ಉತ್ತರ ಕನ್ನಡ: 100 ಬೋಟುಗಳಿಗೆ 120 ಕೋಟಿ ರು. ಮಂಜೂರು: ಅಂಗಾರ

By Kannadaprabha News  |  First Published Jan 27, 2023, 11:02 AM IST

 ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಮತ್ತು ರಾಜ್ಯ ಸರ್ಕಾರದ ಮತ್ಸ್ಯ ಸಿರಿ ಯೋಜನೆಗಳನ್ನು ಜೊತೆಗೂಡಿಸಿ ಕರಾವಳಿಯ ಮೀನುಗಾರರಿಗೆ 100 ಆಳ ಸಮುದ್ರ ದೋಣಿಗಳನ್ನು ನೀಡಲು 120 ಕೋಟಿ ರು.ಗಳ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್‌.ಅಂಗಾರ ಹೇಳಿದರು.


ಉಡುಪಿ (ಜ.27) : ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಮತ್ತು ರಾಜ್ಯ ಸರ್ಕಾರದ ಮತ್ಸ್ಯ ಸಿರಿ ಯೋಜನೆಗಳನ್ನು ಜೊತೆಗೂಡಿಸಿ ಕರಾವಳಿಯ ಮೀನುಗಾರರಿಗೆ 100 ಆಳ ಸಮುದ್ರ ದೋಣಿಗಳನ್ನು ನೀಡಲು 120 ಕೋಟಿ ರು.ಗಳ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್‌.ಅಂಗಾರ ಹೇಳಿದರು.

ಅವರು ಗುರುವಾರ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಮೈದಾನದಲ್ಲಿ ಗಣರಾಜ್ಯೋತ್ಸದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

Latest Videos

undefined

ಕಾಂಗ್ರೆಸ್‌ ಭ್ರಷ್ಟಾಚಾರದ ರಾಯಭಾರಿ ಇದ್ದಂತೆ; ಸಚಿವ ಶ್ರೀರಾಮುಲು ಟೀಕೆ

ರಾಜ್ಯದಲ್ಲಿ 78,983 ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮೆ, 3,329 ದೋಣಿಗಳಿಗೆ ತೆರಿಗೆ ರಹಿತ ಡಿಸೇಲ…, 5,000 ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಮನೆ, 5650 ಗ್ರಾ.ಪಂ. ಕೆರೆಗಳಲ್ಲಿ ಮೀನು ಕೃಷಿ ನಡೆಸಲು ಯೋಜನೆ ರೂಪಿಸಲಾಗಿದೆ. ಮತ್ಸ್ಯ ಸಂಪದ ಯೋಜನೆಯಡಿ 559 ಮೀನುಗಾರರಿಗೆ 2758 ಕೋಟಿ ರು. ಸಹಾಯಧನ ನೀಡಲಾಗಿದೆ ಎಂದರು.

ಇದಕ್ಕೆ ಮೊದಲು ಸಚಿವರು ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌, ಎನ್‌.ಸಿ.ಸಿ. ಮತ್ತಿತರ ತಂಡಗಳಿಂದ ಗೌರವರಕ್ಷೆ ಸ್ವೀಕರಿಸಿ ಪಥಸಂಚಲನ ವೀಕ್ಷಿಸಿದರು.

ಸಮಾರಂಭದಲ್ಲಿ ಶಾಸಕ ರಘುಪತಿ ಭಟ್‌, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಕೆ. ಉದಯಕುಮಾರ್‌ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಜಿ.ಪಂ. ಸಿಇಒ ಪ್ರಸನ್ನ, ತರಬೇತಿ ನಿರತ ಐಎಎಸ್‌ ಅಧಿಕಾರಿ ಯತೀಶ್‌ ಉಪಸ್ಥಿತರಿದ್ದರು.

ಕೃಷಿಕರಿಗೆ - ಅಧಿಕಾರಿಗಳಿಗೆ ಅಭಿವಂದನೆ

ಇದೇ ಸಂದರ್ಭ ಸಚಿವರು ಕುಂದಾಪುರ ಅಮಾಸೆಬೈಲಿನ ಸತೀಶ್‌ ಹೆಗ್ಡೆ ಮತ್ತು ಕಾರ್ಕಳ ಮರ್ಣೆಯ ಉಪೇಂದ್ರ ನಾಯಕ್‌ ಅವರಿಗೆ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಅಲ್ಲದೇ ಸಾಧಕ ಕೃಷಿಕರಿಗೆ ಜಿಲ್ಲೆ, ತಾಲೂಕು ಮಟ್ಟದ ಪ್ರಶಸ್ತಿಗಳನ್ನು ವಿತರಿಸಿದರು. ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸಿದರು.

Aam Aadmi Party: ಕೂಡ್ಲಿಗಿ ಕ್ಷೇತ್ರದಲ್ಲಿ ಆಮ್‌ ಆದ್ಮಿಯ ಸೈನ್ಯದ ಹೆಜ್ಜೆ

ರಾಜ್ಯ ಚುನಾವಣಾ ಆಯೋಗದಿಂದ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಕೂರ್ಮಾ ರಾವ್‌, ರಾಷ್ಟ್ರಪತಿ ಪದಕ ಪಡೆದ ಪೊಲೀಸ್‌ ಅಧಿಕಾರಿ ಪ್ರಕಾಶ್‌, ಮುಖ್ಯಮಂತ್ರಿ ಪದಕ ಪಡೆದ ಶಿವಾನಂದ ಮತ್ತು ಗೃಹ ಸಚಿವರ ಪದಕ ಪಡೆದ ದೇವರಾಜ್‌ ಟಿ.ವಿ. ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

click me!