ಮಸ್ಕಿ: ಭಾರೀ ಮಳೆ, ಸಿಡಿಲು ಬಡಿದು ವ್ಯಕ್ತಿ ಸೇರಿ 16 ಕುರಿಗಳು ಸಾವು

Kannadaprabha News   | Asianet News
Published : Apr 15, 2021, 10:52 AM IST
ಮಸ್ಕಿ:  ಭಾರೀ ಮಳೆ, ಸಿಡಿಲು ಬಡಿದು ವ್ಯಕ್ತಿ ಸೇರಿ 16 ಕುರಿಗಳು ಸಾವು

ಸಾರಾಂಶ

ಗುಡುಗು ಮಿಂಚಿನ ಮಳೆ| ಸಿಡಿಲು ಬಡಿದು ವ್ಯಕ್ತಿ ಜೊತೆಗೆ 16 ಕುರಿಗಳು ಸಾವು| ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಆನಂದಗಲ್‌ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಕವಿತಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|

ಕವಿತಾಳ(ಏ.15): ಮಸ್ಕಿ ತಾಲೂಕಿನ ಆನಂದಗಲ್‌ ಗ್ರಾಮದ ಹತ್ತಿರ ಸಿಡಿಲು ಬಡಿದು ವ್ಯಕ್ತಿ ಸೇರಿ 16 ಕುರಿಗಳು ಸಾವನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿ ಲಿಂಗಸುಗೂರು ತಾಲೂಕಿನ ಮೇದಿನಾಪುರ ಗ್ರಾಮದ ಈರಪ್ಪ (32) ಎಂದು ಗುರುತಿಸಲಾಗಿದೆ. 

ಸಂಜೆ ದಟ್ಟವಾಗಿ ಕವಿದ ಮೋಡದ ವಾತಾವರಣದಲ್ಲಿ ಗುಡುಗು ಮಿಂಚಿನ ಮಳೆಯಾಗಿದೆ. ಇದೇ ವೇಳೆ ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. 

4 ದಿನ ಭಾರೀ ಮಳೆ: ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

ಈ ವೇಳೆ ಸಿಡಿಲು ಬಡಿದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇದರ ಜೊತೆಗೆ 16 ಕುರಿಗಳು ಸಾವನಪ್ಪಿವೆ. ಘಟನೆಗೆ ಸಂಬಂಧಿಸಿದಂತೆ ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು