
ಬಾಗಲಕೋಟೆ(ಮೇ.01): ಕೊರೋನಾ ಎರಡನೇ ಅಲೆಯ ಕಂಟಕ ಭೀಕರವಾಗುತ್ತಿದ್ದು, ಬಾಗಲಕೋಟೆಯಲ್ಲಿನ ತೋಟಗಾರಿಕೆ ವಿವಿಯ 27 ಜನರಿಗೆ ಸೋಂಕು ದೃಢಪಟ್ಟಿದೆ.
ಸ್ನಾತಕೋತ್ತರ ಪದವಿ ಓದುತ್ತಿರುವ ಆರು ವಿದ್ಯಾರ್ಥಿಗಳು, 7 ಜನ ಉಪನ್ಯಾಸಕರು ಮತ್ತು 14 ಜನ ಸಿಬ್ಬಂದಿ ಸೇರಿದಂತೆ 27 ಜನರಿಗೆ ಕೊರೋನಾ ಸೋಂಕು ದೃಢವಾಗಿದ್ದು ಸದ್ಯ ಸೋಂಕಿತರೆಲ್ಲಾ ಹೋಮ್ ಐಸೋಲೇಷನಲ್ಲಿದ್ದಾರೆ ಎಂದು ವಿವಿ ಕುಲಪತಿ ಡಾ.ಇಂದಿರೇಶ ತಿಳಿಸಿದ್ದಾರೆ.
"
ಬಾಗಲಕೋಟೆ: ಸೋಂಕಿತನ ಅಂತ್ಯಕ್ರಿಯೆಗೆ ನೂರಾರು ಮಂದಿ, ಕೇಸ್ ದಾಖಲು
ಉಪನ್ಯಾಸಕರಿಗೆ ವರ್ಕ್ ಫ್ರಮ್ ಹೋಮ್ ನಿಯೋಜನೆ ಮಾಡಿರುವ ತೋಟಗಾರಿಕೆ ವಿವಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳಿಗೂ ಐಸೋಲೇಷನ್‌ಗೆ ಸೂಚನೆ ನೀಡಿದೆ. ತೋಟಗಾರಿಕೆ ವಿವಿಯಲ್ಲಿ ಆರೋಗ್ಯ ಇಲಾಖೆ 442 ಜನರಿಗೆ ಸ್ವ್ಯಾಬ್ ಟೆಸ್ಟ್ ನಡೆಸಿದೆ ಎಂದು ವಿವಿ ಕುಲಪತಿ ಡಾ.ಇಂದಿರೇಶ ತಿಳಿಸಿದ್ದಾರೆ.