ಅಪ್ಪನೋರ್ವನ ಸುದೀರ್ಘ ಹೋರಾಟಕ್ಕೆ ಸಿಕ್ತು ಜಯ: ಬಾಲಕನ ಕೊಂದ ಅಮ್ಮ ಚಿಕ್ಕಪ್ಪ ಕಡೆಗೂ ಅಂದರ್

By Kannadaprabha News  |  First Published Sep 24, 2023, 3:55 PM IST

ಬಾಲಕನನ್ನು ಹತ್ಯೆ ಮಾಡಿದ ಬಾಲಕನ ಹೆತ್ತ ತಾಯಿ ಹಾಗೂ ಚಿಕ್ಕಪ್ಪನನ್ನು ಘಟನೆ ನಡೆದ ಎರಡು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದು, ಬಾಲಕನ ತಾಯಿ ತನ್ನ ಮೈದುನನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.


ಭರತ್‌ಪುರ: ಬಾಲಕನನ್ನು ಹತ್ಯೆ ಮಾಡಿದ ಬಾಲಕನ ಹೆತ್ತ ತಾಯಿ ಹಾಗೂ ಚಿಕ್ಕಪ್ಪನನ್ನು ಘಟನೆ ನಡೆದ ಎರಡು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದು, ಬಾಲಕನ ತಾಯಿ ತನ್ನ ಮೈದುನನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಹತ್ಯೆಯಾದ 8 ವರ್ಷದ ಬಾಲಕ ತನ್ನ ತಾಯಿ ಹಾಗೂ ಚಿಕ್ಕಪ್ಪ ಇರಬಾರದ ಸ್ಥಿತಿಯಲ್ಲಿ ಇರುವುದನ್ನು ಕಣ್ಣಾರೆ ನೋಡಿದ, ಈ ಹಿನ್ನೆಲೆಯಲ್ಲಿ ಈ ಕ್ರಿಮಿಗಳಿಬ್ಬರು ಸೇರಿ ಪುಟ್ಟ ಬಾಲಕನ್ನೇ ಹತ್ಯೆ ಮಾಡಿದ್ದಾರೆ. ಅಮ್ಮ ಹಾಗೂ ಚಿಕ್ಕಪ್ಪ ಇಬ್ಬರು ಸೇರಿ ಬಾಲಕನ ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾರೆ. ರಾಜಸ್ಥಾನದ ಭರತ್‌ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 

ಬಾಲಕನ ತಾಯಿ ಹಾಗೂ ಮೈದುನ ಅನೈತಿಕ ಸಂಬಂಧವನ್ನು (Illegal Relationship) ಹೊಂದಿದ್ದರು. ಈ ವಿಚಾರವನ್ನು ಬಾಲಕ ನೋಡಿದ್ದ. ಬಾಲಕನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ ಜೋಡಿ ನಂತರ ಬಾಲಕನ ಶವವನ್ನು ಹೊಲದಲ್ಲಿ ಹೂತ್ತಿಟ್ಟಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಫೈಲ್ ಕ್ಲೋಸ್ ಮಾಡಿತ್ತು. ಆದರೆ ಬಾಲಕ ತಂದೆಯ ಸುದೀರ್ಘ ಹೋರಾಟದ ಫಲವಾಗಿ ಈಗ ಪಾಪಿ ತಾಯಿ ಹಾಗೂ ಚಿಕ್ಕಪ್ಪ ಜೈಲು ಪಾಲಾಗಿದ್ದಾರೆ. ಘಟನೆ ನಡೆದು ಎರಡು ವರ್ಷಗಳ ನಂತರ ಪೊಲೀಸರು ಈ ಕೊಲೆಗಾರರನ್ನು ಬಂಧಿಸಿದ್ದಾರೆ

Tap to resize

Latest Videos

ಅಂದು ನಡೆದಿದ್ದೇನು?
2021ರ ಫೆಬ್ರವರಿಯಲ್ಲಿ ಅಮ್ಮ ಹೇಮಲತಾ (Hemalata)ಹಾಗೂ ಚಿಕ್ಕಪ್ಪ ಕೃಷ್ಣಕಾಂತ್ ರೆಡ್ ಹ್ಯಾಂಡ್ ಆಗಿ ಬಾಲಕನಿಗೆ ಸಿಕ್ಕಿ ಬಿದ್ದಿದ್ದರು. ಇದಾದ ನಂತರ ತಮ್ಮ ಈ ಅನೈತಿಕ ಸಂಬಂಧ ಬಯಲಿಗೆ ಬರಬಹುದು ಎಂಬ ಭಯದಿಂದ ಇಬ್ಬರು ಸೇರಿ ಉಸಿರುಕಟ್ಟಿಸಿ ಈ ಬಾಲಕನ ಹತ್ಯೆ ಮಾಡಿದ್ದಾರ. ನಂತರ ಯಾರಿಗೂ ತಿಳಿಯದಂತೆ ಹೊಲದಲ್ಲಿ ಹೂತು ಹಾಕಿದ್ದಾರೆ. ಭರತ್‌ಪುರ (Bharatpur) ಜಿಲ್ಲೆಯ ರೂಪ್ಬಾಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಂದನಪುರ (Chandanapura) ಗ್ರಾಮದಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. 

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ನ್ಯಾಯಕ್ಕಾಗಿ ತಂದೆಯ ಸುದೀರ್ಘ ಹೋರಾಟ
ಇತ್ತ ತನ್ನ 8 ವರ್ಷದ ಮಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರಿಂದ ದುಃಖಿತನಾಗಿದ್ದ ಬಾಲಕನ ತಂದೆ ಗ್ಯಾನ್ ಸಿಂಗ್  ತನ್ನ 8 ವರ್ಷದ ಮಗು ಗೋಲು ನಾಪತ್ತೆಯಾಗಿರುವುದಾಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದರು, ಸುಮಾರು ಮೂರು ದಿನಗಳ ನಂತರ ಗ್ರಾಮದ ಹೊಲವೊಂದರಲ್ಲಿ ಮಗುವಿನ  ಮೃತದೇಹ ಪತ್ತೆ  ಆಗಿತ್ತು. ಆಗ  ಮಗುವನ್ನು ಕೊಂದವರು ಯಾರು ಎಂಬ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ, ಹೀಗಾಗಿ 2021ರ ಡಿಸೆಂಬರ್‌ನಲ್ಲಿ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ಫೈಲ್‌ ಕ್ಲೋಸ್ ಮಾಡಿದ್ದರು. ಆದರೆ ಮಗುವನ್ನು ಕಳೆದುಕೊಂಡ ತಂದೆ ಮಾತ್ರ ಸುಮ್ಮನೇ ಕೂರಲಿಲ್ಲ, ಅವರು ಜೈಪುರ ಹೈಕೋರ್ಟ್‌ಗೆ ಸರ್ಜಿ ಸಲ್ಲಿಸಿ ಈ ಬಗ್ಗೆ ಮರು ತನಿಖೆಗೆ ಆಗ್ರಹಿಸಿದ್ದರು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಜೈಪುರ ಹೈಕೋರ್ಟ್ (Highcourt), ಈ ಬಗ್ಗೆ ಉನ್ನತ ಅಧಿಕಾರಿಗಳಿಂದ ಮರುತನಿಖೆಗೆ ಆದೇಶಿಸಿತ್ತು. 

ಕಣ್ಣರಿಯದಿದ್ದರೆ ಕರುಳರಿಯದೇ... 3 ವರ್ಷದ ನಂತರ ವೇಷ ಮರೆಸಿ ಬಂದ ಮಗ

ಅನೈತಿಕ ಸಂಬಂಧ ಹೊಂದಿದ್ದ ಬಾಲಕನ ತಾಯಿ , ಚಿಕ್ಕಪ್ಪ 

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಯಾನದ ಸರ್ಕಲ್ ಆಫೀಸರ್ ನಿತಿರಾಜ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು ಮತ್ತು ಎಂಟು ವರ್ಷದ ಮಗುವಿನ ಹಂತಕರನ್ನು ಹಿಡಿಯಲು ಮತ್ತೊಮ್ಮೆ ತನಿಖೆಯನ್ನು ಆರಂಭಿಸಲಾಯಿತು. ಈ ಪ್ರಕರಣದ ವಿಚಾರಣೆ ಬೆನ್ನು ಬಿದ್ದ ಪೊಲೀಸರಿಗೆ ಮಗುವಿನ ಚಿಕ್ಕಪ್ಪ ಕೃಷ್ಣಕಾಂತ್ ಮತ್ತು ತಾಯಿ ಹೇಮಲತಾ ಅಕ್ರಮ ಸಂಬಂಧ ಹೊಂದಿರುವುದು ತಿಳಿದು ಬಂದಿದೆ. ಹೀಗಾಗಿ ಅವರಿಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅನಂತ್ ಅಂಬಾನಿ ಫಿಟ್ನೆಸ್ ಟ್ರೈನರ್: ಒಂದು ಸೆಷನ್‌ಗೆ ಇವರು ಮಾಡೋ ಚಾರ್ಜ್‌ ಎಷ್ಟು ಗೊತ್ತಾ..?

ಪ್ರಾರಂಭದಲ್ಲಿ ಈ ಕೊಲೆ ಆರೋಪವನ್ನು ನಿರಾಕರಿಸಿದ ಈ ದುರುಳರು, ಪೊಲೀಸರು ಲಾಠಿ ಬಿಸಿ ಮಾಡಿದಾಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ವೇಳೆ ಬಾಲಕ ನಮ್ಮನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ್ದ. ಹೀಗಾಗಿ ತಮ್ಮ ಈ ಅನೈತಿಕ ಸಂಬಂಧ ಬೇರೆ ಯಾರಿಗಾದರೂ  ತಿಳಿಯುವ ಭಯದ ಹಿನ್ನೆಲೆಯಲ್ಲಿ ಬಾಲಕನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾರೆ.  ನಂತರ ಇಬ್ಬರು ಸೇರಿ ಬಾಲಕನ ಶವವನ್ನು ಹೊಲವೊಂದರಲ್ಲಿ ಹೂತು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗ ಪೊಲೀಸರು ಬಾಲಕನ ಅಮ್ಮ ಹಾಗೂ ಚಿಕ್ಕಪನನ್ನು ಕಸ್ಟಡಿಗೆ ಪಡೆದಿದ್ದಾರೆ. 

ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು

click me!