ಬಾಗಲಕೋಟೆಗೆ ತಬ್ಲೀಘಿಗಳ ಕಾಟ: ಮತ್ತೆ 15 ಕೊರೋನಾ ಪಾಸಿಟಿವ್‌..!

Kannadaprabha News   | Asianet News
Published : May 13, 2020, 10:33 AM ISTUpdated : May 18, 2020, 05:38 PM IST
ಬಾಗಲಕೋಟೆಗೆ ತಬ್ಲೀಘಿಗಳ ಕಾಟ: ಮತ್ತೆ 15 ಕೊರೋನಾ ಪಾಸಿಟಿವ್‌..!

ಸಾರಾಂಶ

ಮಂಗಳವಾರ ಒಂದೇ ದಿನ 15 ಕೊರೋನಾ ಪಾಸಿಟಿವ್‌| ಸೋಂಕಿತರ ಸಂಖ್ಯೆ 53 ರಿಂದ 68ಕ್ಕೆ ಏರಿಕೆ| ರಾಜಸ್ಥಾನದ ಅಜ್ಮೇರ್‌ ಹಾಗೂ ಗುಜರಾತ್‌ನ ಅಹ್ಮದಾಬಾದ್‌ ತಬ್ಲೀಘಿಗಳ ಕಾಟದಿಂದ ಸೋಂಕಿತರ ಪ್ರಮಾಣದಲ್ಲಿ ಏರಿಕೆ| ಮಂಗಳವಾರ ಸೋಂಕು ದೃಢಪಟ್ಟವರಲ್ಲಿ ಗುಜರಾತನ ಅಹ್ಮದಾಬಾದನಿಂದ ಮುಧೋಳಕ್ಕೆ ಮರಳಿ ಬಂದ 17 ಜನರಲ್ಲಿ 14 ಜನರಿಗೆ ಸೋಂಕು ದೃಢ|

ಬಾಗಲಕೋಟೆ(ಮೇ.13): ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 15 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 53 ರಿಂದ 68ಕ್ಕೆ ಏರಿಕೆಯಾಗಿವೆ. ರಾಜಸ್ಥಾನದ ಅಜ್ಮೇರ್‌ ಹಾಗೂ ಗುಜರಾತ್‌ನ ಅಹ್ಮದಾಬಾದ್‌ ತಬ್ಲೀಘಿಗಳ ಕಾಟದಿಂದ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮಂಗಳವಾರ ಸೋಂಕು ದೃಢಪಟ್ಟವರಲ್ಲಿ ಗುಜರಾತನ ಅಹ್ಮದಾಬಾದನಿಂದ ಮುಧೋಳಕ್ಕೆ ಮರಳಿ ಬಂದ 17 ಜನರಲ್ಲಿ 14 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನೋರ್ವ ವ್ಯಕ್ತಿಗೂ ಸೋಂಕು ದೃಢವಾಗಿದ್ದು ಆ ವ್ಯಕ್ತಿಯೂ ಮುಧೋಳದವನಾಗಿದ್ದಾನೆ.

ರಾಜ್ಯದಲ್ಲಿ ನಿನ್ನೆ ದಾಖಲೆಯ 63 ಕೇಸು: ಕೊರೋನಾ ಮುಕ್ತ ಜಿಲ್ಲೆ 5 ಮಾತ್ರ!

ಒಂದೇ ಬಸ್‌ನಲ್ಲಿ ಬಂದವರು:

ಬನಹಟ್ಟಿ ಹಾಗೂ ಮುಧೋಳದಲ್ಲಿ ಸೋಂಕು ದೃಢವಾದ 15 ಜನರು ಅಹ್ಮದಾಬಾದ್‌ನಿಂದ ಬಾಗಲಕೋಟೆ ಜಿಲ್ಲೆಗೆ ಒಂದೆ ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿದವರಾಗಿದ್ದಾರೆ. ಒಟ್ಟು 29 ಜನರು ಒಂದೇ ವಾಹನದಲ್ಲಿ ಮುಧೋಳ ಹಾಗೂ ಬನಹಟ್ಟಿಗೆ ಬಂದಿದ್ದಾರೆ. ಉಳಿದವರ ಪರೀಕ್ಷಾ ವರದಿಗಳು ಸಹ ನಿರೀಕ್ಷೆಯಲ್ಲಿವೆ ಎಂದು ಹೇಳಲಾಗುತ್ತಿದೆ.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!