ಬೆಂಗ್ಳೂರಲ್ಲಿ ದಾಖಲೆಯ 1,373 ಮಂದಿಗೆ ಸೋಂಕು, 606 ಜನ ಡಿಸ್ಚಾರ್ಜ್

By Kannadaprabha News  |  First Published Jul 10, 2020, 10:16 AM IST

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ದಾಖಲೆಯ 1,373 ಮಂದಿ ಹೊಸ ಸೋಂಕಿತರು ಪತ್ತೆಯಾಗಿದರೆ, ಮತ್ತೊಂದು ಕಡೆ ದಾಖಲೆ ಸಂಖ್ಯೆಯ 606 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


ಬೆಂಗಳೂರು(ಜು.10): ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ದಾಖಲೆಯ 1,373 ಮಂದಿ ಹೊಸ ಸೋಂಕಿತರು ಪತ್ತೆಯಾಗಿದರೆ, ಮತ್ತೊಂದು ಕಡೆ ದಾಖಲೆ ಸಂಖ್ಯೆಯ 606 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

"

Tap to resize

Latest Videos

undefined

ಜು.5 ರಂದು 1,235 ಮಂದಿ ಸೋಂಕಿತರು ಪತ್ತೆಯಾಗಿದ್ದರು. ಆ ದಾಖಲೆಯನ್ನು ಮೀರಿದ ಸೋಂಕಿತರು ಗುರುವಾರ ಪತ್ತೆಯಾಗಿದ್ದಾರೆ. ಈ ಮೂಲಕ ನಗರದ ಸೋಂಕಿತರ ಸಂಖ್ಯೆ 13,883ಕ್ಕೆ ಏರಿಕೆಯಾಗಿದೆ.

8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ!

ಇನ್ನು ಗುರುವಾರ ಒಂದೇ ದಿನ 606 ಮಂದಿ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದು ಬೆಂಗಳೂರಿನಲ್ಲಿ ಒಂದೇ ದಿನ ಬಿಡುಗಡೆಯಾದ ಅತಿ ದೊಡ್ಡ ಸಂಖ್ಯೆಯಾಗಿದೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 2,834ಕ್ಕೆ ಏರಿಕೆಯಾಗಿದೆ. ಕಳೆದ ಬುಧವಾರ ಒಂದೇ ದಿನ 418 ಮಂದಿ ಬಿಡುಗಡೆಯಾಗಿದ್ದರು. ಇದು ಈವರೆಗೆ ಬಿಡುಗಡೆಯಾದ ಅತಿ ಹೆಚ್ಚಿನ ಸಂಖ್ಯೆಯಾಗಿತ್ತು. ಇನ್ನು 10,870 ಸಕ್ರಿಯ (ಶೇ.78 ರಷ್ಟು) ಪ್ರಕರಣಗಳಿವೆ. 292 ಮಂದಿ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಂದು ಸಾವಿನ ವರದಿ ಇಲ್ಲ!

ನಗರದಲ್ಲಿ ಗುರುವಾರ ಕೊರೋನಾ ಸೋಂಕಿಗೆ ಯಾವುದೇ ಮೃತಪಟ್ಟವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ. ಆದರೆ, ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 50 ವರ್ಷ ಮೇಲ್ಪಟ್ಟಇಬ್ಬರು ಮಹಿಳೆ¿Üುರು ಮೃತಪಟ್ಟವರದಿಯಾಗಿದೆ. ಈ ಬಗ್ಗೆ ಶುಕ್ರವಾರದ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

click me!