ದೇಶದ ಬಿಜೆಪಿಯೇತರ 9 ರಾಜ್ಯಗಳಲ್ಲಿ ಸರ್ಕಾರ ರಚಿಸುವ ಉದ್ದೇಶದಿಂದ ಬಿಜೆಪಿ ಸುಮಾರು 10 ಸಾವಿರ ಕೋಟಿಗೂ ಅಧಿಕ ಹಣವನ್ನು ಆಪರೇಷನ್ ಕಮಲದ ಮೂಲಕ ಖರ್ಚು ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ಮೈಸೂರು (ನ.19) : ದೇಶದ ಬಿಜೆಪಿಯೇತರ 9 ರಾಜ್ಯಗಳಲ್ಲಿ ಸರ್ಕಾರ ರಚಿಸುವ ಉದ್ದೇಶದಿಂದ ಬಿಜೆಪಿ ಸುಮಾರು 10 ಸಾವಿರ ಕೋಟಿಗೂ ಅಧಿಕ ಹಣವನ್ನು ಆಪರೇಷನ್ ಕಮಲದ ಮೂಲಕ ಖರ್ಚು ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಕರ್ನಾಟಕ, ಸೇರಿದಂತೆ ಸುಮಾರು 9 ರಾಜ್ಯಗಳ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಹಣದ ಆಮೀಷ ವೊಡ್ಡಿ ಬಿಜೆಪಿ ಸೆಳೆಯಲಾಗುತ್ತಿದೆ. ಇದಕ್ಕಾಗಿ 10 ಸಾವಿರ ಕೋಟಿಯಷ್ಟುಹಣವನ್ನು ಬಿಜೆಪಿ ಖರ್ಚು ಮಾಡುತ್ತಿದೆ ಎಂದು ದೂರಿದರು.
ಮಾಹಿತಿ ಪ್ರಕಾರ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕರಾದ ಯತ್ನಾಳ್, ಎಸ್.ಎ. ರಾಮದಾಸ್, ಎಚ್. ವಿಶ್ವನಾಥ್ ಸೇರಿದಂತೆ ಸುಮಾರು 43 ಸಚಿವರು ಮತ್ತು ಶಾಸಕರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿರುವುದಾಗಿ ಕೆಲವು ಮುಖಂಡರು ಹೇಳಿದ್ದಾರೆ ಎಂದರು.
ಸರ್ಕಾರಿ ನೌಕರರು ಒಪ್ಪಬಾರದು: ಗೋವುಗಳನ್ನು ಸಂರಕ್ಷಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರಿಂದ . 11 ಸಾವಿರ ಹಣ ಸಂಗ್ರಹಿಸುತ್ತಿರುವುದು ಅಕ್ಷಮ್ಯ ಅಪರಾಧ. ಈ ಸಂಬಂಧ ಅನೇಕ ಸರ್ಕಾರಿ ನೌಕರರರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಗೋವುಗಳನ್ನು ಸಾಕಲು ಸಾಧ್ಯವಾಗದಷ್ಟುಸರ್ಕಾರ ದಿವಾಳಿ ಆಗಿದಿಯೇ? ಸರ್ಕಾರದ ಈ ನಿಯಮವನ್ನು ನೌಕರರು ಒಪ್ಪಬಾರದು ಎಂದು ಅವರು ಮನವಿ ಮಾಡಿದರು.
ಬಸ್ ಶೆಲ್ಟರ್‌ಗೆ ನಿಯಮವಿಲ್ಲ
ನಗರ ಪಾಲಿಕೆ ನಿಯಮದ ಪ್ರಕಾರ ಬಸ್ ಶೆಲ್ಟರ್ ನಿರ್ಮಿಸಲು ಇಂತಹದ್ದೆ ಮಾದರಿಯಲ್ಲಿ ನಿರ್ಮಿಸಬೇಕೆಂಬ ನಿಯವಿಲ್ಲ. ಕೇಂದ್ರ ಸರ್ಕಾರವೇ ಹೇಳುವಂತೆ ರಾಜ್ಯದ 350 ಪಾರಂಪರಿಕ ಕಟ್ಟಗಳ ಪೈಕಿ 150 ಸರ್ಕಾರಿ ಕಟ್ಟಡಗಳಿವೆ. ಅದರಲ್ಲಿ 50 ಕಟ್ಟಗಳು ಡೂಮ್ ಮಾದರಿಯ ವಿನ್ಯಾಸದಲ್ಲಿವೆ. ಅವುಗಳಲ್ಲಿ ಮೈಸೂರು ಅರಮನೆಯೂ ಒಂದು. ಹಾಗಾದರೇ ಪ್ರತಾಪ್ ಸಿಂಹ ಅವರು ಅರಮನೆ ಗೋಪುರ ಯಾವಾಗ ಒಡೆಯತ್ತಾರೆ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಮಹೇಶ್, ಗಿರೀಶ್ ಇದ್ದರು.
ಅನರ್ಹ ಶಾಸಕರು ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ.
ಬೆಂಗಳೂರು (ನ.18) : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾವೆಲ್ಲ ಅನರ್ಹರಾದಾಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ ಸದನದಲ್ಲಿ ಎಲ್ಲರು ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯ್ತು ಅಂತೆಲ್ಲ ಹೇಳಿದ್ದರು. ಈಗ ಸಮಾಧಿ ಆದವರನ್ನು ಕರೆಯುತ್ತಿದ್ದಾರೆ ಎಂದು ಮರಳಿ ಹೋಗಲು ಸಾಧ್ಯವಿಲ್ಲ. ಅನರ್ಹಗೊಂಡವರಲ್ಲಿ ಯಾರೊಬ್ಬರೂ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವೆಲ್ಲರೂ ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರನಡೆದಾಗ ನಮ್ಮನ್ನು ಅನರ್ಹಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ (Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಅನರ್ಹಗೊಂಡವರ ರಾಜಕೀಯ ಜೀವನ (Ploitical life) ಸಮಾಧಿ ಎಂದು ಹೇಳಿಕೆ ನೀಡಿದ್ದರು. ಹೀಗೆ ಸಮಾಧಿ ಆದವರನ್ನು ಈಗ ಪುನಃ ಡಿ.ಕೆ. ಶಿವಕುಮಾರ್ ಮತ್ಯಾಕೆ ಕರೆಯುತ್ತಿದ್ದಾರೆ. ಪಕ್ಷ ಬಿಟ್ಟು ಹೋದವರು ವಾಪಸ್ (Return)ಬರಬಹುದು ಅಂತ ಕರೀತಿದಾರೆ. ಆದರೆ, ನಮ್ಮವರು ಯಾರೊಬ್ಬರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ (Ticket) ಅರ್ಜಿ ಹಾಕಿಲ್ಲ ಎಂದು ಹೇಳಿದರು.
ಯುಬಿ ಬಣಕಾರ್ ವಿರುದ್ಧ 4ನೇ ಬಾರಿಯೂ ಕುಸ್ತಿ ಗೆಲ್ಲುತ್ತೇನೆ: ಬಿ.ಸಿ. ಪಾಟೀಲ್
ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಭ್ಯರ್ಥಿಗಳ (Candidates) ಕೊರತೆ ಆಗಿರಬಹುದು. ಹಾಗಾಗಿ ಹಳೇ ಗಂಡನ ಪಾದವೇ (Old Husband Feet)ಗತಿ ಅಂತ ಕರೆಯುತ್ತಿರಬಹುದು. ಆದರೆ ನಮ್ಮಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ ನಿಂದಲೇ ಬಹಳಷ್ಟು ಜನ ಬಿಜೆಪಿಗೆ (BJP) ಬರುತ್ತಿದ್ದಾರೆ. ಅನರ್ಹಗೊಂಡವರ ಪೈಕಿ ರಮೇಶ್ ಜಾರಕಿಹೊಳಿಗೆ (Ramesh Jarakiholi) ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಅವರನ್ನು ನಾವ್ಯಾರೂ ಮರೆತಿಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಕಾರಣವೇನೆಂಬುದು ಕೂಡ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಗೆ ಕೇಳಬೇಕು. ಇನ್ನು ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ (JDS) ಸೇರುವ ಸುದ್ದಿ ಹರಿದಾಡುತ್ತಿರುವ ವಿಚಾರವೂ ಗೊತ್ತಿಲ್ಲ ಎಂದು ತಿಳಿಸಿದರು.