ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಂಗಳವಾರ ಒಂದೇ ದಿನ ಹೊಸದಾಗಿ 22 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ:ದಾವಣಗೆರೆ: ಹೊಸದಾಗಿ 22 ಪಾಸಿಟಿವ್ ಕೇಸ್ ಜಿಲ್ಲೆಯಲ್ಲಿ ವರದಿಯಾಗಿದ್ದು, ಇದರೊಂದಿಗೆ ಸಕ್ರಿಯ ಕೇಸ್‌ಗಳ ಸಂಖ್ಯೆ 106ರಷ್ಟಾಗಿದೆ. ಸೋಂಕಿನಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರ ಪೈಕಿ 6 ಜನರನ್ನು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.
undefined
ಇಂದಿನ ಪಾಸಿಟಿವ್ ಕೇಸ್‌ಗಳಲ್ಲಿ ಕೆಲ ಪ್ರಕರಣ ಹೊರತುಪಡಿಸಿದರೆ, ಇನ್ನುಳಿದವೆಲ್ಲಾ ಹಳೆ ರೋಗಿಗಳ ಸಂಪರ್ಕದವು ಎಂದರು. ಇಮಾಂ ನಗರ ಕಂಟೈನ್‌ಮೆಂಟ್ ಝೋನ್ ಸಮೀಪದ ಆನೆಕೊಂಡ, ವಿನಾಯಕ ನಗರ ಸೇರಿ 2 ಹೊಸ ಪ್ರದೇಶಗಳಲ್ಲಿ ಪ್ರಕರಣ ದಾಖಲಾಗಿವೆ. ಅಲ್ಲಿ ಹೊಸದಾಗಿ ಕಂಟೈನ್‌ಮೆಂಟ್ ಝೋನ್ ಮಾಡಲಾಗುವುದು. ಪಿ-585, 616 ಹಾಗೂ 635 ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಷ್ಟಾಚಾರದಂತೆ ಎಲ್ಲಾ ಪರೀಕ್ಷೆ ನಡೆಸಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಿದ ಬೆನ್ನಲ್ಲದೇ ಇಷ್ಟು ದಿನ ರೆಡ್ ಝೋನ್‌ನಲ್ಲಿದ್ದರೂ ನಿಯಂತ್ರಣದಲ್ಲಿದ್ದ ಸಕ್ರಿಯ ಸೋಂಕಿತರ ಸಂಖ್ಯೆ ಹೊಸ 19 ಕೇಸ್‌ಗಳೊಂದಿಗೆ 106ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನರನ್ನು ಭಯಭೀತರಾಗಿಸಿದೆ.
ಹೊಸದಾಗಿ ಸೋಂಕಿತ 19 ಜನರಲ್ಲಿ ಮೂವರು ಬಾಲಕರು, ಒಬ್ಬ ಬಾಲಕಿ, 8 ಜನ ಮಹಿಳೆಯರು, 7 ಪುರುಷರಿದ್ದಾರೆ. 35 ವರ್ಷದ ಮಹಿಳೆ ಪಿ-1247ಗೆ ಪಿ-694 ಸಂಪರ್ಕದಿಂದ ಸೋಂಕು ತಗುಲಿದೆ. 27 ವರ್ಷದ ಪುರುಷ ಪಿ-1248ಕ್ಕೆ, 58 ವರ್ಷದ ಮಹಿಳೆ ಪಿ-1249, 22 ವರ್ಷದ ಮಹಿಳೆ ಪಿ-1250ಕ್ಕೆ ಪಿ-662 ಸಂಪರ್ಕದಿಂದ ಸೋಂಕು ತಗುಲಿದೆ.
ಡಾಕ್ಟರ್‌ಗೆ ಪಾಸಿಟಿವ್: ಮೂಡಿಗೆರೆಯ ಜನರಲ್ಲಿ ಭಯದ ವಾತಾವರಣ
23 ವರ್ಷದ ಮಹಿಳೆ ಪಿ-1292, 36 ವರ್ಷದ ಮಹಿಳೆ ಪಿ-1293ಕ್ಕೆ ಪಿ-976 ಸಂಪರ್ಕದಿಂದ, 25 ವರ್ಷದ ಯುವಕ ಪಿ-1367ಕ್ಕೆ ಗುಜರಾತ್‌ನ ಅಹಮದಾಬಾದ್ ಸಂಪರ್ಕದಿಂದ, 30 ವರ್ಷದ ಮಹಿಳೆ ಪಿ-1368ಕ್ಕೆ ಕೇರಳ ಸಂಪರ್ಕ, 20 ವರ್ಷದ ಯುವಕ ಪಿ-1369ಕ್ಕೆ ಅಹಮ್ಮದಾಬಾದ್ ಸಂಪರ್ಕದಿಂದಾಗಿ ಸೋಂಕು ಬಂದಿದೆ. ಹಾಗೂ 11 ವರ್ಷದ ಬಾಲಕ ಪಿ-1370ಕ್ಕೆ, 13 ವರ್ಷದ ಬಾಲಕಿ ಪಿ-1372, 35 ವರ್ಷದ ಮಹಿಳೆ ಪಿ-1372ಕ್ಕೆ ಪಿ-662 ಸಂಪರ್ಕದಿಂದ ಸೋಂಕು ತಗುಲಿದೆ. 70 ವರ್ಷದ ವೃದ್ಧ ಪಿ-1373ಕ್ಕೆ ಜಾಲ ನಗರದ ಮೃತ ವಯೋವೃದ್ಧ ಪಿ-556 ಸಂಪರ್ಕದಿಂದ ಸೋಂಕು ತಗುಲಿರುವುದು ವರದಿಯಿಂದ ಸ್ಪಷ್ಟವಾಗಿದೆ.
ಹೊರ ರಾಜ್ಯದ ಮೂವರು, ಒಬ್ಬ ಪೇದೆಗೆ ಸೋಂಕು
ಹೊರ ರಾಜ್ಯದಿಂದ ಬಂದ 3 ಜನ, ಕಂಟೈನ್‌ಮೆಂಟ್ ಝೋನ್‌ನ ಸಂಪರ್ಕದಿಂದ ಓರ್ವ ಪೇದೆ ಸೇರಿದಂತೆ 19 ಜನರಲ್ಲಿ ಸೋಂಕು ದೃಢಪಟ್ಟಿವೆ. ಲಾಕ್ ಡೌನ್ ಸಡಿಲಿಕೆಯ ಮಾರನೆಯ ದಿನವೇ ಇಷ್ಟೊಂದು ಕೇಸ್‌ಗಳು ದೃಢಪಟ್ಟಿರುವುದು ಜನರನ್ನು ಗಾಬರಿಗೀಡು ಮಾಡಿವೆ. ಸೋಂಕಿತ ಪಿ-662ರ ಸಂಪರ್ಕದಿಂದ 6 ಜನರಿಗೆ, ಪಿ-976 ಸಂಪರ್ಕದಿಂದ ನಾಲ್ವರು, ಪಿ-663 ಸಂಪರ್ಕದಿಂದ ಮೂವರು, ಪಿ-694 ಮತ್ತು ಮೃತ ಜಾಲಿ ನಗರದ ವೃದ್ಧ ಪಿ-556 ಸಂಪರ್ಕದಿಂದ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ಗುಜರಾತ್‌ನ ಅಹಮ್ಮದಾಬಾದ್ ಟ್ರಾವೆಲ್ ಹಿಸ್ಟರಿಯ ಇಬ್ಬರು, ಕೇರಳದಿಂದ ಬಂದದ್ದ ಒಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕಂಟೈನ್‌ಮೆಂಟ್ ಝೋನ್‌ನಲ್ಲಿ ಕರ್ತವ್ಯ ನಿರ್ವಹಿಸಿದ 48 ವರ್ಷದ ಪೇದೆಗೂ ಸೋಂಕು ತಗುಲಿದ್ದು, ಇದೀಗ ಪಿಜೆ ಬಡಾವಣೆಯ ಪೊಲೀಸ್ ಕ್ವಾಟ್ರರ್ಸ್‌ನ್ನೂ ಕಂಟೈನ್‌ಮೆಂಟ್ ಎಂಬುದಾಗಿ ಜಿಲ್ಲಾಡಳಿತ ಘೋಷಿಸಿದೆ. ಕ್ವಾಟ್ರರ್ಸ್‌ನಿಂದ ಯಾರೊಬ್ಬರೂ ಹೊರ ಬರದಂತೆ ಸೂಚಿಸಿದ್ದು, ಅಗತ್ಯ ವಸ್ತುಗಳನ್ನು ಕ್ವಾಟ್ರರ್ಸ್‌ನೊಳಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಸೋಂಕಿತ ಪೇದೆ ಪಿ-1251ರ ಪ್ರಾಥಮಿಕ, ದ್ವಿತೀಯ ಸಂಪರ್ಕದ 20 ಮಂದಿ ಪೊಲೀಸ್ ಸಿಬ್ಬಂದಿ, 10 ಮಂದಿ ಹೋಂ ಗಾರ್ಡ್ಸ್ಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಪೊಲೀಸ್ ಕ್ವಾಟ್ರರ್ಸ್‌ನೊಂದಿಗೆ ಜಿಲ್ಲಾ ಕೇಂದ್ರದ ಕಂಟೈನ್‌ಮೆಂಟ್‌ಗಳ ಸಂಖ್ಯೆಯೂ 9ಕ್ಕೆ ಏರಿಕೆಯಾಗಿದೆ. ಬಾಷಾ ನಗರ, ಜಾಲ ನಗರ, ಇಮಾಂ ನಗರ, ಬೇತೂರು ರಸ್ತೆ, ಶಿವ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ರೈತರ ಬೀದಿ ಕಂಟೈನ್‌ಮೆಂಟ್ ಜೊತೆಗೆ ಪೊಲೀಸ್ ಕ್ವಾಟ್ರರ್ಸ್ 9ನೇ ಹೊಸ ಕಂಟೈನ್ ಮೆಂಟ್ ಆಗಿ ಘೋಷಣೆಯಾಗಿದೆ.