ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು, ರಾಜಕಾರಣಿಯಾಗಿ ಸುಲಭವಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ನ.09): ಈ ವರ್ಷ ಸಾಣೇಹಳ್ಳಿ ಶಿವಸಂಚಾರ ಕಲಾತಂಡಕ್ಕೆ 2 ಕೋಟಿ ಅನುದಾನ ನೀಡಲಾಗುವುದು. ಶಿವಕುಮಾರ ರಂಗಶಾಲೆಯನ್ನ ವಿಶ್ವ ವಿದ್ಯಾಲಯವನ್ನಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಿನ್ನೆ(ಮಂಗಳವಾರ) ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ನಡೆದ ಶಿವ ಸಂಚಾರ ರಾಷ್ಟೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಡಾ.ಪಂಡಿರಾಧ್ಯ ಶ್ರೀಗಳ ಕಾರ್ಯ ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ ಅಂತ ಹೇಳಿದ್ದಾರೆ.
undefined
ವೇದಿಕೆ ಮುಂದೆ ಕೆಲ ಜನ ನಿಂತ ಕಾರಣಕ್ಕೆ ಸಿಎಂ ಕಾಣುತ್ತಿಲ್ಲ ಎಂದ ಸಭಿಕರಿಗೆ, ನನ್ನ ಜನರು ನನ್ನ ನಡುವೆ ಯಾರೂ ಇರಬಾರದು ಎಂದ ಸಿಎಂ ನಗೆ ಚಟಾಕಿ ಹಾರಿಸಿದರು. ಎಲ್ಲರಿಗೂ ಕನ್ನಡದ ನಮಸ್ಕಾರ ಎಂದ ಸಿಎಂ ಬೊಮ್ಮಾಯಿ, ಡೆಸ್ಕ್ ಬಾರಿಸಿ ಚಪ್ಪಾಳೆ ಹಾಕುವಂತೆ ಜನರಿಗೆ ಸನ್ನೆ ಮಾಡಿದ್ದರು. ಎಲ್ಲಾ ಭಾರವನ್ನು ಕೆಳಗಿಳಿಸಿ ಎಲ್ಲಾ ಮರೆತಿರುವುದು ಅದ್ಭುತ ಕ್ಷಣ ಕೆಲವರು ಹಿಮಾಲಯಕ್ಕೆ ಹೋಗುತ್ತಾರೆ. ಕೆಲವರು ತಮ್ಮನ್ನು ತಾವು ಮರೆಯಲು ತಪಸ್ಸು ಮಾಡುತ್ತಾರೆ. ಕೆಲವರು ತಮ್ಮನ್ನು ಮರೆಯಲು ಮಾದಕ ದ್ರವ್ಯ ಸೇವಿಸುತ್ತಾರೆ. ಇವತ್ತು ಶ್ರೇಷ್ಠ ಕ್ಣಣಗಳನ್ನು ನೀವು ಅನುಭವಿಸುತ್ತಿದ್ದೀರಿ ನಾಟಕ, ಆಧ್ಯಾತ್ಮಿಕತೆಯ ಪ್ರಭಾವ ಪರಿಣಾಮಕಾರಿ ಆಧ್ಯಾತ್ಮಿಕ ಚಿಂತನೆಯ ನಾಟಕ ಪ್ರದರ್ಶನ ಸಾಣೇಹಳ್ಳಿಯ ಸಾಧನೆ ರಂಗಕಲೆ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಡಾ.ಪಂಡಿತಾರಾಧ್ಯ ಶ್ರೀ ಅದ್ಭುತ ಸಾಧನೆ ಮಾಡಿದ್ದಾರೆ ಎಂದರು.
MURUGHA SEER CASE: ಲೇಡಿ ವಾರ್ಡನ್ ರಶ್ಮಿಯನ್ನು ವಿಚಾರಣೆ ನಡೆಸಲಿರುವ ಬಾಲಚಂದ್ರ ನಾಯ್ಕ್
ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಮುಖ್ಯ ನಾವು ತಪ್ಪು ಮಾಡಿದರೆ ನಮಗೆ, ಮನೆತನಕ್ಕೆ ಕಷ್ಟ ಗುರುಗಳು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಿರಬೇಕು. ಡಾ.ಪಂಡಿತಾರಾಧ್ಯ ಶ್ರೀ ಶ್ರೇಷ್ಠ ಗುರುಗಳು ಕರಾರು ರಹಿತ ಪ್ರೀತಿಯೇ ಪರಮ ಭಕ್ತಿ ಈಗಿನ ಕಾಲದಲ್ಲಿ ದೇವರ ಜತೆಗೂ ಕರಾರು ಮಾಡುತ್ತೇವೆ. ಫಲ ಕೇಳಿ ಕಾಯಿ ಒಡೆಸುವ ಕರಾರು ಮಾಡುತ್ತೇವೆ. ಕಾರಾರು ರಹಿತವಾದ ಪ್ರೀತಿಯೇ ನಿಜವಾದ ಭಕ್ತಿ ಎಂದು ತಿಳಿಸಿದರು.
ಗುರುವಿನಲ್ಲಿ ಲೀನವಾಗಿ ಜರಗುವುದೇ ನಿಜವಾದ ಭಕ್ತಿ
ಸಾಣೇಹಳ್ಳಿಯಂತ ಪರಿಸರದಲ್ಲಿ ಹತ್ತು ಹಲವು ಗಂಟೆ ಕಳೆಯಬೇಕು. ನಾಗರೀಕತೆ ಬೆಳೆಯುತ್ತಿದೆ, ಸಂಸ್ಕೃತಿ ಏನಾಗಿದೆ, ನಾಗರಿಕತೆ ಅಂದರೆ ನಮ್ಮ ಅಗತ್ಯಕ್ಕೆ ಅನುಗುಣವಾದ ಅಭಿವೃದ್ಧಿ ಮೊದಲು ಸೈಕಲ್, ಒನಕೆ ಬಳಕೆ ಆಗುತ್ತಿತ್ತು. ನಾಗರೀಕತೆ ಬೆಳವಣಿಗೆ ಆಗಿದೆ, ಸಂಸ್ಕೃತಿ ಅಧಪತನದತ್ತ ಆಗಿದೆ. ನಮ್ಮ ಬಳಿ ಇರುವುದು ನಾಗರಿಕತೆ, ನಾವು ಏನಹ ಆಗಿರುವುದು ಎಂಬುದು ಸಂಸ್ಕೃತಿ ನಮ್ಮೊಂದಿಗೆ ನಾವು ಕಾಲ ಕಳೆದಾಗ ಅರ್ಥ ಆಗುತ್ತದೆ. ಬದುಕು ಹಂಗಿನ ಬದುಕಾಗಿಯೇ ಸಾಗಿದೆ ಹಂಗಿನ ಬದುಕು ತೊರೆಯುವುದೇ ಸಾಧನೆ ಎಂದರು.
ಪಡಕೊಂಡಷ್ಟು ಜಡ, ಕಳಕೊಂಡಷ್ಟು ಹಗುರ ಆಗುತ್ತದೆ ನಾನು ಎಕನಾಮಿಕ್ಸ್, ಆಧ್ಯಾತ್ಮಿಕ ವಿದ್ಯಾರ್ಥಿಯಾಗಿ ಹೇಳುತ್ತಿದ್ದೇನೆ ಎಕಾನಾಮಿಕ್ಸ್ ನಲ್ಲಿ ಪಾಪ ಪುಣ್ಯ, ಆಧ್ಯಾತ್ಮಿಕತೆಯಲ್ಲಿ ಲಾಭ ನಷ್ಟ ನೋಡುತ್ತೇನೆ. ಬದುಕಿನಲ್ಲಿ ಎರಡು ಕಷ್ಟ ಬಹಳ ಕಷ್ಟದ ಕೆಲಸ ಮಗುವಾಗಿದ್ದಾಗ ತುಂಬಾ ಚಂದದ ಫೋಟೋ ಇರುತ್ತವೆ ಮಗುವಾಗಿದ್ದಾಗ ಮುಗ್ಧತೆ ಇರುತ್ತದೆ. ಈಗಿನ ಚಿತ್ರ ಕರಾಳ ಆತ್ಮಸಾಕ್ಷಿಯಾಗಿ ನಡೆದುಕೊಳ್ಳಬೇಕು, ರಾಜಕಾರಣಿಯಾಗಿ ಸುಲಭವಲ್ಲ. ಕೆಲವರಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಶಕ್ತಿ ಇರುತ್ತದೆ. ನಾಟಕೋತ್ಸವದ ಮೂಲಕ ಕೆಲ ಮೌಲ್ಯ ಪಡೆದುಕೊಳ್ಳುವ ಕೆಲಸ ಆಗಬೇಕು ಹಿರಿಯರು ನೀಡಿದ ಮೌಲ್ಯ ನಮ್ಮ ಮಕ್ಕಳಿಗೆ ನೀಡಿದರೆ ಸಾರ್ಥಕ ಎಂದರು.
ಹೊಸದುರ್ಗ ತಾಲೂಕಿನ ವಾಣಿವಿಲಾಸ ಸಾಗರ ಡ್ಯಾಂ ಹಿನ್ನೀರಿನಲ್ಲಿ ಬ್ರಿಡ್ಜ್ ನಿರ್ಮಾಣ ಬ್ರಿಡ್ಜ್ ಗೆ ಡಾ.ಪಂಡಿತಾರಾಧ್ಯ ಶ್ರೀ ಹೆಸರು ನಾಮಕರಣಕ್ಕೆ ಸೂಕ್ತ ಕ್ರಮ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮನವಿ ಮಾಡಿದ್ದಾರೆ. ಪರಿಶೀಲಿಸಿ ಡಾ.ಪಂಡಿತಾರಾಧ್ಯ ಶ್ರೀ ಹೆಸರು ನಾಮಕರಣಕ್ಕೆ ಕ್ರಮದ ಭರವಸೆಯನ್ನು ಸಿಎಂ ನೀಡಿದರು.