ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಭೀಕರ ಅಪಘಾತ: ಇಬ್ಬರು ಭಕ್ತರ ಸಾವು, ನಾಲ್ವರಿಗೆ ಗಾಯ

Published : Jan 10, 2020, 09:32 PM ISTUpdated : Jan 10, 2020, 09:34 PM IST
ಸವದತ್ತಿ  ಯಲ್ಲಮ್ಮನ ಸನ್ನಿಧಿಯಲ್ಲಿ ಭೀಕರ ಅಪಘಾತ: ಇಬ್ಬರು ಭಕ್ತರ ಸಾವು, ನಾಲ್ವರಿಗೆ ಗಾಯ

ಸಾರಾಂಶ

ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು  ಭಕ್ತರು ಸಾವುನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.  ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ

ಬೆಳಗಾವಿ, [ಜ.10]: ಸರ್ಕಾರಿ ಬಸ್ ಹರಿದು ಇಬ್ಬರು ಯಲ್ಲಮ್ಮ ಭಕ್ತರ ಸಾವನ್ನಪ್ಪಿರುವ ಘಟನೆ ಇಂದು [ಶುಕ್ರವಾರ] ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ನಡೆದಿದೆ.

ಬೆಳಗಾವಿಯ ಶಹಾಪುರ ನಿವಾಸಿ ನಿಕಿತಾ ರಮೇಶ್ ಹದಗಲ್(25) ಮತ್ತು ಚಿಂಚಕಂಡಿ ನಿವಾಸಿ ಬಸಪ್ಪ ವೆಂಕಪ್ಪ ಹಳೇಮನಿ(34) ಮೃತ ದುರ್ದೈವಿಗಳು.

ಬೆಳಗಾವಿ ಯೋಧ ಒಡಿಶಾ ಲಾಡ್ಜ್‌ನಲ್ಲಿ ನೇಣಿಗೆ ಶರಣು 

 ನಿಕಿತಾ ಮತ್ತು ಬಸಪ್ಪ ಸವದತ್ತಿ ಯಲ್ಲಮ್ಮ ದೇವಿಯ ಜಾತ್ರೆಗೆ ಬಂದಿದ್ದರು. ದುರದೃಷ್ಟ ಅಂದ್ರೆ ಇವರಿಬ್ಬರು ಯಲ್ಲಮ್ಮ ಗುಡ್ಡದ ಜೋಗೂಳಬಾವಿ ರಸ್ತೆ ಇಳಿಜಾರಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನು ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆ ದೂರು ದಾಖಲಾಗಿದೆ. ಅಪಘಾತ ಹೇಗೆ ನಡೆಯಿತು ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!