"ಶಕ್ತಿ'' ಯೋಜನೆಗೆ ಮೂರು ತಿಂಗಳು: 13.20 ಕೋಟಿ ಮಹಿಳೆಯರ ಪ್ರಯಾಣ

By Kannadaprabha News  |  First Published Sep 13, 2023, 11:31 AM IST

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್‌ಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್ ಗಳ ಸಂಖ್ಯೆ 13,20,53,266 ಗಳಾಗಿದೆ.ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ. 332,77,03,789 ಗಳಾಗಿದೆ.


ಹುಬ್ಬಳ್ಳಿ(ಸೆ.13):  ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ''ಶಕ್ತಿ'' ಯೋಜನೆ ಮೂರು ತಿಂಗಳು ಪೂರೈಸಿದೆ. ಈ ವರೆಗೆ ವಾಯವ್ಯ ಸಾರಿಗೆಯಲ್ಲಿ ಮಹಿಳೆಯರು 13.20 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದು, ಈ ಪ್ರಯಾಣದ ಮೊತ್ತ 332.77 ಕೋಟಿಯಾಗಿದೆ.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಶಕ್ತಿ ಯೋಜನೆಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಸೆ. 10ಕ್ಕೆ ಮೂರು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರಿದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್‌ಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್ ಗಳ ಸಂಖ್ಯೆ 13,20,53,266 ಗಳಾಗಿದೆ.ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ. 332,77,03,789 ಗಳಾಗಿದೆ.

Tap to resize

Latest Videos

'ಗ್ಯಾರಂಟಿಗಳ ಅಡ್ಡಪರಿಣಾಮದಿಂದ ಅನೇಕರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ'- ಎಚ್‌ಡಿಕೆ

ಜೂ.11ರಿಂದ 30ರ ವರೆಗೆ 2.55ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 65.15 ಕೋಟಿಯಾಗಿದೆ. ಜು.ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 111.78 ಕೋಟಿಯಾಗಿದೆ. ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 115.42 ಕೋಟಿಯಾಗಿದೆ. ಸೆ. 1ರಿಂದ 10ರ ವೆರೆಗೆ 1.56 ಕೋಟಿ ಶೂನ್ಯ ಟಿಕೆಟ್ ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ 40.42 ಕೋಟಿಯಾಗಿದೆ.

click me!