ಹಿಂದೂ ಕಾರ್ಯಕರ್ತನ ಮೇಲೆ ಗಂಭೀರ ಹಲ್ಲೆ : ಮೂವರು ಅರೆಸ್ಟ್

Suvarna News   | Asianet News
Published : Mar 16, 2021, 04:27 PM IST
ಹಿಂದೂ ಕಾರ್ಯಕರ್ತನ ಮೇಲೆ ಗಂಭೀರ ಹಲ್ಲೆ : ಮೂವರು ಅರೆಸ್ಟ್

ಸಾರಾಂಶ

ಲವ್ ಜಿಹಾದ್ ಕೇಸ್ ಪತ್ತೆಯೊಂದಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನ ಮೇಲೆ ದಾಳಿ ಮಾಡಿದ್ದ ಮೂವರು ಬಜರಂಗದಳದ ಕಾರ್ಯರ್ತರನ್ನು ಬಂಧಿಸಲಾಗಿದೆ. 

ಉಡುಪಿ (ಮಾ.16):  ಕಾರ್ಕಳದಲ್ಲಿ ಹಿಂದೂ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಮೂವರು ಕಾರ್ಯಕರ್ತರ ಬಂಧನವಾಗಿದೆ. 

ಹಿಂದೂ ಕಾರ್ಯಕರ್ತ ಅನಿಲ್ ಎಂಬವರ ಮನೆಗೆ ನುಗ್ಗಿ ತಲವಾರು ಬೀಸಿ ಹಲ್ಲೆ ನಡೆಸಲಾಗಿತ್ತು. ಕಾರ್ಕಳದ ಬಜರಂಗದಳದ ಸಂಚಾಲಕ ಸುನಿಲ್ ನಿಟ್ಟೆ,  ಕಾರ್ಕಳ ಬಜರಂಗದಳದ ಗೋರಕ್ಷಾ ಪ್ರಮುಖ್ ಪ್ರಸಾದ ನಿಟ್ಟೆ,  ಸಾಣೂರು ಭಜರಂಗದಳ ಸಂಚಾಲಕ ಶರತ್ ನಿಟ್ಟೆ ಎಂಬುವರನ್ನು ಬಂಧಿಸಲಾಗಿದೆ. 

VHP-ಬಜರಂಗದಳ ಸುದ್ದಿಗೋಷ್ಠಿ: ಹಿಂದೂ ಯುವಕರಿಗೆ ಸ್ವಾಮೀಜಿ ಖಡಕ್ ವಾರ್ನಿಂಗ್ ...

ಅನಿಲ್  ಹಿಂದೂ ಜಾಗರಣ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದರು ಎಂಬ ಸಿಟ್ಟಿನಿಂದ ದಾಳಿ ನಡೆಸಿದ್ದು, ಲವ್ ಜಿಹಾದ್ ಪ್ರಕರಣವೊಂದರ ಪತ್ತೆ ಸಂಬಂಧಿಸಿ ಎರಡು ಸಂಘಟನೆಗಳ ನಡುವೆ ಗಲಾಟೆ ನಡೆದಿತ್ತು. 

ಇದೇ ಕಾರಣಕ್ಕೆ ಅನಿಲ್ ಎಂಬವರ ಮನೆಗೆ ನುಗ್ಗಿ ಹೆತ್ತವರ ಮುಂದೆ ಕೊಲೆಯತ್ನ  ನಡೆಸಿ, ಗಂಭೀರವಾಗಿ ಹಲ್ಲೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿದ್ದ ಅನಿಲ್ ಅವರ ತಾಯಿಯನ್ನು ಕಾಲಿನಿಂದ ತುಳಿದು ಘಾಸಿಗೊಳಿಸಿ ವಿಕೃತಿ ಮೆರೆದಿದ್ದರು. ಬಳಿಕ ದಾಳಿಗೆ ಒಳಗಾಗಿದ್ದ ಅನಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಬಂಧಿಸಲಾಗಿದೆ.  

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌