ಕನ್ಹಯ್ಯಲಾಲ್‌ ಹಂತಕರಿಗೆ ಎನ್‌ಐಎ ಫುಲ್‌ ಡ್ರಿಲ್, ಕೋರ್ಟ್‌ನಲ್ಲಿ ವಕೀಲರಿಂದಲೇ ಹಲ್ಲೆ, ವಿಡಿಯೋ ವೈರಲ್!

By Santosh NaikFirst Published Jul 2, 2022, 4:58 PM IST
Highlights

ಉದಯಪುರದಲ್ಲಿ ಕನ್ಹಯ್ಯಲಾಲ್‌ರನ್ನು ಭೀಕರವಾಗಿ ಶಿರಚ್ಛೇದ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಶನಿವಾರ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್‌ನಲ್ಲಿಯೇ ವಕೀಲರಿಂದಲೇ ಭೀಕರ ಕೌರ್ಯದಲ್ಲಿ ಭಾಗಿಯಾದ ರಿಯಾಜ್‌ ಅಟ್ಟಾರಿ, ಮೊಹಮದ್ ಗೌಸ್, ಮೊಹ್ಶಿನ್‌ ಹಾಗೂ ಆಸಿಫ್‌ ಮೇಲೆ ಹಲ್ಲೆ ಮಾಡಲಾಗಿದ್ದು ವಿಡಿಯೋ ವೈರಲ್ ಆಗಿದೆ.
 


ಜೈಪುರ (ಜುಲೈ 2): ಪ್ರವಾದಿ ಮೊಹಮದ್ ಪೈಗಂಬರ್‌ ಕುರಿತಾಗಿ ನೂಪುರ್‌ ಶರ್ಮ(Nupur Sharma) ಹೇಳಿದ್ದ ಹೇಳಿಕೆಯನ್ನು ಬೆಂಬಲಿಸಿ ಸೋಷಿಯಲ್‌ ಮೀಡಿಯಾದಲ್ಲಿ (Social Media) ಪೋಸ್ಟ್‌ ಮಾಡಿದ್ದ ಕನ್ಹಯ್ಯಲಾಲ್‌ನನ್ನು(Kanhaiyalal) ಭೀಕರವಾಗಿ ಶಿರಚ್ಛೇಧ ಮಾಡಿದ್ದ ಆರೋಪಿಗಳನ್ನು ಶನಿವಾರ ಎನ್‌ಐಎ (Jaipur NIA Court) ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನಾಲ್ವರು ಆರೋಪಿಗಳ ಮೇಲೆ ವಕೀಲರೇ ಹಲ್ಲೆ ಮಾಡಿದ್ದಾರೆ.

ವಿಚಾರಣೆಯ ವೇಳೆ ಕೋರ್ಟ್‌, ಇನ್ನೂ 10 ದಿನಗಳ ಕಾಲ ರಿಮಾಂಡ್‌ ನೀಡಲು ಒಪ್ಪಿಕೊಂಡಿದೆ. ಅದರಂತೆ, ನಾಲ್ವರು ಆರೋಪಿಗಳ ಪೈಕಿ ನೇರವಾಗಿ ಹತ್ಯೆಯಲ್ಲಿ ಭಾಗಿಯಾದ ಮೊಹಮದ್‌ ಗೌಸ್‌ (Ghaus Mohammad), ರಿಯಾಜ್‌ ಅಟ್ಟಾರಿ (Riyaz Jabbar ) ಹಾಗೂ ಹತ್ಯೆಗೆ ಸಹಾಯ ಮಾಡಿದ ಮೊಹ್ಶಿನ್‌ (Mohsin) ಹಾಗೂ ಆಸಿಫ್‌ರನ್ನು (Asif) ವ್ಯಾನ್‌ನತ್ತ ಕರೆದುಕೊಂಡು ಹೋಗುತ್ತಿದ್ದ ವೇಳೆ ವಕೀಲರು ಹಲ್ಲೆ ಮಾಡಿದ್ದಾರೆ. ಭಾರೀ ಜನಸ್ತೋಮದ ನಡುವೆ ಅವರನ್ನು ಕರೆದುಕೊಂಡು ಬರುವ ವೇಳೆ, ರಿಯಾಜ್‌ ಹಾಗೂ ಮೊಹಮದ್‌ರ ಅಂಗಿ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ್ದಾರೆ.

ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ನಡೆಸಿದ ಆರೋಪಿಗಳನ್ನು ಶನಿವಾರ ಜೈಪುರದ ಎನ್‌ಐಎ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಈ ವೇಳೆ ಅವರ ಮೇಲೆ ಸ್ಥಳೀಯ ವಕೀಲರು ಹಲ್ಲೆ ನಡೆಸಿದ್ದಾರೆ. pic.twitter.com/oVLqevyoL1

— Asianet Suvarna News (@AsianetNewsSN)


ಭಾರಿ ಭದ್ರತೆಯಲ್ಲಿ ಕೋರ್ಟ್‌ಗೆ ಹಾಜರು: ಇದಕ್ಕೂ ಮುನ್ನ ಭಾರಿ ಭದ್ರತೆಯಲ್ಲಿ ಎಲ್ಲರನ್ನೂ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಅದರಲ್ಲೂ, ರಿಯಾಜ್‌ ಹಾಗೂ ಮೊಹಮದ್‌ಗೆ ಎನ್‌ಐಎ ಸರಿಯಾಗಿ ಡ್ರಿಲ್‌ ಮಾಡಿದ್ದ ಕಾರಣಕ್ಕೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಬ್ಬರು ಪೊಲೀಸರು ಆತನಿಗೆ ಹೆಗಲು ಕೊಟ್ಟು ಕೋರ್ಟ್‌ಗೆ ಕರೆ ತಂದಿದ್ದರು. ವ್ಯಾನ್‌ಗೆ ಹಾಕುವ ವೇಳೆಯಲ್ಲೂ ಕೈಕಾಲುಗಳನ್ನು ಹಿಡಿದು ವ್ಯಾನ್‌ಗೆ ತುಂಬಿದ್ದಾರೆ.

Four accused of Udaipur incident case to appear in NIA court, Accused Name: Ghaus Mohammad, Riyaz Attari, Mohsin and Asif.pic.twitter.com/NnydBoiRMU

— ADV. ASHUTOSH J. DUBEY 🇮🇳 (@AdvAshutoshBJP)

Latest Videos

ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶನಿವಾರ ಮಧ್ಯಾಹ್ನ 1.30ಕ್ಕೆ ಜೈಪುರ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರತಿಭಟನೆ ವೇಳೆ ವಕೀಲರು ಆರೋಪಿಗಳನ್ನು ಗಲ್ಲಿಗೇರಿಸುವಂತೆ ಘೋಷಣೆ ಕೂಗಿ ಆರೋಪಿಗಳಿಗೆ ಥಳಿಸಿದ್ದಾರೆ. ವಕೀಲರು ಆರೋಪಿಗಳ ಬಟ್ಟೆ ಹರಿದಿದ್ದಾರೆ. ಆದರೆ, ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ನ್ಯಾಯಾಲಯದ ಕೊಠಡಿಗೆ ಕರೆದೊಯ್ದರು.

ಉದಯಪುರ ಹತ್ಯೆ ತಾಲಿಬಾನ್‌ ಮನಸ್ಥಿತಿಯ ಕೃತ್ಯ ಎಂದ ಆರ್‌ಎಸ್ಎಸ್!

ನ್ಯಾಯಾಲಯವು ಹಂತಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಜುಲೈ 12 ರವರೆಗೆ 10 ದಿನಗಳ ಕಸ್ಟಡಿಗೆ ಒಪ್ಪಿಸಿದೆ. ತಾಲಿಬಾನ್ ಮಾದರಿಯ ಹತ್ಯಾಕಾಂಡದ ಪ್ರಮುಖ ಆರೋಪಿಗಳಾದ ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಜಬ್ಬಾರ್ ಅವರನ್ನು ಅಜ್ಮೀರ್‌ನಿಂದ ಜೈಪುರಕ್ಕೆ ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ ಕರೆದೊಯ್ದಿತ್ತು. ಇಬ್ಬರನ್ನೂ ಇಲ್ಲಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿತ್ತು. ಕೋರ್ಟ್‌ಗೆ ಕರೆತಂದ ವೇಳೆ ವಕೀಲರು ಪಾಕಿಸ್ತಾನಿ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ದೇಶಕ್ಕೆ ದ್ರೋಹ ಮಾಡಿದ ಇವರುಗಳನ್ನು ಗಲ್ಲಿಗೇರಿಸಿ, ವಂದೆ ಮಾತರಂ ಎನ್ನುವ ಘೋಷಣೆಗಳನ್ನು ಕೋರ್ಟ್‌ನಲ್ಲಿ ಕೂಗಲಾಗಿದೆ.

ಮುಂಬೈ ದಾಳಿ ದಿನಾಂಕವೇ ರಿಯಾಜ್ ಬೈಕ್ ನಂಬರ್, ಕನ್ಹಯ್ಯನ ಕತ್ತು ಕುಯ್ದ ಕತ್ತಿಯನ್ನು ತಾನೇ ತಯಾರಿಸಿದ್ದ!

ಭಾರೀ ಭದ್ರತೆಯ ನಡುವೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅದರ ಹೊರತಾಗಿಯೂ ಆರೋಪಿಗಳು ಸ್ಥಳೀಯ ವಕೀಲರಿಂದ ಆಕ್ರೋಶವನ್ನು ಎದುರಿಸಬೇಕಾಯಿತು. ಆರೋಪಿಗಳು ನ್ಯಾಯಾಲಯದ ಮೊರೆ ಹೋದ ನಂತರ 5 ಗಂಟೆಗಳ ಕಾಲ ಬಾಗಿಲು ಮುಚ್ಚಲಾಗಿತ್ತು. ಆದರೆ ಹೊರಗೆ ಬಂದಾಗ ಆರೋಪಿಗಳಿಗೆ ಶೂ, ಚಪ್ಪಲಿ ಮತ್ತು ದೊಣ್ಣೆಗಳಿಂದ ಥಳಿಸಲಾಯಿತು, ಪೊಲೀಸರು ಹಂತಕರನ್ನು ವ್ಯಾನ್‌ನಲ್ಲಿ ಹತ್ತಿಸುವ ವೇಳೆ ಜನರು ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಆರೋಪಿಗೆ ಥಳಿಸಿದ ವಿಡಿಯೋ ಕೂಡ ಹೊರಬಿದ್ದಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈತನನ್ನು ಪೊಲೀಸ್ ವಾಹನಗಳಲ್ಲಿ ಹತ್ತಿಸುವಾಗ ಮಾತ್ರ ಹಿಂದೆ ಇದ್ದವರು ಪೊಲೀಸರ ಭದ್ರತೆಯ ನಡುವೆ ಥಳಿಸಿರುವುದು ಇದರಲ್ಲಿ ಕಂಡುಬರುತ್ತದೆ. ಒಬ್ಬ ಆರೋಪಿಯ ಕತ್ತು ಹಿಡಿದುಕೊಂಡು ಕಪಾಳಕ್ಕೆ ಬಾರಿಸುತ್ತಿರುವ ವಿಡಿಯೋ ಕೂಡ ಇದೆ. ಆದರೆ, ಪೊಲೀಸರು ಒಬ್ಬೊಬ್ಬರಾಗಿ ಆ ನಾಲ್ವರು ಆರೋಪಿಗಳನ್ನು ವ್ಯಾನ್‌ಗೆ  ಹಾಕಿದರು. ಆರೋಪಿಗಳನ್ನು ಹಾಜರುಪಡಿಸುವ ಮುನ್ನವೇ ಇಲ್ಲಿ ಹಾಜರಿದ್ದ ವಕೀಲರು ಆರೋಪಿಗಳನ್ನು ಗಲ್ಲಿಗೇರಿಸುವಂತೆ ಘೋಷಣೆಗಳನ್ನು ಕೂಗಿದ್ದರು.

click me!