
ತೀರ್ಥಹಳ್ಳಿ(ಜು.21): ವಿಷಯುಕ್ತ ಅಣಬೆ ತಿಂದ ಒಂದೇ ಕುಟುಂಬದ 15 ಮಂದಿ ಅಸ್ವಸ್ಥಗೊಂಡ ಘಟನೆ ತಾಲೂಕಿನ ಕೋಣಂದೂರು ಸಂತೆಹಕ್ಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಒಂದೇ ಕುಟುಂಬದ 15 ಮಂದಿ ಶುಕ್ರವಾರ ರಾತ್ರಿ ಮನೆಯ ಹಿಂದಿದ್ದ ಅಣಬೆ ಸಂಗ್ರಹಿಸಿ ಅಡುಗೆ ಮಾಡಿದ್ದಾರೆ. ರಾತ್ರಿ ಊಟದ ಬಳಿಕ 11 ಗಂಟೆ ಸಮಯದಲ್ಲಿ ಹೊಟ್ಟೆನೋವು ಹಾಗೂ ವಾಂತಿ ಸಮಸ್ಯೆ ಕಾಣಿಸಿಕೊಂಡಿದೆ.
ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?
ತಕ್ಷಣ ಗ್ರಾಮಸ್ಥರು ತುರ್ತು ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಅವರು ಆರೋಗ್ಯವಾಗಿದ್ದು, ಭಾನುವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ.