* ಅಣ್ಣ ಕೊವಿಡ್ ಗೆ ಬಲಿಯಾದ ಕಾರಣ ತಂಗಿ ಆತ್ಮಹತ್ಯೆಗೆ ಯತ್ನ
* ತುಮಕೂರಿನ ಶ್ರೀ ದೇವಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ಕುಮಾರ್.
* ವಿಚಾರ ತಿಳಿದ ತಂಗಿ ಆತ್ಮಹತ್ಯೆಗೆ ಯತ್ನ.
ತುಮಕೂರು, (ಮೇ.29): ಕೊರೋನಾದಿಂದ ಸಹೋದರ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಣಿಗಲ್‌ನಲ್ಲಿ ನಡೆದಿದೆ.
27 ವರ್ಷದ ಕುಮಾರ್‌ಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ತುಮಕೂರಿನ ಶ್ರೀದೇವಿ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ವಿಚಾರ ತಿಳಿದ ತಂಗಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಂಗಳೂರು: ಅಪಾರ್ಟ್‌ಮೆಂಟ್‌ನಿಂದ ಹಾರಿ ಸೋಂಕಿತ ಯುವಕ ಆತ್ಮಹತ್ಯೆ
25 ವರ್ಷದ ಯುವತಿ ಶ್ರೀದೇವಿ ಮೆಡಿಕಲ್ ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿಗೆ ಗಂಭೀರ ಗಾಯವಾಗಿದೆ.
ಕೂಡಲೇ ಯುವತಿಯನ್ನ ಅದೇ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪತ್ನಿಗೆ ಕೊರೋನಾ,ಗಂಡ ನೇಣಿಗೆ ಶರಣು
ಪತ್ನಿಯ ಕೋವಿಡ್ ವರದಿ ಪಾಸಿಟಿವ್ ಬಂದ ಕಾರಣ ಹೆದರಿದ ಗಂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗಾ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ರಂಗನಾಥಪುರ ನಿವಾಸಿ ರಾಜು (32 ವ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತನ ಪತ್ನಿ ರಶ್ಮಿಗೆ ಇದೇ ತಿಂಗಳು 27 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಆದರೆ ರಾಜು ವರದಿ ನೆಗೆಟಿವ್ ಆಗಿತ್ತು. ಮೇ.27ರಂದೇ ಸಂಜೆ ರಶ್ನಿ ಅವರನ್ನು ದೇವರಕೊಟ್ಟ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಇದರಿಂದ ಗಾಬರಿಗೊಂಡು ಪತಿ ರಾಜು ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.