ಆರೋಪಿ ಪ್ರಶ್ನೆಗಳಿಗೆ ಉತ್ತರಿಸುವಾಗ ಗ್ರಾಫ್ ಅನ್ನು ಮ್ಯಾಪ್ ಮಾಡಲಾಗುತ್ತದೆ. ಈ ಗ್ರಾಫ್‌ನಲ್ಲಿ ಬರುವ ವ್ಯತ್ಯಾಸ ಅನುಸರಿಸಿ ಆರೋಪಿ ಸುಳ್ಳು ಹೇಳಿದ್ದಾನೋ ಅಥವಾ ನಿಜ ಹೇಳುತ್ತಿದ್ದಾನೋ ಅನ್ನೋದನ್ನು ತಿಳಿಯಲಾಗುತ್ತೆ.
ಕಾಲ್ ಸೆಂಟರ್ ಉದ್ಯೋಗಿ ಶ್ರದ್ದಾ ವಾಕರ್ (Shraddha Walkar) ಅನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಅಫ್ತಾಬ್ ಪೂನಾವಾಲಾ (Aftab Poonawalla) ಪಾಲಿಗ್ರಾಫ್ ಪರೀಕ್ಷೆಗೆ (Polygraph) Test) ಒಳಗಾಗಿದ್ದಾರೆ. ಈ ಪರೀಕ್ಷೆಗೆ ದೆಹಲಿಯ ಕೋರ್ಟ್ (Court) ನಿನ್ನೆ ಅಂದರೆ ನವೆಂಬರ್ 22ರಂದೇ ಅನುಮತಿ ನೀಡಿತ್ತು. ಫಾಲಿಗ್ರಾಫ್ ಪರೀಕ್ಷೆಯಿಂದ ವೈಜ್ಞಾನಿಕವಾಗಿ ಮತ್ತಷ್ಟು ಸಾಕ್ಷ್ಯಗಳ ಸಂಗ್ರಹ ಮಾಡಲು ದೆಹಲಿ ಪೊಲೀಸ್ (Delhi Police) ಮುಂದಾಗಿದ್ದು, ಇದರಿಂದ ಅಫ್ತಾಬ್ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸುಲಭವಾಗಲಿದೆ.
ಪಾಲಿಗ್ರಾಫ್ ಪರೀಕ್ಷೆ ಮೂಲಕ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ವೈಜ್ಞಾನಿಕವಾಗಿ ಮತ್ತಷ್ಟು ಸಾಕ್ಷ್ಯಗಳ ಸಂಗ್ರಹ ಮಾಡಲಿದೆ. ಹಾಗೆ, ಶಾರೀರಿಕ ಪ್ರತಿಕ್ರಿಯೆಗಳ ಮೂಲಕ ಉತ್ತರ ಕಂಡುಕೊಳ್ಳುವ ಸಾಕ್ಷ್ಯ ಸಂಗ್ರಹ ಮಾಡಲಾಗುತ್ತೆ ಎಂದು ತಿಳಿದುಬಂದಿದೆ. ಇನ್ನು, ಈ ಪರೀಕ್ಷೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ನಿಮಗೆ ಗೊಂದಲಗಳಿದ್ಯಾ..?
ಇದನ್ನು ಓದಿ: Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್ ಅನುಮತಿ
ಆರೋಪಿ ಪ್ರಶ್ನೆಗಳಿಗೆ ಉತ್ತರಿಸುವಾಗ ಗ್ರಾಫ್ ಅನ್ನು ಮ್ಯಾಪ್ ಮಾಡಲಾಗುತ್ತದೆ. ಈ ಗ್ರಾಫ್‌ನಲ್ಲಿ ಬರುವ ವ್ಯತ್ಯಾಸ ಅನುಸರಿಸಿ ಆರೋಪಿ ಸುಳ್ಳು ಹೇಳಿದ್ದಾನೋ ಅಥವಾ ನಿಜ ಹೇಳುತ್ತಿದ್ದಾನೋ ಅನ್ನೋದನ್ನು ತಿಳಿಯಲಾಗುತ್ತೆ. ಈ ಮೂಲಕ ಪಾಪಿ ಅಫ್ತಾಬ್ ವಿರುದ್ಧ ದೃಢವಾದ ಸಾಕ್ಷ್ಯಗಳು ಪೊಲೀಸರಿಗೆ ಸಿಗುತ್ತದೆ ಎಂದು ಹೇಳಬಹುದು. ಕೋರ್ಟ್‌ನಲ್ಲಿ ಆರೋಪಿಗೆ ಕಠಿಣವಾದ ಶಿಕ್ಷೆ ನೀಡಲು ಸಹ ಇದು ಸಹಕಾರಿಯಾಗಬಹುದು.
ದೆಹಲಿ ಪೊಲೀಸರು ತನಿಖೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸುತ್ತಿದ್ದಾರೆ.
ಅಫ್ತಾಬ್ ತನ್ನ ಲಿವ್-ಇನ್ ಪಾರ್ಟ್‌ನರ್ ಶ್ರದ್ಧಾಳ ಕತ್ತು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಆರೋಪವಿದೆ. ಕತ್ತರಿಸಿದ ದೇಹದ ಭಾಗಗಳನ್ನು ದಕ್ಷಿಣ ದೆಹಲಿಯ ಛತ್ತರ್‌ಪುರದ ಕಾಡುಗಳಲ್ಲಿ ಎಸೆಯುವ ಮೊದಲು ಫ್ರಿಡ್ಜ್‌ನಲ್ಲಿ ಸಂರಕ್ಷಿಸಿದ್ದ ಎಂದೂ ಆರೋಪಿಸಲಾಗಿದೆ. ಅಫ್ತಾಬ್‌ನ ಪಾಲಿಗ್ರಾಫ್ ಪರೀಕ್ಷೆಯ ಪ್ರಕ್ರಿಯೆಯು ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಪ್ರಾರಂಭವಾಯಿತು ಎಂದು ದೆಹಲಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: Shraddha Walker Murder: ಏನಿದು ಮಂಪರು ಪರೀಕ್ಷೆ, ಶ್ರದ್ಧಾ ಕುರಿತಾಗಿ ಅಫ್ತಾಬ್‌ಗೆ ಪೊಲೀಸರು ಕೇಳಲಿರುವ ಪ್ರಶ್ನೆಗಳೇನು?
ಶ್ರದ್ಧಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಅಫ್ತಾಬ್‌ನನ್ನು ಬಂಧಿಸಿದ ನಂತರ ದೆಹಲಿ ಪೊಲೀಸರು ನವೆಂಬರ್ 10 ರಂದು ಎಫ್ಐಆರ್ ದಾಖಲಿಸಿದ್ದರು. ನಂತರದ ವಿಚಾರಣೆಯಲ್ಲಿ ಆರೋಪಿ ಅಫ್ತಾಬ್ ಮೇ 18 ರಂದು ಶ್ರದ್ಧಾಳನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ನಂತರ ಆರೋಪಿ ದೇಹವನ್ನು ವಿಲೇವಾರಿ ಮಾಡುವ ವಿಧಾನಗಳನ್ನು ಗೂಗಲ್ ಸರ್ಚ್ ಹಾಗೂ ಇತರೆ ವಿಧಾನಗಳ ಮೂಲಕ ಸಂಶೋಧಿಸಲು ಪ್ರಾರಂಭಿಸಿದ್ದಾನೆ. ಒಟಿಟಿಯಲ್ಲಿ ಜನಪ್ರಿಯ ಕ್ರೈಂ ಶೋಗಳಿಂದ ಹಲವು ವಿಚಾರ ತಿಳಿದುಕೊಂಡಿದ್ದಾನೆ ಎಂದೂ ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ತನ್ನ ಗೆಳತಿಯ ದೇಹವನ್ನು ಕತ್ತರಿಸುವ ಮೊದಲು ಮಾನವ ಅಂಗರಚನಾಶಾಸ್ತ್ರವನ್ನು ಓದಿದ್ದೆ ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ಅಪರಾಧದ ಎಲ್ಲಾ ಕುರುಹುಗಳನ್ನು ತೆಗೆದುಹಾಕುವ ಮಾರ್ಗಗಳ ಕುರಿತು ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿದ ನಂತರ, ಅಫ್ತಾಬ್ ದೆಹಲಿಯ ಛತ್ತರ್‌ಪುರ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಕಲೆಗಳನ್ನು ಕೆಲವು ರಾಸಾಯನಿಕಗಳೊಂದಿಗೆ ಒರೆಸಿದ್ದು ಮತ್ತು ಕಲೆಯಾದ ಎಲ್ಲ ಬಟ್ಟೆಗಳನ್ನು ಬಿಸಾಡಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!
ನಂತರ ಶವವನ್ನು ಬಾತ್‌ರೂಂಗೆ ಸ್ಥಳಾಂತರಿಸಿ , ಬಳಿಕ 300 ಲೀಟರ್ ಫ್ರಿಡ್ಜ್ ಖರೀದಿಸಿ ಅಲ್ಲಿ ಕತ್ತರಿಸಿದ ದೇಹದ ಭಾಗಗಳನ್ನು ಕೂಡಿಟ್ಟಿದ್ದ ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್