ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಕೈಬಿಡಬೇಕು.
4. ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡಲ್ಲಿ ಅವಕಾಶ.
5. 7ನೇ ತರಗತಿಯವರೆಗೆ ಶಿಕ್ಷಣ ರಾಷ್ಟ್ರೀಕರಣಗೊಳಿಸಬೇಕು.

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ