25.560 ಲೀ. ಮದ್ಯ ವಶ : ಮೂವರ ಬಂಧನ

Kannadaprabha News   | Asianet News
Published : Dec 19, 2020, 10:37 AM IST
25.560 ಲೀ. ಮದ್ಯ ವಶ : ಮೂವರ ಬಂಧನ

ಸಾರಾಂಶ

ಅಬಕಾರಿ ಪೊಲೀಸರು ಟಿವಿಎಸ್‌ ವಾಹನ ಸೇರಿದಂತೆ ಸುಮಾರು 25.560 ಲೀ ಮದ್ಯ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತುರುವೇಕೆರೆ (ಡಿ.19):  ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಸ್ಥಳೀಯ ಅಬಕಾರಿ ಪೊಲೀಸರು ಟಿವಿಎಸ್‌ ವಾಹನ ಸೇರಿದಂತೆ ಸುಮಾರು 25.560 ಲೀ ಮದ್ಯ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ರಾಪಂ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈವರೆಗೆ ತಾಲೂಕಿನ 22 ಕಡೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪೈಕಿ ಕೋಳಘಟ್ಟಹಾಗೂ ಗವಿಪುರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

2 ಲಕ್ಷಕ್ಕೂ ಅಧಿಕ ಮೌಲ್ಯದ 71 ಲೀಟರ್ ಗೋವಾ ಮದ್ಯ ವಶ

ಮಾಯಸಂದ್ರ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವ ಹಾಗೂ ಟಿವಿಎಸ್‌ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರಾರ‍ಯಚರಣೆಯಲ್ಲಿ ಅಬಕಾರಿ ವೃತ್ತ ನಿರೀಕ್ಷಕ ರವಿಶಂಕರ್‌, ಸಿಬ್ಬಂದಿ ರಾಮು, ಕೇಶವ್‌ ಅಗಡಿ, ನರಸಿಂಹಮೂರ್ತಿ, ರವಿಕುಮಾರ್‌ ಇದ್ದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!