ಪ್ರತಿನಿತ್ಯ 15 ಸಾವಿರ ಫುಡ್‌ ಕಿಟ್‌: ರೇಣುಕಾಚಾರ್ಯ

By Kannadaprabha News  |  First Published Apr 16, 2020, 10:32 AM IST

ಹೊನ್ನಾಳಿ- ನ್ಯಾಮತಿ ಉಭಯ ತಾಲೂಕುಗಳ ಪೌರಕಾರ್ಮಿಕರು ಸೇರಿದಂತೆ ಕೊರೋನಾ ವೈರಾಣು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡವರು ಹಾಗೂ ನಿರ್ಗತಿಕರಿಗೆ ಲಾಕ್‌ ಡೌನ್‌ ಮುಗಿಯುವವರೆಗೆ ಪ್ರತಿನಿತ್ಯ 10ರಿಂದ 15 ಸಾವಿರ ಫುಡ್‌ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಿಎಂ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.


ದಾವಣಗೆರೆ(ಏ.16): ಹೊನ್ನಾಳಿ- ನ್ಯಾಮತಿ ಉಭಯ ತಾಲೂಕುಗಳ ಪೌರಕಾರ್ಮಿಕರು ಸೇರಿದಂತೆ ಕೊರೋನಾ ವೈರಾಣು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡವರು ಹಾಗೂ ನಿರ್ಗತಿಕರಿಗೆ ಲಾಕ್‌ ಡೌನ್‌ ಮುಗಿಯುವವರೆಗೆ ಪ್ರತಿನಿತ್ಯ 10ರಿಂದ 15 ಸಾವಿರ ಫುಡ್‌ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಿಎಂ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪೌರ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ತಮ್ಮ ಧರ್ಮಪತ್ನಿ ಸುಮಾ ರೇಣುಕಾಚಾರ್ಯ ಹಾಗೂ ಕುಟುಂಬದೊಂದಿಗೆ ಪೌಷ್ಠಿಕ ಆಹಾರ ಮತ್ತು ಶುದ್ಧ ಕುಡಿಯುವ ನೀರನ್ನು ವಿತರಿಸಿ ಅವರು ಮಾತನಾಡಿದರು.

Fact Check| ಮಾಧ್ಯಮಗಳ ಎಡವಟ್ಟಿಂದ ಮುಸ್ಲಿಂಗೆ ಥಳಿತ!

Latest Videos

undefined

ನಾಡಿನ ಜನತೆಯನ್ನು ಆಂತಕಕ್ಕೆ ಈಡುಮಾಡಿರುವ ಕೋವಿಡ್‌-19 ವೈರಸ್‌ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ತೊಲಗಿಸಲು ಕೇವಲ ಸರ್ಕಾರ, ಆಡಳಿತ ವ್ಯವಸ್ಥೆಯಿಂದ ಸಾಧ್ಯವಾಗುವುದಿಲ್ಲ. ಸರ್ಕಾರಗಳ ಜತೆ ಇಡೀ ಸಮುದಾಯದ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಈ ಮಹಾಮಾರಿ ಹಾವಳಿಯಿಂದ ಹೊರಬರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸುವ ಮೂಲಕ ಸಹಕರಿಸಬೇಕು ಎಂದು ಸಾರ್ವಜನಕರಲ್ಲಿ ಮನವಿ ಮಾಡಿದರು.

ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ 12 ತಬ್ಲಿಘಿಗಳು ಕೊನೆಗೂ ಸಿಕ್ಕಿಬಿದ್ರು!

ತಾಲೂಕು ಪಂಚಾಯಿತಿ ಪ್ರಭಾರ ಅಧ್ಯಕ್ಷ ಕೆ.ರಂಗಪ್ಪ, ತಹಸೀಲ್ದಾರ್‌ ತುಷಾರ್‌ ಬಿ. ಹೊಸೂರು, ತಾಪಂ ಇಒ ಗಂಗಾಧರಮೂರ್ತಿ, ಪಪಂ ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಬಿಜೆಪಿ ತಾಲೂಕು ಆಧ್ಯಕ್ಷ ಜೆ.ಕೆ. ಸುರೇಶ್‌, ಪ.ಪಂ. ಸದಸ್ಯರು, ಮುಖಂಡ ಎಚ್‌.ಬಿ. ಮೋಹನ್‌, ಮಹೇಶ್‌ ಹುಡೇದ್‌ ಮುಂತಾದವರು ಇದ್ದರು.

click me!