ಇಳಿವಯಸ್ಸಿನಲ್ಲಿ ವಾಸವಿದ್ದ ಬಂಗ್ಲೆಯನ್ನು ಮಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯನ್ನೇ ಪತಿಯೋರ್ವ ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ಸಮೀಪದ ನೋಯ್ಡಾದಲ್ಲಿ ನಡೆದಿದ್ದು, ಕೊಲೆಯಾದವರು ಸಾಮಾನ್ಯ ಮಹಿಳೆ ಅಲ್ಲ, ಸುಪ್ರೀಂಕೋರ್ಟ್‌ನ ವಕೀಲೆ.
ನವದೆಹಲಿ: ಇಳಿವಯಸ್ಸಿನಲ್ಲಿ ವಾಸವಿದ್ದ ಬಂಗ್ಲೆಯನ್ನು ಮಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪತ್ನಿಯನ್ನೇ ಪತಿಯೋರ್ವ ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ಸಮೀಪದ ನೋಯ್ಡಾದಲ್ಲಿ ನಡೆದಿದ್ದು, ಕೊಲೆಯಾದವರು ಸಾಮಾನ್ಯ ಮಹಿಳೆ ಅಲ್ಲ, ಸುಪ್ರೀಂಕೋರ್ಟ್‌ನ ವಕೀಲೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಪತಿ 61 ವರ್ಷದ ನಿತೀನ್ ನಾಥ್ ಸಿನ್ಹಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ನೋಯ್ಡಾದಲ್ಲಿ ತಾವು ವಾಸವಿದ್ದ ಬಂಗಲೆಯಲ್ಲಿ ಈ ಕೃತ್ಯ ನಡೆದಿದೆ. ಘಟನೆ ನಡೆದು 36 ಗಂಟೆಗಳವರೆಗೂ ಆರೋಪಿ ಈ ಬಂಗ್ಲೆಯ ಸ್ಟೋರ್ ರೂಮ್‌ನಲ್ಲಿ ಅಡಗಿಕೊಂಡಿದ್ದ, ಪೊಲೀಸರು ಈತನ ಫೋನ್ ಟ್ರ್ಯಾಕ್ ಮಾಡಿದ ನಂತರ ಆತ ಮನೆಯ ಸ್ಟೋರ್ ರೂಮ್‌ನಲ್ಲಿ ಅಡಗಿ ಕುಳಿತಿರುವುದು ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನೋಯ್ಡಾದ ಸೆಕ್ಟರ್ 30ರಲ್ಲಿರುವ (Noida sector 30) ಬಂಗ್ಲೆಯ ಬಾತ್ ರೂಮ್‌ನಲ್ಲಿ ಸುಪ್ರೀಂಕೋರ್ಟ್ ವಕೀಲೆ (Supreme Court Advocate) ರೇಣು ಸಿನ್ಹಾ (Renu sinha) ಅವರ ಶವ ಶನಿವಾರ ಪತ್ತೆಯಾಗಿತ್ತು. ಈ ದಂಪತಿಯ ಪುತ್ರ ವಿದೇಶದಲ್ಲಿದ್ದು, ದಂಪತಿ ಇಬ್ಬರೇ ಈ ದೊಡ್ಡದಾದ ಬಂಗ್ಲೆಯಲ್ಲಿ ವಾಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದಲೂ ರೇಣು ಅವರು ದೂರವಾಣಿ ಕರೆಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ರೇಣು ಅವರ ಸೋದರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಪೊಲೀಸರೊಂದಿಗೆ ಬಂಗ್ಲೆ ತಲುಪಿದಾಗ ರೇಣು ಶವ ಪತ್ತೆಯಾಗಿತ್ತು, ಜೊತೆಗೆ ರೇಣು ಪತಿ ನಿತಿನ್ ನಾಥ್ ಸಿನ್ಹಾ ನಾಪತ್ತೆಯಾಗಿದ್ದರು.
ವೃದ್ಧ ಮಾವನ ಜೊತೆ ಸೊಸೆಗೆ ಲೈಂಗಿಕ ಸಂಬಂಧ, ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ!
ಇದಾದ ಬಳಿಕ ಪೊಲೀಸರು ಸಿನ್ಹಾ ಫೋನ್‌ನ್ನು ಟ್ರ್ಯಾಕ್ (Phone track) ಮಾಡಿದಾಗ ಅದು ಬಂಗ್ಲೆಯಲ್ಲಿಯೇ ಕೊನೆಯ ಲೋಕೇಷನ್ ತೋರಿಸುತ್ತಿತ್ತು, ನಂತರ ಮನೆಯಲ್ಲೇ ಹುಡುಕಾಡಿದಾಗ ಸ್ಟೋರ್ ರೂಮ್‌ನಲ್ಲಿ ಅಡಗಿ ಕುಳಿತಿರುವುದು ಕಂಡು ಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಬಂಧನಕ್ಕೂ ಮೊದಲೇ ವಕೀಲೆಯ ಸಹೋದರ ತನ್ನ ಸಹೋದರಿಯನ್ನು ಆಕೆಯ ಪತಿಯೇ ಹತ್ಯೆ ಮಾಡಿದ್ದಾರೆ ಎಂದು ದೂರಿದ್ದರು.
ಈಗ ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಬಂಗ್ಲೆಯನ್ನು ಮಾರುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು, ಬಂಗ್ಲೆ ಮಾರಾಟ ಮಾಡುವುದಕ್ಕೆ ಆಕೆಗೆ ಇಷ್ಟವಿರಲಿಲ್ಲ, ಹೀಗಾಗಿ ಆಕೆಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಗೆ ಬಂಗ್ಲೆಯನ್ನು ಮಾರುವುದಕ್ಕೆ ಸ್ವಲ್ಪವೂ ಇಷ್ಟವಿರಲಿಲ್ಲ, ಇತ್ತ ಪತಿ ಬಂಗ್ಲೆಗೆ ಗಿರಾಕಿ ನೋಡಿ ಅವರಿಂದ ಸ್ವಲ್ಪ ಮೊತ್ತದ ಹಣವನ್ನು ಕೂಡ ಪಡೆದಿದ್ದರು. ಆದರೆ ಪತ್ನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಇದರಿಂದ ದಂಪತಿ ಮಧ್ಯೆ ಆಗಾಗ ಗಲಾಟೆಗಳಾಗುತ್ತಿದ್ದವು, ಇದೇ ಗಲಾಟೆ ಈಗ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಗಗನಸಖಿಯ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿ ಜೈಲಲ್ಲಿ ಆತ್ಮಹತ್ಯೆಗೆ ಶರಣು!