ಪಾಕ್‌ನಲ್ಲಿ ಕಂದಹಾರ್‌ ವಿಮಾನ ಹೈಜಾಕ್‌ ರೂವಾರಿ, ಉಗ್ರ ಮಸೂದ್ ಅಜರ್ ಹತ್ಯೆ: ದಟ್ಟ ವದಂತಿ

By Kannadaprabha News  |  First Published Jan 2, 2024, 10:15 AM IST

ಈತ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿದ್ದು, ಇತ್ತೀಚೆಗೆ ಹಲವು ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವಂತೆಯೇ ಇವನೂ ನಿಗೂಢ ದಾಳಿಗೆ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.


ನವದೆಹಲಿ (ಜನವರಿ 2, 2024): 2001 ರ ಸಂಸತ್‌ ಮೇಲಿನ ದಾಳಿಯ ರೂವಾರಿ, ಕಂದಹಾರ್‌ ವಿಮಾನ ಹೈಜಾಕ್‌ ಪ್ರಕರಣದ ಮಾಸ್ಟರ್‌ಮೈಂಡ್‌ ಉಗ್ರ ಮಸೂದ್‌ ಅಜರ್‌ನನ್ನು ಪಾಕಿಸ್ತಾನದ ಇಸ್ಲಾಮಾಬಾದಲ್ಲಿ ಅನಾಮಧೇಯ ವ್ಯಕ್ತಿಗಳು ಬಾಂಬ್‌ ಸ್ಪೋಟಿಸಿ ಹತ್ಯೆಗೈದಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಡಿವೆ.

ಆದರೆ ಈ ಸಂದೇಶಗಳಿಗೆ ಯಾವುದೇ ಖಚಿತ ಆಧಾರವಿಲ್ಲ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. 

Tap to resize

Latest Videos

ಇದನ್ನು ಓದಿ: ಪಾಕ್‌ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!

ಟ್ವೀಟ್‌ಗಳಲ್ಲೇನಿದೆ? : ಈತ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿದ್ದು, ಇತ್ತೀಚೆಗೆ ಹಲವು ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವಂತೆಯೇ ಇವನೂ ನಿಗೂಢ ದಾಳಿಗೆ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸೋಮವಾರ ಬೆಳಿಗ್ಗೆ 5 ಗಂಟೆಗೆ ನಡೆದ ಸ್ಫೋಟದಲ್ಲಿ ಮಸೂದ್‌ ಸಾವನ್ನಪ್ಪಿದ್ದಾನೆ ಎಂದು ಕೆಲವರು ಬರೆದಿದ್ದಾರೆ.

ಇಂತಹ 20ಕ್ಕೂ ಹೆಚ್ಚು ಉಗ್ರರ ಸಾವು ಕೆಲ ತಿಂಗಳಿನಿಂದ ಪಾಕ್‌ನಲ್ಲಿ ಸಂಭವಿಸಿದ್ದು, ಅದನ್ನು ಭಾರತದ ಗುಪ್ತಚರ ದಾಳಿ ಮಾಡಿಸುತ್ತಿದೆ ಎಂದು ಪಾಕಿಸ್ತಾನದಲ್ಲಿ ಸುದ್ದಿ ಹಬ್ಬಿದೆ.

ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ದಾವೂದ್ ಸಾವಿನ ವದಂತಿ: ಗುಪ್ತಚರ ಇಲಾಖೆ ಹೇಳಿದ್ದೇನು, ಅಸಲಿಯತ್ತು ಹೀಗಿದೆ..

click me!