ಲಾರಿ-ಬಸ್ ಡಿಕ್ಕಿ, ಇಬ್ಬರು ಸಾವು, 10 ಜನಕ್ಕೆ ಗಾಯ

By Suvarna News  |  First Published Mar 1, 2020, 2:10 PM IST

ಬಸ್ ಹಾಗೂ ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಲಾರಿ ಹಾಗೂ ಬಸ್ ಡಿಕ್ಕಿಯಾಗಿ ಎರಡೂ ವಾಹನಗಳು ಹಳ್ಳಕ್ಕೆ ಉರುಳಿವೆ.


ತುಮಕೂರು(ಮಾ.01): ಬಸ್ ಹಾಗೂ ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಲಾರಿ ಹಾಗೂ ಬಸ್ ಡಿಕ್ಕಿಯಾಗಿ ಎರಡೂ ವಾಹನಗಳು ಹಳ್ಳಕ್ಕೆ ಉರುಳಿವೆ. ಘಟನೆಯಲ್ಲಿ 10 ಜನ ಗಾಯಗೊಂಡಿದ್ದಾರೆ.

ಲಾರಿ -ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಶಿರಾ ತಾಲೂಕಿನ ಉಜ್ಜನಕುಂಟೆ ಬಳಿ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ಪವನ್ ಹಾಗೂ ರಮೇಶ್ ಮೃತರು.

Tap to resize

Latest Videos

ಪೌರ ಕಾರ್ಮಿಕರಿಲ್ಲ: ಪತಿ, ಮಕ್ಕಳೊಂದಿಗೆ ಕಸ ಗುಡಿಸಿದ ಕಾರ್ಪೊರೇಟರ್..!

ಲಾರಿ ಹಾಗೂ ಖಾಸಗಿ ಬಸ್ ಡಿಕ್ಕಿಯಾದ ರಭಸಕ್ಕೆ ಹಳ್ಳಕ್ಕೆ ಉರುಳಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರಿಗೆ ಶಿರಾ ಹಾಗೂ ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

click me!