ವಾಷಿಂಗ್ಟನ್: ಅಮೆರಿಕದ ಒಹಿಯೋದಲ್ಲಿರುವ ಹಿಂದೂ ದೇಗುಲವೊಂದರ ಮೇಲೆ ಕಿಡಿಗೇಡಿಗಳು ಅರ್ಚಕರು, ಭಕ್ತರು ಇದ್ದಾಗಲೇ ದಾಳಿ ನಡೆಸಿದ್ದಾರೆ. ಕಿಟಕಿಗಳ ಮೇಲೆ ಇಟ್ಟಿಗೆಗಳನ್ನು ಎಸೆದಿದ್ದು, ದೇಗುಲಕ್ಕೆ ಹಾನಿಯಾಗಿದೆ. ಅಮೆರಿಕದಲ್ಲಿರುವ ಭಾರತೀಯರು ನವರಾತ್ರಿ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಓಹಿಯೋದ ಗ್ರೇಟರ್‌ಕ್ಟಿವ್ ಲ್ಯಾಂಡ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಮಂದಿರದ ಮೇಲೆ ಈ ದಾಳಿಯಾಗಿದೆ. ಇದರಿಂದ ದೇಗುಲದ ಕಿಟಕಿಗಳಿಗೆ ಹಾನಿಯಾಗಿದೆ ಎಂದು ಹಿಂದೂ ಅಮೆರಿಕನ್ ಫೌಂಡೇಶನ್ ಮತ್ತು ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ ತಿಳಿಸಿವೆ.

05:47 AM (IST) Oct 04