ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ : ಎಲ್ಲಿಂದ ಎಲ್ಲಿವರೆಗೆ?

By Kannadaprabha News  |  First Published Feb 20, 2021, 2:53 PM IST

ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮಂಡಳಿ ಆದೇಶಿಸಿದೆ. 


ರಾಮನಗರ(ಫೆ.20):  ಜನಜಾಗೃತಿ ವೇದಿಕೆ ಫೆ. 20ರಂದು ರಾಮ​ನ​ಗರ ಟೌನ್‌ ಬಂದ್‌ಗೆ ಕರೆ ನೀಡಿ​ರುವ ಹಿನ್ನೆ​ಲೆ​ಯಲ್ಲಿ ಕಾನೂನು ಸುವ್ಯ​ವಸ್ಥೆ ಕಾಪಾ​ಡುವ ಉದ್ದೇ​ಶ​ದಿಂದ ತಾಲೂಕು ಆಡ​ಳಿತ ಫೆ. 19ರ ರಾತ್ರಿ 10ರಿಂದ ಫೆ. 21ರ ಮಧ್ಯ​ರಾತ್ರಿ 12 ಗಂಟೆ​ವ​ರೆಗೆ ನಿಷೇ​ಧಾಜ್ಞೆ ಜಾರಿಗೊಳಿಸಿ ಆದೇಶ ಹೊರ​ಡಿ​ಸಿದೆ.

ವಿವಿಧ ರಾಜ​ಕೀಯ ಪಕ್ಷ​ಗಳು ಮತ್ತು ಸಂಘ​ಟ​ನೆ​ಗಳು ರಾಮ​ನ​ಗರ ಬಂದ್‌ಗೆ ಕರೆ ​ಕೊ​ಟ್ಟಿ​ರು​ವ ಬಗ್ಗೆ ರಾಮ​ನಗರ ಪುರ ವೃತ್ತ ಆರ​ಕ್ಷಕ ವೃತ್ತ ನಿರೀ​ಕ್ಷ​ಕರು ಸಲ್ಲಿ​ಸಿ​ರುವ ವರದಿ ಮೇರೆಗೆ ತಾಲೂಕು ದಂಡಾ​ಧಿ​ಕಾ​ರಿ​ಗ​ಳು ನಿಷೇ​ಧಾಜ್ಞೆ ಜಾರಿ​ಗೊ​ಳಿ​ಸಿ​ದ್ದಾ​ರೆ.

Tap to resize

Latest Videos

'ಯೋಗೇಶ್ವರ್ ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ರು, ಈಗ ರಾಜ್ಯ ಮಟ್ಟದಲ್ಲಿ ದುಡ್ಡು ಮಾಡಲು ಅಧಿಕಾರ' ..

ರಾಮನಗರ ಟೌನ್‌, ಮತೀಯವಾಗಿ ಹಾಗೂ ರಾಜಕೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಮೆರವಣಿಗೆ, ಬಂದ್‌ ನಡೆಸಿದಲ್ಲಿ ಗಲಭೆ, ಸಾರ್ವಜನಿಕ ಅಸ್ತಿಪಾಸ್ತಿಗೆ ನಷ್ಟಮತ್ತಿತರೆ ಘಟನೆಗಳು ಸಂಭವಿಸಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ಟಿ.ಎಂ.ನರಸಿಂಹ ಮೂರ್ತಿ ಅವರು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ಅಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಮತ್ತಿತರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಫೆ. 19ರ ರಾತ್ರಿ 10ರಿಂದ ಫೆ. 21ರ ಮಧ್ಯರಾತ್ರಿ 12 ಗಂಟೆಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಮಯದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಧರಣಿ, ಜಾಥಾ, ಮುಷ್ಕರ, ರಸ್ತಾ ರೋಖೋ, ಸಾರ್ವಜನಿಕ ಹಾಗೂ ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವುದನ್ನು, ಶಸ್ತಾ್ರಸ್ತ್ರಗಳನ್ನು, ಮಾರಾಕಾಸ್ತ್ರಗಳನ್ನು ಹಿಡಿದು ತಿರುಗಾಡುವು​ದನ್ನು ನಿಷೇಧಿಸಲಾಗಿದೆ ಎಂದು ಅವರು ಅದೇಶದಲ್ಲಿ ತಿಳಿಸಿದ್ದಾರೆ.

click me!