ಕೋಲ್ಕತ್ತಾ ಆರ್‌ಜಿ ಕಾರ್ ಕಾಲೇಜಿನ ಪೋಸ್ಟ್ ಗ್ರಾಜುಯೇಟ್ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಆಡಿಯೋವೊಂದು ಹರಿದಾಡುತ್ತಿದೆ. ಮಹಿಳಾ ವೈದ್ಯೆಯೊಬ್ಬರು ಈ ಪ್ರಕರಣದ ಬಗ್ಗೆ ಶಾಕಿಂಗ್ ವಿಚಾರವನ್ನು ಬೆಳಕಿಗೆ ತಂದಿದ್ದಾರೆ. ದಿನಗಳ ಹಿಂದಷ್ಟೇ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಟ್ರೈನಿ ವೈದ್ಯೆಯ ಪೋಷಕರು ತಮ್ಮ ಮಗಳ ಮೇಲೆ ಗ್ಯಾಂಗ್‌ರೇಪ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಈಗ ಈ ಕೊಲೆ ಪ್ರಕರಣದಲ್ಲಿ ಈಗ ಬಂಧಿತನಾಗಿರುವ ಆರೋಪಿ ಮಾತ್ರವಲ್ಲದೇ ಇನ್ನು ಅನೇಕರು ಶಾಮೀಲಾಗಿದ್ದಾರೆ ಎನ್ನಲಾಗುತ್ತಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೊದಲಿಗೆ ಟ್ರೈನಿ ವೈದ್ಯೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಬಳಿಕ ಅತ್ಯಾಚಾರ ಮಾಡಲಾಗಿದೆ. ಒಬ್ಬಳು ಯುವತಿಯೂ ಈ ಕೊಲೆ ಪ್ರಕರಣದ ಹಿಂದಿದ್ದಾಳೆ. ಕಾಲೇಜಿನ ಪ್ರಾಂಶುಪಾಲರು. ಹಿರಿಯ ವೈದ್ಯ ಹಾಗೂ ಸಂಬಂಧಿತ ವಿಭಾಗದ ಮುಖ್ಯಸ್ಥ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಆಡಿಯೋ ಕ್ಲಿಪೊಂದು ವೈರಲ್ ಆಗ್ತಿದೆ.
ಕೋಲ್ಕತ್ತಾದಲ್ಲಿ ವೈದ್ಯೆಯ ರೇಪ್& ಕೊಲೆ ಕೇಸ್: ದೇಶವ್ಯಾಪಿ ಅನಿರ್ದಿಷ್ಟವಾಧಿ ಮುಷ್ಕರಕ್ಕೆ ವೈದ್ಯರ ಕರೆ
ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಈ ಆಡಿಯೋವನ್ನು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯಾ ಶೇರ್ ಮಾಡಿದ್ದಾರೆ. ಈ ಆಡಿಯೋ ಕ್ಲಿಪ್‌ನಲ್ಲಿ ಮಹಿಳಾ ಡಾಕ್ಟರ್ ಒಬ್ಬರು, ಟ್ರೈನಿ ವೈದ್ಯರನ್ನು, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರ ಸಿಬ್ಬಂದಿ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸುತ್ತಿರುವುದನ್ನು ಕೇಳಬಹುದಾಗಿದೆ. ಪ್ರಾಂಶುಪಾಲರು ಹಾಗೂ ಇತರರು ಈ ಟ್ರೈನಿ ವೈದ್ಯರನ್ನು ತಮಗಿಷ್ಟ ಬಂದಂತೆ ಕೆಲಸ ಮಾಡಿಸುತ್ತಿದ್ದರೆ ಅಲ್ಲದೇ ಅವರಿಗೆ ಥಿಸಿಸ್ ಸಲ್ಲಿಕೆ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆಡಿಯೋ ಕ್ಲಿಪ್‌ನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿರುವ ಈ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಂಶುಪಾಲರು ಹಾಗೂ ವಿಭಾಗ ಮುಖ್ಯಸ್ಥರು ಹಣಕ್ಕಾಗಿ ವಿದ್ಯಾರ್ಥಿಗಳನ್ನು ಪೀಡಿಸುತ್ತಾರೆ. ಹಣ ನೀಡದೇ ಹೋದರೆ ಅವರು ಹೇಳಿದಂತೆ ಥಿಸೀಸ್ ಸಲ್ಲಿಕೆ ಮಾಡದಿದ್ದರೆ, ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣಪತ್ರ ನೀಡುವುದಿಲ್ಲ ಎಂದು ಬೆದರಿಸುತ್ತಾರೆ. ಇದರಿಂದ ಟ್ರೈನಿ ವೈದ್ಯರಿಗೆ ಮೆಡಿಕಲ್ ರಿಜಿಸ್ಟ್ರೇಷನ್ ಸಿಗುವುದಿಲ್ಲ ಎಂದು ಮಹಿಳಾ ವೈದ್ಯೆ ತಮ್ಮ ಆಡಿಯೋದಲ್ಲಿ ಆರೋಪಿಸಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್
ಆರ್‌ಜಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದೀಪ್ ಘೋಷ್ ಅವರು ಈ ಕಾಲೇಜಿನ ಎಲ್ಲಾ ಅಕ್ರಮಗಳ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಇಂಟರ್ನ್ ವೈದ್ಯರು ಹಾಗೂ ಕಾಲೇಜಿನ ಹೌಸ್ ಸ್ಟಾಪ್‌ಗಳನ್ನು ಬಳಸಿಕೊಂಡು ಅಲ್ಲಿ ಡ್ರಗ್ ದಂಧೆ ಹಾಗೂ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದಾರೆ. ಇಲ್ಲಿ ಹೆರೋಯಿನ್, ಬ್ರೌನ್ ಶುಗರ್ ಕೂಡ ಇಲ್ಲಿ ಸುಲಭವಾಗಿ ಸಿಗುತ್ತದೆ. ಇದರ ಜೊತೆಗೆ ಇಲ್ಲಿ ಕಡಿಮೆ ಬೆಲೆಯ ಕೆಲ ಮೆಡಿಸಿನ್‌ಗಳು ಕೂಡ ಡ್ರಗ್ ರೀತಿ ಪೂರೈಕೆಯಾಗುತ್ತಿದೆ. ಈ ಚಟುವಟಿಕೆಗಳಿಗೆ ಕೋಟಿ ಮೊತ್ತದ ಟೆಂಡರ್ ಕರೆಯಲಾಗುತ್ತದೆ. ಇದರಲ್ಲಿ ಸಿಗುವ ಹೆಚ್ಚಿನ ಮೊತ್ತ ರಾಜಕೀಯ ಪಾರ್ಟಿಗಳ ಫಂಡ್‌ಗಳಿಗೆ ಹೋಗುತ್ತದೆ ಎಂದು ಈ ಆಡಿಯೋ ಕ್ಲಿಪ್‌ನಲ್ಲಿದ್ದು, ಕೋಲ್ಕತ್ತಾ ಮೆಡಿಕಲ್ ಕಾಲೇಜುಗಳ ಕರಾಳ ಮುಖವನ್ನು ಬಿಚ್ಚಿಡುತ್ತಿದೆ.
ಹಾಗೆಯೇ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಟ್ರೈನಿ ವೈದ್ಯೆ, ಒಳ್ಳೆಯ ವಿದ್ಯಾರ್ಥಿಯಾಗಿದ್ದು, ಆಕೆಗೆ ಥಿಸೀಸ್ ಸಲ್ಲಿಕೆ ಮಾಡುವಂತೆ ನಿರಂತರ ಬೆದರಿಕೆ ಇತ್ತು. ಈಗ ಆಡಿಯೋದಲ್ಲಿರುವಂತೆ ಟ್ರೈನಿ ವೈದ್ಯೆ ಆರು ತಿಂಗಳ ಹಿಂದೆಯೇ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಲು ನಿರ್ಧರಿಸಿದ್ದರು. ಡಿಪಾರ್ಟ್‌ಮೆಂಟ್ ಹೆಡ್‌ಗಳು ನಿರಂತರವಾಗಿ ಆಕೆಗೆ ರಾತ್ರಿ ಪಾಳಿ ನೀಡುವ ಮೂಲಕ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದೇ ರೀತಿಯ ಕಿರುಕುಳ ಪಶ್ಚಿಮ ಬಂಗಾಳದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲೂ ಇದೆ.
ಈ ಅಕ್ರಮ ಚಟುವಟಿಕೆಗಳ ಮೂಲಕ ಫಾರ್ಮಾ ಕಂಪನಿಗಳು ಕೋಟಿಗಟ್ಟಲೇ ಹಣವನ್ನು ಗಳಿಸುತ್ತಿದ್ದು ಆ ಹಣ ರಾಜಕೀಯ ಪಕ್ಷಗಳ ಪಾರ್ಟಿ ಫಂಡ್‌ಗಳಿಗೆ ಹೋಗುತ್ತಿದೆ. ಇದು ರಾಜ್ಯದಲ್ಲಿ ತುಂಬಾ ಅಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ತೋರಿಸುತ್ತಿದೆ. ಮಹಿಳಾ ವೈದ್ಯೆಯೊಬ್ಬರ ಆಡಿಯೋದಿಂದ ಬಯಲಾಗಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಈಗ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ವಾರ್ಡ್ ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮಾಡ್ತಿದ್ದಾರೆ.
This viral audio clip in West Bengal lays open the rot in the healthcare system and RG Kar Medical College & Hospital, in particular.
All this is happening under Mamata Banerjee’s watch, who also happens to be the Health Minister.
Much of it has also been written about in the… pic.twitter.com/N4ZLShB24r