ನೈತಿಕ ತಳಹದಿಯ ಮೇಲೆ ಉತ್ತಮ ಸಮಸಮಾಜ ನಿರ್ಮಾಣಕ್ಕೆ ಸಾಮೂಹಿಕ ವಿವಾಹಗಳು ದಾರಿದೀಪ. ಇದು ದೇವರ ಕಾರ್ಯವಾಗಿದ್ದು ಇಲ್ಲಿ 100 ಜೋಡಿ ಬಂದರೂ ಸಾಮೂಹಿಕ ವಿವಾಹಗಳನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಮಧುಗಿರಿ : ನೈತಿಕ ತಳಹದಿಯ ಮೇಲೆ ಉತ್ತಮ ಸಮಸಮಾಜ ನಿರ್ಮಾಣಕ್ಕೆ ಸಾಮೂಹಿಕ ವಿವಾಹಗಳು ದಾರಿದೀಪ. ಇದು ದೇವರ ಕಾರ್ಯವಾಗಿದ್ದು ಇಲ್ಲಿ 100 ಜೋಡಿ ಬಂದರೂ ಸಾಮೂಹಿಕ ವಿವಾಹಗಳನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಭಾನುವಾರ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೇವರತೋಪುವಿನಲ್ಲಿ ಗಳ ಸಂರಕ್ಷಣಾ ವೇದಿಕೆ, ಸಮರ್ಪಣಾ ರೂರಲ್ ಡೆವಲಪ್‌ಮೆಂಟ್
ಸೊಸೈಟಿಯಿಂದ ನಡೆದ ಉಚಿತ ಸಾಮೂಹಿಕಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀ ಮಾತನಾಡಿ, ಆರ್ಥಿಕವಾಗಿ ಕಷ್ಟದಲ್ಲಿರುವ ಮಕ್ಕಳ ನೆರವಿಗೆ ಬಂದು ಇಂತಹ ಕಾರ್ಯವನ್ನು ಮಾಡಿರುವ ಶಾಸಕರ ನಡೆ ಮೆಚ್ಚುವಂತದ್ದು. ಗೃಹಸ್ಥಾಶ್ರಮವು ಅತ್ಯಂತ ಪವಿತ್ರವಾದುದು. ಇದು ಜಗತ್ತನ್ನು ಬೆಳೆಸುವ ಹೊಣೆ ಹೊತ್ತಿದ್ದು, ಎಂತಹ ಕಷ್ಟಬಂದರೂ ಕೊನೆವರೆಗೂ ನೀವುಗಳು ಒಂದಾಗಿ ಬದುಕುವುದೇ ನಿಜವಾದ ಧರ್ಮ. ಆಗ ಮಾತ್ರ ನಾವೆಲ್ಲರೂ ಹರಸಿದ್ದಕ್ಕೆ ಸಾರ್ಥಕವಾಗಲಿದೆ. ನಿಮಗೆ ಹುಟ್ಟುವ ಮಕ್ಕಳಿಗೆ ಹೆತ್ತವರ, ಗುರು ಹಿರಿಯರ ಗೌರವಿಸುವ ಸಂಸ್ಕಾರವನ್ನು ಕಲಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡುವಂತೆ ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಪ್ರಸ್ತುತ ಬಡವರ ಜೀವನ ಶೈಲಿಗೆ ಸಾಮೂಹಿಕ ವಿವಾಹಗಳು ಅತ್ಯಗತ್ಯ. ಬಸವಣ್ಣನವರ ತತ್ವದಂತೆ
ಮದುವೆಯಾಗುವುದು ಸಮಾಜಕ್ಕೆ ಉತ್ತಮ ಸಂದೇಶ ಕೊಡಲಿದೆ. ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಲಿ. ಇದಕ್ಕೆ ಸಹಕಾರ ನೀಡಿದ ಶಾಸಕರಿಗೆ ದೇವರು ಹೆಚ್ಚಿನ ಶಕ್ತಿ
ಕೊಡಲೆಂದು ಆಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಅಧ್ಯಕ್ಷೆ ವಿಜಯಲಕ್ಷ್ಮೇ, ಮಧುಗಿರಿ ಸತ್ಯಪ್ಪ, ಸಂಚಾಲಕ ಡಾ.ಕೆ.ಎಚ್.ಶಿವಕುಮಾರ್, ಜಿಲ್ಲಾಧ್ಯಕ್ಷ
ಮಾದೇನಹಳ್ಳಿ ರಾಮಣ್ಣ, ಕೆ.ಎಚ್.ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ತಾ.ಪಂ. ಮಾಜಿ ಅಧ್ಯಕ್ಷ ಬಾವಣ್ಣ, ಮಾಜಿ ಸದಸ್ಯ ನರಸರೆಡ್ಡಿ, ಮುಖಂಡರಾದ
ಲಕ್ಷ್ಮೇ ನರಸಿಂಹ ರೆಡ್ಡಿ , ಸಿದ್ದ ರೆಡ್ಡಿ, ನಾಸೀರ್, ಸೈಯದ್‌ಗೌಸ್, ಶಿವಕುಮಾರ್, ಬಿಜವರ ಶ್ರೀನಿವಾಸ್, ಮೂರ್ತಿ, ಅಕ್ರಂಪಾಷ, ನಾಗರಾಜ್, ಜಬೀ, ವಧು-ವರರು, ಸಂಬಂಧಿಕರು ಹಾಗೂ ಸಾರ್ವಜನಿಕರು ಇದ್ದರು.
ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿ: ಶ್ರೀ ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧಿಪತಿ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸಂಸಾರ ಎನ್ನುವುದು ಸಾಗರದಂತೆ. ಅದನ್ನು ಜಾಗೃತವಾಗಿ ಈಜಬೇಕು. ಸಾಲವಿಲ್ಲದೆ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ದಂಪತಿಗಳು ಅದೃಷ್ಟ ವಂತರು. 100 ಜೋಡಿ ಬಂದರೂ ಮದುವೆ ಮಾಡಿಸುವುದಾಗಿ ಹೇಳಿದ ಶಾಸಕ ವೀರಭದ್ರಯ್ಯನವರದ್ದು ದ್ವೇಷವಿಲ್ಲದ ರಾಜಕಾರಣ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ಈ ಮಧುಗಿರಿ ಉಪ ವಿಭಾಗ ಹಿಂದುಳಿದಿದ್ದು ಅಭಿವೃದ್ಧಿಪಡಿಸುವ ಜವಾಬ್ದಾರಿ ವೀರಭದ್ರಯ್ಯನವರ ಮೇಲಿದೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿ ಹೆಣ್ಣಿಗೆ ಗೌರವ ನೀಡುವ ಸಂಸ್ಕಾರವನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕಿದ್ದು, ಶಾಂತಿಯುತ ಆಡಳಿತ ನೀಡಿರುವ ಶಾಸಕರು ಇಂತಹ ಕಾರ್ಯಕ್ರಮವನ್ನು ಮತ್ತಷ್ಟುಕೈಗೊಳ್ಳುವಂತೆ ತಿಳಿಸಿದರು.
19ಕೆಎಂಡಿಜಿ1,,,
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಎಲೆರಾಂಪುರ ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿ, ಶಾಸಕ ಎಂ.ವಿ.ವೀರಭದ್ರಯ್ಯ ಸೇರಿದಂತೆ ಅನೇಕ ಗಣ್ಯರು ಉದ್ಘಾಟಿಸಿದರು.