ಅತ್ಯಾಚಾರಕ್ಕೊಳಗಾದ ಬಾಲಕಿ ತಾಯಿಗೆ ಯೋಗಿ ಭರವಸೆ, ಆರೋಪಿ ಶಾಪ್ ಮೇಲೆ ನುಗ್ಗಿದ ಬುಲ್ಡೋಜರ್!

By Chethan KumarFirst Published Aug 3, 2024, 3:52 PM IST
Highlights

12 ವರ್ಷದ ಬಾಲಕಿ ಮೇಲೆ ಸಮಾಜವಾದಿ ಪಾರ್ಟಿ ನಾಯಕ ಹಾಗೂ ಆತನ ಸಹಚರರು ಸೇರಿ ನಡೆಸಿದ ಗ್ಯಾಂಗ್ ರೇಪ್‌ ಪ್ರಕರಣದಲ್ಲಿ ಇದೀಗ ಯೋಗಿ ಸರ್ಕಾರ ತನ್ನ ಪ್ರಮುಖ ಅಸ್ತ್ರ ಬಳಸಿದೆ. ಬಾಲಕಿ ತಾಯಿಗೆ ನೀಡಿದ ಭರವಸಯಂತೆ ಆರೋಪಿಯ ಬೇಕರಿ ಶಾಪ್ ಮೇಲೆ ಯೋಗಿ ಸರ್ಕಾರದ ಬುಲ್ಡೋಜರ್ ನುಗ್ಗಿದೆ. 
 

ಆಯೋಧ್ಯೆ(ಆ.03) ಉತ್ತರ ಪ್ರದೇಶದಲ್ಲಿ ಆರೋಪಿಗಳ ಮೇಲೆ ಮೇಲೆ ಬುಲ್ಡೋಜರ್ ಪ್ರಹಾರ ನಡೆಸುವುದು ಹೊಸದಲ್ಲ. ಆದರೆ ಈ ಬಾರಿ ಸಮಾಜವಾದಿ ಪಾರ್ಟಿ ನಾಯಕ, ಅತ್ಯಾಚಾರ ಆರೋಪಿ ಮೋಯಿದ್ ಖಾನ್ ಬೇಕರಿ ಶಾಪ್ ಮೇಲೆ ಬುಲ್ಡೋಜರ್ ನುಗ್ಗಿ ಧ್ವಂಸಗೊಳಿಸಿದೆ. ಅತ್ಯಾಚಾರಕ್ಕೊಳಗಾದ 12 ವರ್ಷದ ಬಾಲಕಿ ತಾಯಿಗೆ ಸಿಎಂ ಯೋಗಿ ಆದಿತ್ಯನಾಥ್ ನೀಡಿದ ಭರವಸೆಯಂತೆ, ಆರೋಪಿ ಶಾಪ್ ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ. ಇಷ್ಟಕ್ಕೇ ಶಿಕ್ಷೆ ಮುಗಿದಿಲ್ಲ, ಇದೀಗ ಕಾನೂನು ಪ್ರಕಾರ ಆರೋಪಿಗಳಿಗೆ ಕಠಿಣ ಶಿಕ್ಷೆಯ ಭರವಸೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ.

ಆಯೋಧ್ಯೆಯ ಭದ್ರಸಾದಲ್ಲಿ ಸಮಾಜವಾದಿ ನಾಯಕನಾಗಿ ಗುರುತಿಸಿಕೊಂಡಿರುವ ಮೋಯಿದ್ ಖಾನ್ ಹಾಗೂ ಆತನ ಮಾಲೀಕತ್ವದ ಬೇಕರಿಯಲ್ಲಿರುವ ಉದ್ಯೋಗಿ ರಾಜು ಜೊತೆ ಸೇರಿ 12 ವರ್ಷದ ಬಾಲಕಿ ಮೇಲೆ ಸಾಮಾಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ವೇಳೆ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಕಳೆದ ಎರಡೂವರೆ ತಿಂಗಳಿನಿಂದ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದಾರೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ.

Latest Videos

ಉತ್ತರ ಪ್ರದೇಶದಲ್ಲಿ ಒಳಗೊಳಗೇ ಏನಾಗುತ್ತಿದೆ?: ಮೋದಿ, ಅಮಿತ್‌ ಶಾ, ಯೋಗಿ, ಯುಪಿ ಆಟ

ಬಾಲಕಿ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಗರ್ಭಿಣಿ ಅನ್ನೋ ಮಾಹಿತಿ ಬಯಲಾಗಿದೆ. ಈ ವೇಳೆ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಘಟನೆ ಕುರಿತು ಆಯೋಧ್ಯೆ ಸಂಸದ, ಸಮಾಜವಾದಿ ಪಾರ್ಟಿ ನಾಯಕ ಅವಧೇಶ್ ಪ್ರಸಾದ್ ಮೌನ ವಹಿಸಿದ್ದಾರೆ. ಸಂತ್ರಸ್ತೆ ತಾಯಿ ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಅಂಗಲಾಚಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬಾಲಕಿಗೆ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದರು.

ಈ ಘಟನೆ ಕುರಿತು ವರದಿ ತರಿಸಿಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಮುಖ ಆರೋಪಿ ಮೋಯಿದ್ ಖಾನ್ ಬೇಕರಿ ಶಾಪ್ ಮೇಲೆ ಇಂದು ಬುಲ್ಡೋಜರ್ ನುಗ್ಗಿದೆ. ಅನಧಿಕೃತವಾಗಿ ಕಟ್ಟಲಾಗಿದ್ದ ಈ ಬೇಕರಿ ಶಾಪ್‌ನ್ನು ಧ್ವಂಸಗೊಳಿಸಲಾಗಿದೆ. ಭಾರಿ ಪೊಲೀಸ್ ಭದ್ರತೆಯೊಂದಿಗೆ ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪುರಕಲಂದರ್ ಪೊಲೀಸ್ ಠಾಣೆಯ ಕೆಲ ಪೊಲೀಸ್ ಅಧಿಕಾರಿಗಳು ಅಮಾನತ್ತಾಗಿದ್ದಾರೆ. 

ಸಂತ್ರಸ್ತೆ ಕುಟುಂಬ ಬೇಟಿಯಾಗಿರುವ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. ತಪ್ಪತಸ್ಥರನ್ನು ಉಳಿಸುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಾಲಕಿಗೆ ನ್ಯಾಯ ಕೊಡಿಸುತ್ತೇನೆ ಎಂದು ಸಂತ್ರಸ್ತೆ ತಾಯಿಗೆ ಯೋಗಿ ಭರವಸೆ ನೀಡಿದ್ದರು.

ಹತ್ರಾಸ್‌ನಲ್ಲಿ ಕಾಲ್ತುಳಿತ ಪ್ರಕರಣ: ಯೋಗಿ ಸರ್ಕಾರದ ವಿರುದ್ಧ ರಾಹುಲ್‌ ವಾಗ್ದಾಳಿ, ಭೋಲೆ ಬಾಬಾ ನಾಪತ್ತೆ
 

click me!