ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ ಸಂಸದ ಡಾ.ಉಮೇಶ ಜಾಧವ| ಸ್ಟೇಶನ್ ತಾಂಡಾದ ನಿವಾಸಿಗಳು ದಿನನಿತ್ಯ ತಿರುಗಾಡುವಾಗ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಸ್ಥಿತಿ ಇತ್ತು| 2 ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭ|
ಚಿತ್ತಾಪುರ(ಅ.29): ಇಲ್ಲಿನ ಸ್ಟೇಶನ್ ತಾಂಡಾ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಸಾರ್ವಜನಿಕ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರವು 1.09 ಕೊಟಿ ಅನುದಾನ ಒದಗಿಸಿದೆ ಎಂದು ಲೊಕಸಭಾ ಸದಸ್ಯ ಡಾ. ಉಮೇಶ ಜಾಧವ ಹೇಳಿದ್ದಾರೆ.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಕಾಮಗಾರಿ ಸ್ಥಳ ಹಾಗೂ ರೈಲ್ವೆ ನಿಲ್ದಾಣ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟೇಶನ್ ತಾಂಡಾದ ನಿವಾಸಿಗಳು ದಿನನಿತ್ಯ ತಿರುಗಾಡುವಾಗ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಸ್ಥಿತಿ ಇತ್ತು. ಇಲ್ಲಿಂದ ನೂರಾರು ಮಕ್ಕಳು ನಿತ್ಯ ರೈಲ್ವೆ ಹಳಿ ದಾಟಿ ಶಾಲೆ ಕಾಲೇಜುಗಳಿಗೆ ಇಂತಹ ಅಪಾಯಕಾರಿ ಹಳಿಗಳ ಮೇಲಿಂದಲೇ ತೆರಳಬೇಕು. ಕೆಲ ದಿನಗಳ ಹಿಂದೆ ವೃದ್ದೆಯೊಬ್ಬರು ಹಳಿ ದಾಟುವಾಗಿ ಹಳಿ ಒಳಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾಳೆ. ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಹಲವರು ಗಾಯಗೊಂಡ ಘಟನೆಗಳು ದಿನನಿತ್ಯ ನಡೆದಿರುತ್ತವೆ. ಇಷ್ಟಾದರೂ ಕೂಡಾ ಯಾರೊಬ್ಬರು ಇವರಿಗೆ ಸೌಲಭ್ಯವನ್ನು ಒದಗಿಸಿಕೊಡಲು ಮುಂದೆ ಬರದಿರವದು ದುರಾದೃಷ್ಟಕರ ವಿಷಯವಾಗಿದೆ. ವೃದ್ದೆಯೊಬ್ಬರು ಹಳಿ ಮಧ್ಯೆ ಬಿದ್ದ ಘಟನೆ ನಂತರ ನಾನು ಕೇಂದ್ರ ಮತ್ತು ರೈಲ್ವೆ ಅಧಿಕಾರಿಗಳ ಮೇಲೆ ಒತ್ತಡ ತಂದು ಮೇಲ್ಸೇತುವೆ ಕಾಮಗಾರಿಗೆ 1.09 ಕೊಟಿ ಅನುದಾನ ತಂದಿದ್ದು ಅದು ಟೆಂಡರ್ ಹಂತದಲ್ಲಿದ್ದು 2 ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವದು ಎಂದು ಭರವಸೆ ನೀಡಿದರು.
ರೈಲುಗಳ ನಿಲುಗಡೆ ಹಾಗೂ ಬೋಗಿಗಳ ಹೆಚ್ಚಳಕ್ಕೆ ಕ್ರಮ
ಪಟ್ಟಣದ ಸೊಲ್ಲಾಪುರ, ಹೈದ್ರಾಬಾದ, ಮುಂಬೈ ಸೇರಿದಂತೆ ದೂರದ ನಗರಗಳಿಗೆ ರೈಲ್ವೆ ಸೌಲಭ್ಯ ಇಲ್ಲಾ. ಇಲ್ಲಿಂದ ತೆರಳುವ ಎಲ್.ಟಿ.ಟಿ, ಹೈದ್ರಾಬಾದ ಫಾಸ್ಟ್ ಪ್ಯಾಸೆಂಜರ್, ಕೊನಾರ್ಕ, ಗರೀಬ್‌ರಥ ರೈಲುಗಳು ಇಲ್ಲಿ ನಿಲುಗಡೆಯಾದರೆ ಅನುಕೂಲವಾಗುವದು ಅಲ್ಲದೇ ಈಗಿರುವ ರೈಲುಗಳಲ್ಲಿ ಸಾಮಾನ್ಯ ಬೋಗಿಗಳು ಕಡಿಮೆ ಇದ್ದು ಸದಾ ಜನಸಂದಣಿ ಇರುತ್ತದೆ ಬೊಗಿಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎನ್ನುವ ಜನರ ಒತ್ತಾಯಕ್ಕೆ ಅವರು ಇದಕ್ಕೆ ಸಂಬಂದಿಸಿದಂತೆ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಪಂ ಸದಸ್ಯ ಅರವಿಂದ ಚವ್ವಾಣ, ಮಾಜಿ ಜಿಪಂ ಸದಸ್ಯ ಬಸವರಾಜ ಬೆಣ್ಣೂರಕರ್, ರಾಮದಾಸ ಚವ್ವಾಣ, ಗೊಪಾಲ ರಾಠೋಡ, ಪೊಮು ರಾಠೋಡ, ಮಲ್ಲಿಕಾರ್ಜುನ ಎಮ್ಮೆನೊರ, ಮಹೇಶ ಬಟಗೇರಿ, ಬಾಲಾಜಿ ಬುರಬುರೆ, ಚಂದ್ರು ಕಾಳಗಿ, ಕವಿತಾ ಚವ್ವಾಣ, ಅಶ್ವಥರಾಮ ರಾಠೋಡ, ಮಹ್ಮದ ಯೂನೂಸ್, ನಾಗರಾಜ ಹೂಗಾರ ಸೇರಿದಂತೆ ಇತರರು ಇದ್ದರು.