ಮೃತ ಕಾಡಾನೆಗೆ ಅಂತಿಮ ನಮನ ಸಲ್ಲಿಸಿದ 17 ಕಾಡಾನೆಗಳು: ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಫೋಟೋ!

By Govindaraj S  |  First Published Oct 26, 2024, 7:51 PM IST

ಮನುಷ್ಯ ಸಾವಲ್ಲಿಯೂ ತನ್ನವರು ಅನ್ನೋದನ್ನು ಕೆಲವೊಮ್ಮೆ ಮರೆತು ಅಂತಿಮ ಮುಖ ನೋಡೋದಕ್ಕೂ ಹಿಂದೇಟು ಹಾಕ್ತಾನೇ. ಮನುಷ್ಯ ತನ್ನಲ್ಲಿರುವ ಮಾನವೀಯ ಗುಣವನ್ನು ಮೆರೆತು ಹೋಗುತ್ತಿರುವ ಕಾಲ ಘಟ್ಟ ಇದು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.26): ಮನುಷ್ಯ ಸಾವಲ್ಲಿಯೂ ತನ್ನವರು ಅನ್ನೋದನ್ನು ಕೆಲವೊಮ್ಮೆ ಮರೆತು ಅಂತಿಮ ಮುಖ ನೋಡೋದಕ್ಕೂ ಹಿಂದೇಟು ಹಾಕ್ತಾನೇ. ಮನುಷ್ಯ ತನ್ನಲ್ಲಿರುವ ಮಾನವೀಯ ಗುಣವನ್ನು ಮೆರೆತು ಹೋಗುತ್ತಿರುವ ಕಾಲ ಘಟ್ಟ ಇದು. ಮನುಷ್ಯರಿಗಿಂತ ಪ್ರಾಣಿಗಳಲ್ಲಿ ತನ್ನ ಸಂಬಂಧಿಯೊಬ್ಬ ಸಾವನ್ನಪ್ಪಿರೋದು ಗೊತ್ತಾಗ್ತಿದ್ದಂತೆ ಅದೆಷ್ಟೋ ದೂರವಾದ್ರೂ ಹುಡುಕಿಕೊಂಡು ಹೋಗಿ ಅಂತಿಮ ನಮನ ಸಲ್ಲಿಸುತ್ತಾ? ಹೀಗೊಂದು ಅಚ್ಚರಿ ಅನಿಸೋ ಮನಕಲುಕುವು ಪೋಟೋಗಳು ಭದ್ರಾ ಅಭಯಾರಣ್ಯದ ಕ್ಯಾಮರಾದಲ್ಲಿ ಸೆರೆಯಾಗಿದೆ. 

Tap to resize

Latest Videos

ಆನೆಗಳು ಸಂಬಂಧಕ್ಕೂ ಅತೀಯಾದ ಬೆಲೆ: ಅತೀ ಗಾತ್ರದ ಪ್ರಾಣಿ ಅಂದ್ರೇ ಅದು ಆನೆ..ಒಂಟಿ ಸಲಗ,  ಸಾಕಿದ್ರೆ ಮಾವುತ ಕಾವಡಿಗರಿದ್ದರೇ ಮಾತ್ರ ಶಾಂತವಾಗಿ ವರ್ತನೆ ಇರುತ್ತೆ. ಕಾಡಲ್ಲಿದ್ರೆ ಆನೆ ನಡೆದಿದ್ದೇ ಹಾದಿ.ಊರು ಯಾವುದೇ ಇರ್ಲಿ.. ಆನೇ ತಾನೂ ಹೊರಟ್ಟಿದ್ದೇ ಹಾದಿ.. ಆನೆ ಕಂಡ್ರೆ ಯಾರಿಗೆ ಭಯವಿಲ್ಲ.ಅದ್ರಲ್ಲಿ ಕಾಡಾನೆಗಳ ಹಿಂಡು ಬಂತೆಂದ್ರೆ ಊರು ಊರೇ ಹೆದ್ರಿ ಮನೆಯಲ್ಲಿರುತ್ತೇ. ಇದ್ರೊಂದಿಗೆ ಆನೆಯ ಮತ್ತೊಂದು ಅಪರೂಪದ ಗುಣವೊಂದು ಹೊರಬಿದ್ದಿದೆ. ಅದು ಆನೆಗಳು ಸಂಬಂಧಕ್ಕೂ ಅತೀಯಾದ ಬೆಲೆ ಕೊಡ್ತಾವಾ? ಎಂಬ ಹೊಸ ವಿಚಾರವೊಂದು ಹೊರಬಿದ್ದಿದೆ. ಅದು ಮನುಷ್ಯನಿಗೂ ಮೀರಿದಂತಹದ್ದೂ ಅನ್ನೋದು ಪ್ರೂವ್ ಅಯ್ತಾ ? ಹೌದು ಈ ಮಾತನ್ನ ಯಾಕೇ ಹೇಳ್ತೀವಿ ಅಂದ್ರೆ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅಭಯಾರಣ್ಯದ ಹೆಬ್ಬೆ ವಲಯದಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಆನೆಯ ಸಾವಿಗೆ ಅಂತಿಮ ನಮನ ಸಲ್ಲಿಸಿರೋ ಪೋಟೋಗಳು ಟ್ರ್ಯಾಪ್ ಕ್ಯಾಮರಾನಲ್ಲಿ ರೇಕಾರ್ಡ್ ಅಗಿದೆ.

ಅದೆಷ್ಟೋ ದೂರವಾದ್ರೂ ಹುಡುಕಿಕೊಂಡು ಹೋಗಿ ಅಂತಿಮ ನಮನ: ಹೌದು ಮುತ್ತೋಡಿ ಅಭಯಾರಣ್ಯದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಅದ್ರೆ ಆದನ್ನ ಸುಡುವಂತಿಲ್ಲ. ಮಣ್ಣಿನ ಹುತ್ತು ಹಾಕುವಂತಿಲ್ಲ. ಇದು ಅಭಯಾರಣ್ಯದ ಸೂಚನೆ. ಅದ್ರಂತೆ ಅಲ್ಲಿಯೇ ಕಾಡಾನೆಯ ಮೃತದೇಹವನ್ನ ಬಿಟ್ಟು ಬಂದಿದ್ರು. ಬರೋವಾಗ ಅಲ್ಲಿ ನೋಡೋಣ ಹೇಗೆ ಡಿ ಕಂಪೋಸ್ ಅಗುತ್ತೇ. ಅಂತಾ ಪರಿಶೀಲನೆಗಾಗಿಯೇ ಟ್ರ್ಯಾಪ್ ಕ್ಯಾಮರಾ ಹಾಕಲಾಗಿತ್ತು. ಇದು ಭದ್ರ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ವಿಶೇಷ ಪ್ರಯತ್ನವೂ ಅಗಿತ್ತು. ಆ ಕ್ಯಾಮರದಲ್ಲಿ ಸೆರೆಯಾಗಿದ್ದು ಅಲ್ಲಿಗೆ ಸುಮಾರು 17 ಕಾಡಾನೆಗಳು ಬಂದಿದೆ. ಮೃತಪಟ್ಟಿರೋ ಆನೆಯ ಮುಂದೇ ಹಲವು ಹೊತ್ತು ನಿಂತಿದೆ. ಅಂತಿಮ ನಮನವನ್ನು ಸಲ್ಲಿಸಿರೋದು ಸೆರೆಯಾಗಿದೆ. 

ಕಮಲ್ ಹಾಸನ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದ ಇಳಯರಾಜ ಈ ಚಿತ್ರಕ್ಕೆ ಮಾತ್ರ ನೋ ಅಂದಿದ್ದರಂತೆ!

ಇದು ಇಂಟ್ರೆಸ್ಟಿಂಗ್ ಹೌದು. ಸಂಬಂಧಿಕರ ಆನೆಗಳು ತನ್ನವನೂ ಮೃತಪಟ್ಟಾಗ ಆ ಜಾಗಕ್ಕೆ ಹೋಗುತ್ತೇ ಅನ್ನೋದು ಹಲವರು ಹೇಳ್ತಿದ್ರು ಅದ್ರೆ ಈಗ ಅದು ಪ್ರೂವ್ ಅಗಿದೆ. ಇದ್ರ ಜೊತೆಯಲ್ಲಿ ಮತ್ತೊಂದು ವಿಚಾರವೂ ಇದೆ. ಇಡೀ ಕುಟುಂಬವೇ ಅಂದ್ರೆ ಒಂದೇ ವಂಶದ ಎಲ್ಲ ಆನೆಗಳು ವರ್ಷಕ್ಕೊಮ್ಮೆ ಒಂದು ಕಡೆ ಸೇರುತ್ತೇ ಅಲ್ಲಿ ಗುಂಪುಗುಂಪುಗಳ ನಡುವೇ ಮರಿಆನೆಗಳು  ಗುಂಪು ಬದಲಾವಣೆಯ ಜೊತೆಗೆ ಆನೆಗಳು ಸಂಬಂಧಕ್ಕೂ ಅತೀಯಾದ ಬೆಲೆ ಕೊಡ್ತಾವಾ ಎನ್ನುವುದು ಹಿರಿಯ ಅರಣ್ಯಾಧಿಕಾರಿಗಳು ಮಾತು. ಒಟ್ಟಾರೆ ನಿಜಕ್ಕೂ ಇಂದು ಮನುಷ್ಯನೇ ತನ್ನ ಜೊತೆಗಾರ ಮೃತಪಟ್ರು ಯಾವುದೋ ಕೆಲಸದ ನಡುವೇ ಕೊನೆಯ ಮುಖವನ್ನು ನೋಡೋಕೆ ಹೋಗೋದಿಲ್ಲ.ಆದ್ರೆ ಮೂಕ ಪ್ರಾಣಿ ಅದ್ರಲ್ಲಿಯೂ ತನ್ನ ಸಂಬಂಧಿ ಆನೆಯೊಂದು ಮೃತಪಟ್ರೆ ಉಳಿದ ಆನೆಗಳು ಹುಡುಕಿಕೊಂಡು ಬರ್ತಾವೇ ಅಂತಿದ್ರೂ ಅದ್ರೆ ಈಗ ಅದು ನಿಜವಾಗಿದೆ ಅನ್ನೋದಕ್ಕೆ ಸಾಕ್ಷಿಯಾಗಿ ಕ್ಯಾಮೆರ ಟ್ರಾಪ್ ಪೋಟೋಗಳು ಇವೆ.

click me!