ನಮ್ ಜಮೀನಲ್ಲಿ ಆ ರಾಕ್ಷಸರನ್ನು ಸುಡಬೇಡಿ: ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ!

By Suvarna News  |  First Published Dec 6, 2019, 7:31 PM IST

ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದು, ಆರೋಪಿಗಳ ಅಂತ್ಯಕ್ರಿಯೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂತ್ಯಕ್ರಿಯೆಗೆ ಆರೋಪಿಗಳ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಹೈದ್ರಾಬಾದ್ (ಡಿ.06): ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದು, ಆರೋಪಿಗಳ ಅಂತ್ಯಕ್ರಿಯೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

Latest Videos

ಎನ್​ಕೌಂಟರ್​ಗೆ ಒಳಗಾದ ನಾಲ್ವರು ಆರೋಪಿಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಂತ್ಯಕ್ರಿಯೆಗೆ ಆರೋಪಿಗಳ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Accused snatched weapons and attacked police party, got killed in retaliatory firing, says Cyberabad CP

Read Story | https://t.co/4kuhpSfXfj pic.twitter.com/iLKlGA4ZcU

— ANI Digital (@ani_digital)

ಈ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲೇ ಆರೋಪಿಗಳ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆರೋಪಿ ಮೊಹಮ್ಮದ್​ ಆರೀಫ್​ ಅಂತ್ಯಕ್ರಿಯೆಯನ್ನು ಜಾಕ್ಲೆರ್​ ಗ್ರಾಮದಲ್ಲಿ ನೇರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಇನ್ನು ಮೂರು ಆರೋಪಿಗಳಾದ ಜೋಲ್ಲು ಶಿವ, ಜೋಲ್ಲು ನವೀನ್​ ಹಾಗೂ ಚೆನ್ನಕೇಶವಲು ಅಂತ್ಯಕ್ರಿಯೆಯನ್ನು ಗುಂಡಿಗಡ್ಲ ಗ್ರಾಮದಲ್ಲಿ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.

Father of veterinarian who was raped and murdered: Justice has been delivered. My daughter will not come back now, but my message for the people is that entire country should stand with families that go through the same. pic.twitter.com/miPmbAsM3L

— ANI (@ANI)

ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು, ಇಲ್ಲಿ ಅಂತ್ಯಕ್ರಿಯೆ ನಡೆಸದಂತೆ ಪಟ್ಟು ಹಿಡಿದಿದ್ದಾರೆ. ಜನಾಕ್ರೋಶ ಹೆಚ್ಚಾದ ಕಾರಣಕ್ಕೆ ಆರೋಪಿಗಳ ಮನೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಕೊಂದಿದ್ದು ಸರಿ, ತಪ್ಪು: ಆರೋಪಿಗಳ ಕುಟುಂಬದವರ ಮಿಶ್ರ ಪ್ರತಿಕ್ರಿಯೆ!

click me!