ಬಿಬಿಎಂಪಿ ಅನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ಸ್ ಮುದ್ರಿಸಿದರೆ 1 ವರ್ಷ ಜೈಲು: ತುಷಾರ್ ಗಿರಿನಾಥ್

Published : Aug 05, 2024, 08:52 AM IST
ಬಿಬಿಎಂಪಿ ಅನುಮತಿ ಇಲ್ಲದೆ ಬ್ಯಾನರ್, ಫ್ಲೆಕ್ಸ್ ಮುದ್ರಿಸಿದರೆ 1 ವರ್ಷ ಜೈಲು: ತುಷಾರ್ ಗಿರಿನಾಥ್

ಸಾರಾಂಶ

ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್ ಮುದ್ರಿಸುವ ಪ್ರತಿಯೊಬ್ಬ ಮುದ್ರಣಕರಿಗೆ ವೈಯಕ್ತಿವಾಗಿ ಅನಧಿಕೃತವಾಗಿ ಯಾವುದೇ ಜಾಹೀರಾತು ಪ್ರಕಟಣೆಗಳನ್ನು ಮುದ್ರಣ ಮಾಡದಂತೆ ಎಚ್ಚರಿಕೆ ನೀಡಬೇಕು.

ಬೆಂಗಳೂರು (ಆ.04): ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್ ಮುದ್ರಿಸುವ ಪ್ರತಿಯೊಬ್ಬ ಮುದ್ರಣಕರಿಗೆ ವೈಯಕ್ತಿವಾಗಿ ಅನಧಿಕೃತವಾಗಿ ಯಾವುದೇ ಜಾಹೀರಾತು ಪ್ರಕಟಣೆಗಳನ್ನು ಮುದ್ರಣ ಮಾಡದಂತೆ ಎಚ್ಚರಿಕೆ ನೀಡಬೇಕು. ಈ ಬಗ್ಗೆ ಆ.5ರ ಒಳಗೆ ವರದಿ ನೀಡುವಂತೆ ಎಲ್ಲಾ ವಲಯ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶಿಸಿದ್ದಾರೆ. ನಗರದಲ್ಲಿ ಅನಧಿಕೃತ ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. 

ಈ ನಿಟ್ಟಿನಲ್ಲಿ ಈಗಾಗಲೇ ಬಿಬಿ ಎಂಪಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಂಟಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಸಿದ್ಧಪಡಿಸಿ ಆದೇಶಿಸಲಾಗಿದೆ. ಈ ಆದೇಶ ಪತ್ರವನ್ನು ನಗರದ ಲ್ಲಿರುವ ಪ್ರತಿಯೊಬ್ಬ ಪ್ಲೆಕ್ಸ್‌, ಬ್ಯಾನರ್‌ ಮುದ್ರಣಕರಿಗೆ ನೀಡಿ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ. ನಗರದಲ್ಲಿ ಎಷ್ಟು ಪ್ಲೆಕ್ಸ್‌, ಬ್ಯಾನರ್ ಮುದ್ರಕರಿಗೆ ಆದೇಶ ಪ್ರತಿ ನೀಡಿ ಸೂಚಿಸಲಾಗಿದೆ ಎಂಬ ವರದಿಯನ್ನೂ ಪಾಲಿಕೆ ಜಾಹೀರಾತು ವಿಭಾಗಕ್ಕೆ ಸಲ್ಲಿಸಬೇಕು. ಈ ಕಾರ್ಯವನ್ನು ಜಂಟಿ ಆಯುಕ್ತರು, ವಲಯ ಮುಖ್ಯ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು (ಜಾಹೀರಾತು) ನಿರ್ವಹಿಸಬೇಕೆಂದು ತಿಳಿಸಲಾಗಿದೆ. 

ಮುದ್ರಕರಿಗೆ ನೀಡಲಾದ ಸೂಚನೆ: ಬಿಬಿಎಂಪಿಯ ಅನು ಮತಿ ಇಲ್ಲದೇ ಪ್ಲೆಕ್ಸ್, ಬ್ಯಾನರ್ ಮುದ್ರಣ ಮಾಡಬಾರದು. ಜನ್ಮದಿನದ ಶುಭಾಶಯ ತಿಳಿಸುವ, ಸಂತಾಪಗಳು, ಸ್ವಾಗತ ಫಲಕಗಳು ಮುಂತಾದ ಫಲಕಗಳನ್ನು ಅನಧಿಕೃತವಾಗಿ ಅಳವಡಿಸುವಂತಿಲ್ಲ, ಮುದ್ರಿಸು ವಂತಿಲ್ಲ, ಮುದ್ರಣ ಮಾಡಿದರೆ ಉದ್ದಿಮೆ ಪರ ವಾನಗಿ ರದ್ದು ಪಡಿಸಲಾಗುವುದು. ಜತೆಗೆ, ಒಂದು ವರ್ಷ ಜೈಲು ಹಾಗೂ ಕೆ2 ಲಕ್ಷ ದಂಡ ವಿಧಿಸಲಾಗುವುದು. ಈ ಅಪರಾಧಗಳಿಗೆ ಕುಮ್ಮಕ್ಕು ನೀಡುವ ವರಿಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ನೇರ ಆರೋಪಿಗಳು: ಸಂಸದ ಜಗದೀಶ್‌ ಶೆಟ್ಟರ್

ಪ್ಲೆಕ್ಸ್‌ ಮುದ್ರಿಸಲು ಬಂದವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರುವ ಪ್ರತಿಯನ್ನು ಮುದ್ರಕರಿಗೆ ತೋರಿಸ ಬೇಕು. ಅದು ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ನೀಡಿ ರುವುದು ಎಂಬುದನ್ನು ಮುದ್ರಕರು ಖಚಿತಪಡಿಸಿಕೊಳ್ಳ ಬೇಕು. ಗ್ರಾಹಕರು ಮುದ್ರಿಸಲು ಬಯಸುವ ಪ್ಲೆಕ್ಸ್‌ಗಳು, ಬ್ಯಾನರ್‌ಗಳು, ಪೋಸ್ಟರ್‌ಗಳು, ಹೋರ್ಡಿಂಗ್‌ಗಳ ಕುರಿತಂತೆ ಪಡೆದ ಅನುಮತಿ ಪತ್ರಗಳ ನಕಲನ್ನು ಮಾಡಿಟ್ಟುಕೊಳ್ಳಬೇಕು.

PREV
Read more Articles on
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು