ಜೆಡಿಎಸ್'ನಿಂದ ಒಬ್ಬರಿಗೆ ಸಿ ಫಾರಂ, ಬಿ ಫಾರಂ ಅಭ್ಯರ್ಥಿ ಸ್ವತಂತ್ರವಾಗಿ ಕಣಕ್ಕೆ

First Published Apr 24, 2018, 5:36 PM IST
Highlights

ಈ ಹಿನ್ನಲೆಯಲ್ಲಿ  ಜೆಡಿಎಸ್'ನ ಅಧಿಕೃತ ಅಭ್ಯರ್ಥಿಯಾಗಿ ನಿಸರ್ಗ ನಾರಾಯಣ ಸ್ವಾಮಿ ಕಣಕ್ಕಿಳಿಯಲಿದ್ದು, ಪಿಳ್ಳಮುನಿಶ್ಯಾಮಪ್ಪ ಸ್ವತಂತ್ರ ಅಭ್ಯರ್ಥಿಯಾಗಲಿದ್ದಾರೆ. ಕೆಲವು ತಿಂಗಳ ಹಿಂದೆ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್'ಗೆ ಸೇರಿಸಿಕೊಂಡ ಕಾರಣ ಮುನಿಶ್ಯಾಮಪ್ಪ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ಬೆಂಗಳೂರು(ಏ.24): ದೇವನಹಳ್ಳಿ ಜೆಡಿಎಸ್ ಅಭ್ಯರ್ಥಿ ಪಿಳ್ಳಮುನಿಶ್ಯಾಮಪ್ಪ ಅವರಿಗೆ ಈ ಬಾರಿ ಪಕ್ಷದಿಂದ ಟಿಕೆಟ್ ಕೈತಪ್ಪಿದೆ. ಈ ಮೊದಲು ಅವರಿಗೆ ಬಿಫಾರಂ ನೀಡಲಾಗಿತ್ತು. ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ನಿಸರ್ಗ ನಾರಾಯಣ ಸ್ವಾಮಿ ಅವರಿಗೆ ಜೆಡಿಎಸ್ ಸಿ ಫಾರಂ ನೀಡಿದೆ.

ಈ ಹಿನ್ನಲೆಯಲ್ಲಿ  ಜೆಡಿಎಸ್'ನ ಅಧಿಕೃತ ಅಭ್ಯರ್ಥಿಯಾಗಿ ನಿಸರ್ಗ ನಾರಾಯಣ ಸ್ವಾಮಿ ಕಣಕ್ಕಿಳಿಯಲಿದ್ದು, ಪಿಳ್ಳಮುನಿಶ್ಯಾಮಪ್ಪ ಸ್ವತಂತ್ರ ಅಭ್ಯರ್ಥಿಯಾಗಲಿದ್ದಾರೆ. ಕೆಲವು ತಿಂಗಳ ಹಿಂದೆ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್'ಗೆ ಸೇರಿಸಿಕೊಂಡ ಕಾರಣ ಮುನಿಶ್ಯಾಮಪ್ಪ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ನಂತರ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಸಂಧಾನದಿಂದ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡಿದ್ದರು.

click me!