ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಂವಿಧಾನದ ಆಶಯ ಮತ್ತು ಸ್ಫೂರ್ತಿಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಿಇಸಿ ಏಕಪಕ್ಷೀಯ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಬೆನ್ನಲ್ಲೇ ವಿಪಕ್ಷ ಈ ಆರೋಪ ಮಾಡಿದೆ.
ಜೊತೆಗೆ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಗಂಭೀರ ಆರೋಪ ಕೇಳಿಬಂದಿರುವ ಹೊತ್ತಿನಲ್ಲೇ, ದೇಶದ ಚುನಾವಣಾ ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ಮರುಸ್ಥಾಪಿಸುವ ಸುವರ್ಣ ಅವಕಾಶ ಸುಪ್ರೀಂಕೋರ್ಟ್‌ನ ಮುಂದಿದೆ ಎಂದು ಪಕ್ಷ ಹೇಳಿದೆ.
07:09 AM (IST) Oct 06
ಇಎಂಐ ಪಾವತಿ ವಿಳಂಬವಾದರೆ ತಕ್ಷಣವೇ ಸಿಬಿಲ್ ಸ್ಕೋರ್ ಕುಸಿಯಲಿದ್ದು, ಸಾಲ ತೀರಿಸಿದರೆ ಶೀಘ್ರವೇ ಸ್ಕೋರ್ ಸುಧಾರಿಸಲಿದೆ. ಗ್ರಾಹಕರು ದಂಡ ಮತ್ತು ಸ್ಕೋರ್ ಕುಸಿತ ತಪ್ಪಿಸಲು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದು ಅತ್ಯಗತ್ಯ.