ಅಫಜಲಪುರ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

By Web Desk  |  First Published Oct 27, 2019, 10:00 AM IST

ಮನೆ ಗೋಡೆ ಕುಸಿದು ಇಬ್ಬರ ಸಾವು|  ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ನಡೆದ ಘಟನೆ| ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ನೆನೆದು ಕುಸಿದು ಬಿದ್ದಿದೆ| ಮಣ್ಣಿನ ಗೋಡೆ ಕುಸಿದ ಪರಿಣಾಮ ರಸ್ತೆ ಮೇಲೆ ಹೋಗುತ್ತಿದ್ದವರ ಮೇಲೆ ಕಲ್ಲು ಬಿದ್ದಿದೆ| 


ಕಲಬುರಗಿ(ಅ.27): ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತರನ್ನು ಕಾವೇರಿ (20) ಇವರ ಅಕ್ಕನ ಮಗಳು ವಿದ್ಯಾಶ್ರೀ (5) ಎಂದು ಗುರುತಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆ ನೆನೆದು ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಮಣ್ಣಿನ ಗೋಡೆ ಕುಸಿದ ಪರಿಣಾಮ ರಸ್ತೆ ಮೇಲೆ ಹೋಗುತ್ತಿದ್ದವರ ಮೇಲೆ ಕಲ್ಲು ಬಿದ್ದಿದೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾರೀ ಮಳೆಯಾಗುತ್ತಿರಯವ ಪರಿಣಾಮ ರಾಜ್ಯದ ಹಲವೆಡೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ನೆರೆ ರಾಜ್ಯ ಮಹಾರಾಷ್ಟ್ರ ಹಾಗು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುಇದ್ದರಿಂದ ಮತ್ತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 

click me!